Vijayapura: ತಿರುಪತಿ ಲಡ್ಡು ಪಾವಿತ್ರ‍್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್
Team Udayavani, Sep 21, 2024, 3:48 PM IST
ವಿಜಯಪುರ: ತಿರುಪತಿ ತಿಮ್ಮಪ್ಪನ ಲಡ್ಡು ಪಾವಿತ್ರ‍್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು. ಹಿಂದೂ ದೇವಸ್ಥಾನಗಳ ಆಡಳಿತ ಮಂಡಳಿಗಳಲ್ಲಿ ಹಿಂದೂಗಳು ಮಾತ್ರ ಇರಬೇಕು. ಸನಾತನ ಧರ್ಮ ರಕ್ಷಣಾ ಬೋರ್ಡ್ ರಚನೆ ಮಾಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸನಾತನ ಹಿಂದೂ ಧರ್ಮದ ಪಾವಿತ್ರ‍್ಯತೆ ಹಾಳು ಮಾಡುವ ಕೆಲಸವಾಗುತ್ತಿದೆ. ಕಾಂಗ್ರೆಸ್, ವೈಎಸ್‌ಆರ್ ಕಾಂಗ್ರೆಸ್ ಸೇರಿದಂತೆ ಅನೇಕರು ಈ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಿಎಂ ಜಗನ್ ಕ್ರಿಶ್ಚಿಯನ್. ಅವರ ಚಿಕ್ಕಪ್ಪ ತಿರುಪತಿ ದೇವಸ್ಥಾನದ ಮಂಡಳಿಯಲ್ಲಿ ಅಧ್ಯಕ್ಷರಾಗಿದ್ದ. ಅವನೂ ಕ್ರಿಶ್ಚಿಯನ್. ಹಿಂದೂ ಹೆಸರಲ್ಲಿ ಇವರೆಲ್ಲ ಇದನ್ನು ಮಾಡಿದ್ದಾರೆ. ಹೀಗಾಗಿ ಹಿಂದೂ ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ ಹಿಂದೂಗಳೇ ಅಧ್ಯಕ್ಷರಿರಬೇಕು. ಹಿಂದೂಯೇತರರನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
ಅಲ್ಲದೇ, ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಮಿಶ್ರಣ ಮಾಡಿದ್ದು ಹಿಂದೂ ಸಮಾಜಕ್ಕೆ ಆಘಾತ ಆಗಿದೆ. ಕೋಟ್ಯಾಂತರ ಹಿಂದೂಗಳ ಬಾಯಲ್ಲಿ ಹಂದಿ ಮತ್ತು ದನದ ಕೊಬ್ಬು ಬಿದ್ದಿದೆ. ಇದನ್ನು ಇಷ್ಟಕ್ಕೆ ಬಿಡಬಾರದು. ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಇದನ್ನು ರಾಜಕೀಯಕ್ಕೆ ಬಳಕೆ ಮಾಡದೆ, ನಿಜವಾದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಎಷ್ಟು ದಿನಗಳಿಂದ ಕೊಬ್ಬು ಮಿಶ್ರಣ ಆಗುತ್ತಿದೆ ಮತ್ತು ಅಪವಿತ್ರ ಕಾರ್ಯ ನಡೆಯುತ್ತಿತ್ತು ಎಂಬುವರ ಬಗ್ಗೆ ತನಿಖೆಯಾಗಬೇಕು. ಮುಂದೆ ಯಾರೇ ಸಿಎಂ, ಪ್ರಧಾನಿಯಾಗಲಿ ಇಂತಹ ಕಾರ್ಯವನ್ನು ಮಾಡುವಂತ ಧೈರ್ಯಯನ್ನು ಯಾರೂ ತೋರುವಂತಾಗಬಾರದು ಎಂದು ಹೇಳಿದರು.
ಟಿಪ್ಪು, ಔರಂಗಜೇಬ್ ಕುರಿತ ಹೇಳಿಕೆಗೆ ವಿಷಾದವಿಲ್ಲ: ಯತ್ನಾಳ್
ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಕುರಿತ ನನ್ನ ಹೇಳಿಕೆಗೆ ನಾನು ಬದ್ಧ. ಇದಕ್ಕೆಲ್ಲ ವಿಷಾದ ವ್ಯಕ್ತಪಡಿಸುವುದಿಲ್ಲ. ಕ್ಷಮೆಯನ್ನೂ ಕೇಳುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದರು.
ಮುಸ್ಲಿಂ ಮತ್ತು ಅಹಿಂದ ನಾಯಕರು ತಮ್ಮ ಹೇಳಿಕೆಯನ್ನು ಖಂಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಅಂಬೇಡ್ಕರ್ ಅವರ ಬಗ್ಗೆ ಸರಿಯಾಗಿ ಓದಿದ್ದರೆ, ಸ್ವಾಭಿಮಾನ ಅಂಬೇಡ್ಕರ್ ಬಗ್ಗೆ ಗೌರವವಿದ್ದರೆ, ಇವರು ಟಿಪ್ಪು ಮತ್ತು ಆತನ ಜೀವನದ ಬೆನ್ನು ಹತ್ತಲ್ಲ. ಈ-ಹಿಂದ, ಅ-ಹಿಂದ ನಾಯಕರ ಕೆಲಸ ಏನಿದೆ?. ಟಿಪ್ಪು ಸುಲ್ತಾನ್, ಔರಂಗಜೇಬ್ ಬಗ್ಗೆ ನಾನು ಎಷ್ಟೇ ಬೈಯ್ದರೂ, ಅದಕ್ಕೆ ನಾನು ಕ್ಷಮೆ ಬೇಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಆದರೆ, ಪಾಪ ಪೊಲೀಸರ ಮೇಲೆ ಒತ್ತಡ ಹಾಕಿದ ಕಾರಣಕ್ಕೆ ಅವರು ನನ್ನ ಮೇಲೆ ಸುಮೋಟೋ ಕೇಸ್ ಹಾಕಿದ್ದಾರೆ. ಅದು ಪೊಲೀಸರ ತಪ್ಪಲ್ಲ. ತಪ್ಪೇನಿದ್ದರೂ ಅಲ್ಲಿಯ ಸಚಿವರದ್ದು. ಇಲ್ಲೊಬ್ಬ ಸಚಿವ ಕಳೆದ ಲೋಕಸಭಾ ಚುನಾವಣೆಯಲ್ಲಿ ತನ್ನ ಮಗಳನ್ನು ಅಲ್ಲಿ ನಿಲ್ಲಿಸಿದ್ದ. ಅಲ್ಲಿ ಅವಮಾನಕಾರಿಯಾಗಿ ಸೋಲುಂಡ ಕಾರಣ ಒತ್ತಡದಿಂದ ನನ್ನ ಮೇಲೆ ಪೊಲೀಸರ ಮೂಲಕ ಕೇಸ್ ಹಾಕಿಸಿದ್ದಾರೆ ಎಂದು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.