Vijayapura; ಹಿಂದೂಗಳ ಮತ ಬೇಕಿದ್ರೆ ಸೋನಿಯಾ ಅಯೋಧ್ಯೆಗೆ ಬರ್ತಾರೆ: ಯತ್ನಾಳ್
ವಿಜಯೇಂದ್ರ ವಿರುದ್ಧ ಮತ್ತೆ ಕಿಡಿ
Team Udayavani, Dec 22, 2023, 8:09 PM IST
ವಿಜಯಪುರ: ಅಯೋಧ್ಯಾ ಶ್ರೀರಾಮಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಹಿಂದೂಗಳ ಬಗ್ಗೆ ನೈಜ ಕಾಳಜಿ ಹಾಗೂ ಹಿಂದೂಗಳ ಮತಗಳು ಬೇಕಿದ್ದರೆ ಆಗಮಿಸುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ವೈರಿಗಳನ್ನು ಸ್ವಾಗತಿಸಿ, ಗೌರವಿಸುವ ಗುಣಧರ್ಮವಿದೆ. ಹೀಗಾಗಿ ಸೋನಿಯಾ ಅವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಅಯೋಧ್ಯಾ ಶ್ರೀರಾಮಮಂದಿರ ಟ್ರಸ್ಟ್ ಪ್ರಮುಖರು ಅ ಧಿಕೃತವಾಗಿ ಆಮಂತ್ರಣ ನೀಡಿ ಆಹ್ವಾನಿಸಿದ್ದಾರೆ. ಬರೋದು, ಬಿಡೋದು ಅವರಿಗೆ ಸೇರಿದ್ದು ಎಂದರು.
ಸೋನಿಯಾ ಅವರಿಗೆ ಹಿಂದೂಗಳ ಬಗ್ಗೆ ನೈಜ ಕಾಳಜಿ ಇದ್ದಲ್ಲಿ, ಹಿಂದೂಗಳ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬೇಕಿದ್ದರೆ ಶ್ರೀರಾಮ ಮಂದಿರ ಲೋಕಾರ್ಪಣೆಗೆ ಬರಲಿ. ಕೇವಲ ಮುಸ್ಲಿಮರ ಮತಗಳು ಬೇಕಿದ್ದರೆ ಮೆಕ್ಕಾ-ಮದಿನಾಕ್ಕೆ ಹೋಗಲಿ ಎಂದು ಕುಟುಕಿದರು.
ಇದೇ ರಾಮ ಮಂದಿರ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಕಪಿಲ್ ಸಿಬಲ್ ಸೇರಿದಂತೆ 27 ವಕೀಲರನ್ನು ಇರಿಸಿ ಸುಪ್ರೀಂಕೋರ್ಟ್‌ನಲ್ಲಿ ಅಯೋಧ್ಯೆಯ ಶ್ರೀರಾಮ ಕಲ್ಪಿತ ದೇವರು. ಅವನ ಅಸ್ತಿತ್ವಕ್ಕೆ ದಾಖಲೆಗಳೇ ಇಲ್ಲ ಎಂದು ವಾದ ಮಂಡಿಸಿದ್ದರು. ಇಷ್ಟೆಲ್ಲದರ ಮಧ್ಯೆಯೂ ಕಾಂಗ್ರೆಸ್ ಮುಖಂಡರನ್ನು ಶ್ರೀರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಭಾರತೀಯ ಸಂಸ್ಕೃತಿಯ ಪ್ರತೀಕ ಎಂದರು.
ಕಾಶ್ಮೀರದ 370ನೇ ವಿಧಿ ರದ್ದಾಗಬೇಕೆಂಬ ಆರ್‌ಎಸ್‌ಎಸ್, ಬಿಜೆಪಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಲಾಲ್‌ಕೃಷ್ಣ ಅಡ್ವಾಣಿ, ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ ಸಿಂಘಾಲ್ ಅವರ ಸಂಕಲ್ಪ ಈಡೇರಿದೆ. ಶ್ರೀರಾಮಮಂದಿರ ಸೇರಿದಂತೆ ಇಂತಹ ಸಮಸ್ಯೆಗಳ ಇತ್ಯರ್ಥಕ್ಕೆ ಈ ನಾಯಕರು ದೇಶಾದ್ಯಂತ ರಥಯಾತ್ರೆ ಮಾಡಿದ್ದರು. ರಾಷ್ಟ್ರ ನಾಯಕರ ಕನಸುಗಳನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸಲು ಮುಂದಾಗಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣವಾಗಿದ್ದು, ಕಾಶ್ಮೀರದ 370ನೇ ವಿ ಧಿ ಮೂಲಕ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದಾರೆ ಎಂದರು.
ಹಿಂದೂಗಳ ಭಾವನೆಯಂತೆ ಕಾಶಿ ಮತ್ತು ಮಥುರಾದಲ್ಲಿ ಸಮೀûಾ ಕಾರ್ಯದಲ್ಲಿ ಹಿಂದೂ ದೇವಾಲಯಗಳು ಅಸ್ತಿತ್ವದಲ್ಲಿದ್ದ ಚಿಹ್ನೆ-ಕುರುಹುಗಳು ಸಿಕ್ಕಿವೆ. ಈ ಸಾಕ್ಷಿಗಳ ಅಧಾರದಲ್ಲಿ ಭವಿಷ್ಯದ ದಿನಗಳಲ್ಲಿ ಕಾಶಿ-ಮಥುರಾ ದೇವಸ್ಥಾನಗಳೂ ಹಿಂದೂಗಳ ಸ್ವಾಧೀನಕ್ಕೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಹಿಂದೂಗಳ ಸಂಕಲ್ಪದಂತೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗಿದೆ. 370ನೇ ವಿ ಧಿಯಂತೆ ವಿಶೇಷ ಸ್ಥಾನಮಾನ ರದ್ದಾಗಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಕಾಶಿ ಮತ್ತು ಮಥುರಾ ದೇವಸ್ಥಾನಗಳು ಭವಿಷ್ಯದ ದಿನಗಳಲ್ಲಿ ಹಿಂದೂಗಳಿಗೆ ಮುಕ್ತವಾಗಲಿವೆ ಎಂದರು.
ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತದ ಪರಿಣಾಮ ಭಾರತ ಈಗ ವಿಶ್ವದ ಐದನೇ ಬಲಿಷ್ಠ ಆರ್ಥಿಕ ಶಕ್ತಿಯ ರಾಷ್ಟ್ರವಾಗಿ ರೂಪುಗೊಂಡಿದೆ. ದೇಶದಲ್ಲಿ ಗುಲಾಮಿ ಸಂಕೇತವಿರುವ ಸುಮಾರು ಮೂರುವರೆ ಲಕ್ಷ ದೇವಸ್ಥಾನಗಳನ್ನ ಹಿಂದೂಗಳಿಗೆ ಮುಕ್ತ ಮಾಡುವ ಆರ್‌ಎಸ್‌ಎಸ್-ವಿಎಚ್‌ಪಿ ಸಂಕಲ್ಪಕ್ಕೆ ದೇಶದ ಜನತೆಯ ಬೆಂಬಲವಿದೆ ಎಂದರು.
ವಿಜಯೇಂದ್ರ ವಿರುದ್ಧ ಮತ್ತೆ ಕಿಡಿ: ವೈಯಕ್ತಿಕ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದ ನಾನು, ಕೆಲ ಸಚಿವರು-ಸಂಸದರನ್ನು ಭೇಟಿ ಮಾಡಿದ್ದೇನೆ. ಆದರೂ ಈ ಭೇಟಿ ವೇಳೆ ಅಪಮಾನಿತವಾಗಿ ಬಂದಿದ್ದೇನೆ ಎಂದು ಬಿಂಬಿಸಿ ಮಾಧ್ಯಮಗಳು ವರದಿ ಮಾಡಿವೆ ಎಂದು ಯತ್ನಾಳ ಕಿಡಿಕಾರಿದರು.
ನಾನು ಯಾರ ಭೇಟಿಗಾಗಿಯೂ ದೆಹಲಿಗೆ ಹೋಗಿರಲಿಲ್ಲ. ಯಾರ ಭೇಟಿಗೂ ಸಮಯ ಕೇಳಿರಲಿಲ್ಲ, ಯಾರ ಸಮಯ ಕೇಳಿ ಹೋಗುವ ಅವಶ್ಯಕತೆಯೂ ನನಗಿಲ್ಲ. ಅತ್ಯಂತ ಅಪಮಾನಕಾರಿಯಾಗಿ, ದೈನ್ಯನಾಗಿಯೂ ಹಿಂದಿರುಗಿಲ್ಲ. ಕಾರ್ಖಾನೆ ಸ್ಥಾಪನೆ ವಿಷಯಕ್ಕೆ ಸಂಬಂಧಿಸಿ ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗಿದ್ದೆ. ಆಗ ಕರ್ನಾಟಕದವರಾದ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಕೆಲ ಸಂಸದರನ್ನು ಭೇಟಿ ಮಾಡಿದ್ದೆ ಎಂದು ವಿವರಿಸಿದರು.
ಕೆಲವು ಮಾಧ್ಯಮಗಳು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಹೊಗಳುವ ಕೆಲಸ ಮಾಡುತ್ತಿವೆ. ಅವರು ರಾಜ್ಯಾಧ್ಯಕ್ಷರಾದ ಕಾರಣ ಲೋಕಸಭೆಯ 28 ಸ್ಥಾನಗಳಿರುವ ಕರ್ನಾಟಕದಲ್ಲಿ 35 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಬೇಕಾದರೂ ಹೇಳಲಿ ಎಂದು ಗೇಲಿ ಮಾಡಿದರು.
ಕರ್ನಾಟಕ ಸೇರಿದಂತೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಲಂಬಿಸಿಯೇ ಲೋಕಸಭೆ ಚುನಾವಣೆ ನಡೆಯಲಿದೆ. ಇದರಲ್ಲಿ ಯಾರ ಅಪ್ಪನದೂ ಏನೂ ಇಲ್ಲ. ಕರ್ನಾಟಕದಲ್ಲಿ ಪ್ರಧಾನಿ ಮೋದಿ ಹೊರತಾಗಿ ಇತರೆ ಯಾರ ಮುಖ ನೋಡಿಯೂ ಮತದಾರರು ಬಿಜೆಪಿ ಪಕ್ಷ ಬೆಂಬಲಿಸಲ್ಲ ಎಂದರು.
ಭ್ರಷ್ಟಾಚಾರ, ಹೊಂದಾಣಿಕೆ ರಾಜಕೀಯ ಹಾಗೂ ವಂಶ ಪಾರಂಪರ್ಯ ರಾಜಕಾರಣ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ಆದರೆ ಈ ವಿಷಯದಲ್ಲಿ ನನ್ನನ್ನು ಪಕ್ಷದ ಯಾವ ನಾಯಕರೂ ಬೈದಿಲ್ಲ, ಗಂಭೀರ ಎಚ್ಚರಿಕೆ ನೀಡಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ರೇಣುಕಾಚಾರ್ಯ ವಿರುದ್ಧ ಹರಿಹಾಯ್ದರು.
ಹಾದಿ ಬೀದಿಯಲ್ಲಿರುವವರ ಹೇಳಿಕೆಗೆ ಉತ್ತರಿಸುವಷ್ಟು ಕೆಳಹಂತದ ರಾಜಕೀಯ ನಾಯಕ ನಾನಲ್ಲ. ಘನತೆ ಹೊಂದಿರುವ ನಾಯಕರ ಬಗ್ಗೆ ಮಾತ್ರ ಕೇಳಿ. ಇಂಥವರ ಬಗ್ಗೆ ಹೇಳುವುದನ್ನು ಈಗಾಗಲೇ ಹೇಳಿದ್ದೇನೆ. ಪದೇ ಪದೇ ಅಂಥವರ ಹೆಸರನ್ನು ನನ್ನೆದುರು ತೆಗೆಯಬೇಡಿ ಎಂದರು.
ಯಾವನೋ ಒಬ್ಬ ನನ್ನನ್ನು ಹುಚ್ಚ ಎನ್ನುತ್ತಾನೆ, ಮತ್ತೊಬ್ಬ ಉತ್ತರ ಕುಮಾರ ಎನ್ನುತ್ತಾನೆ. ಮತ್ತೆ ಅದೇ ವ್ಯಕ್ತಿ ಯತ್ನಾಳ ನಮ್ಮ ಪಕ್ಷದ ಆಸ್ತಿ ಎನ್ನುತ್ತಾನೆ. ಇಂಥವರ ಹೇಳಿಕೆಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.