Vijayapura; ಕಿರುಕುಳ ತಾಳಲಾರದೆ ಮದ್ಯ ವ್ಯಸನಿ ಮಗನನ್ನು ಹತ್ಯೆಗೈದ ತಂದೆ
Team Udayavani, Jul 10, 2023, 3:30 PM IST
ವಿಜಯಪುರ: ದಿನನಿತ್ಯ ನೀಡುತ್ತಿದ್ದ ಕಿರುಕುಳದಿಂದ ರೋಸಿಹೋದ ತಂದೆಯೊಬ್ಬ ಮದ್ಯ ವ್ಯಸನಿ ಮಗನನ್ನು ಹತ್ಯೆ ಮಾಡಿರುವ ಘಟನೆ ನಾಗಠಾಣ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಮದ್ಯ ವ್ಯಸನಿ ಮುತ್ತಪ್ಪ ಮಸಳಿ (38) ಎಂದು ಗುರುತಿಸಲಾಗಿದೆ. ಮಗನನ್ನೇ ಹತ್ಯೆ ಮಾಡಿದ ಆರೋಪದಲ್ಲಿ ಪೊಲೀಸರು ಮೃತನ ತಂದೆ ಬಸಪ್ಪ ಮಸಳಿ ಯನ್ನು ವಶಕ್ಕೆ ಪಡೆದಿದ್ದಾರೆ.
ವಿಪರೀತ ಮದ್ಯ ವ್ಯಸನಿಯಾಗಿದ್ದ ಮುತ್ತಪ್ಪ ಮದ್ಯ ಸೇವನೆಗಾಗಿ ಮನೆಯಲ್ಲಿದ್ದ ಸಾಮಾನು, ಜಮೀನಿನಲ್ಲಿನ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಇದರಿಂದಾಗಿ ಕಂಗಾಲಾಗಿದ್ದ ತಂದೆ ಬಸಪ್ಪ ತನ್ನ ಮಗನಿಗೆ ಮದ್ಯ ಸೇವನೆ ಬಿಡುವಂತೆ ಬುದ್ದಿ ಮಾತು ಹೇಳುತ್ತಲೇ ಇದ್ದರು. ಆದರೂ ಮುತ್ತಪ್ಪ ಕುಡಿತದ ಚಟ ಬಿಟ್ಟಿರಲಿಲ್ಲ. ಸೋಮವಾರ ಕೂಡ ಮದ್ಯ ಸೇವಿಸಿ ಬಂದಿದ್ದ ಮಗ ಮುತ್ತಪ್ಪನ ವರ್ತನೆಯಿಂದ ರೋಷಿಹೋದ ತಂದೆ ಬಸಪ್ಪ ಬಲಬಾದ ವಸ್ತುವಿನಿಂದ ತಲೆಗೆ ಹೊಡೆದ ಪರಿಣಾಮ ಮುತ್ತಪ್ಪ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಸುದ್ದಿ ತಿಳಿದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಎಲ್ಲ ಪಹಣಿಯಲ್ಲೂ ವಕ್ಫ್ ಹೆಸರು ತೆಗೆಯಿರಿ: ಮುಲ್ಲಾ ಅಸೋಸಿಯೇಷನ್ ಆಗ್ರಹ
Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು
Waqf Notice: ರಾಜ್ಯ ಸರ್ಕಾರದ ಹುನ್ನಾರದಿಂದ ರೈತರಿಗೆ ಈ ಬಾರಿ ಕರಾಳ ದೀಪಾವಳಿ!
Waqf Notice: ರಾಜ್ಯ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ಮಂಡಿಸುವೆವು: ಸಂಸದ ಗೋವಿಂದ ಕಾರಜೋಳ
Vijayapura: ಬಿಜೆಪಿ ವಕ್ಫ್ ತಂಡದಿಂದ ಜಿಗಜಿಣಗಿ, ಯತ್ನಾಳ್ ದೂರ
MUST WATCH
ಹೊಸ ಸೇರ್ಪಡೆ
IPL Retention: ತಂಡದಲ್ಲಿ ಉಳಿದವರು ಯಾರು, ಅಳಿದವರು ಯಾರು.. ಇಲ್ಲಿದೆ ಫುಲ್ ಲಿಸ್ಟ್
Congress Guarantee: ಗ್ಯಾರಂಟಿಗಳ ಹಂತ, ಹಂತವಾಗಿ ನಿಲ್ಲಿಸಲು ಡಿಸಿಎಂ ಪೀಠಿಕೆ: ಎಚ್‌ಡಿಕೆ
Deepavali: ದೀಪ ಬೆಳಕಿನ ಸಂಕೇತ-ಸಂತಸ ಆತ್ಮವಿಶ್ವಾಸ ಹೆಚ್ಚಿಸುವ ದೀಪಾವಳಿ
Deepavali Festival: ಬೆಳಕು ಕತ್ತಲೆಯ ವೈರಿ…ದೀಪ ಹಚ್ಚುವ ಮಹತ್ವ ಅರಿಯೋಣ
Deepavali: ಬೆಳಕು ಅರಿವಿನ ಮೂಲ-ಸಕಲ ಜೀವಿಗಳಿಗೂ ಬೇಕು ಬೆಳಕು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.