ಸರ್ಕಾರಿ ಕಚೇರಿ ಸೂಚನಾ ಫಲಕದಲ್ಲಿ ಸಕಾಲ ಮಾಹಿತಿ ಕಡ್ದಾಯ

ಶಿಷ್ಟಾಚಾರ ಪಾಲನೆಗೆ ತಹಶೀಲ್ದಾರ್‌ ಮೋಹನಕುಮಾರಿ ಸೂಚನೆ

Team Udayavani, Jan 29, 2020, 3:09 PM IST

29-January-20

ವಿಜಯಪುರ: ಸಕಾಲ ಅ ಧಿನಿಯಮ 2011ರ ಪ್ರಕಾರ ಸರಿಯಾದ ಸಮಯಕ್ಕೆ ಮಾಹಿತಿ ಪಡೆದುಕೊಳ್ಳುವುದು ಒಂದು ಹಕ್ಕಾಗಿದ್ದು ಅದರಿಂದ ಸಾರ್ವಜನಿಕರಿಗೆ ಸಕಾಲ ಯೋಜನೆ ಬಗ್ಗೆ ಮಾಹಿತಿ ನೀಡಲು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಕಾಲಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಡ್ಡಾಯವಾಗಿ ಹಾಕಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ| ಔದ್ರಾಮ್‌ ಹೇಳಿದರು.

ಜಿಲ್ಲಾಡಳಿತ ಮತ್ತು ಜಿಪಂ ಸಂಯುಕ್ತಾಶ್ರಯದಲ್ಲಿ ಜಿಪಂ ಸಭಾಭವನದಲ್ಲಿ ನಡೆದ ಸಕಾಲ ಯೋಜನೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ, ಸಾರ್ವಜನಿಕರ ಹಣ ಮತ್ತು ಸಮಯದ ಉಳಿತಾಯ, ಜವಾಬ್ದಾರಿ ಸೇವೆಗಳ ತ್ವರಿತ ವಿತರಣೆಗಾಗಿ ಸಕಾಲ ಯೋಜನೆಯನ್ನು ಜಾರಿ ಮಾಡಲಾಗಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿ ಅದನ್ನು ನಮೂದಿಸಬೇಕು ಎಂದರು.

ಸಕಾಲ ಒಟ್ಟು ಮೂರು ಹಂತದಲ್ಲಿ ಕಾರ್ಯ ನಿರ್ವಹಿಸುತ್ತದೆ, ಹೆಸರಿಸಲಾದ ಅಧಿಕಾರಿ, ಸಕ್ಷಮ ಅಧಿಕಾರಿ ನಂತರದಲ್ಲಿ ಮೆಲ್ಮನವಿಯನ್ನು ಹಾಕಬಹುದು. ಸರಿಯಾದ ಸಮಯಕ್ಕೆ ಮಾಹಿತಿ ನೀಡದಿದ್ದಲ್ಲಿ ಹೆಸರಿಸಲಾದ ಅ ಧಿಕಾರಿಯನ್ನು ದಂಡಿಸಲಾಗಿತ್ತದೆ. ಸಕಾಲ ಯೋಜನೆಯಲ್ಲಿ ಜಿಲ್ಲೆಯಲ್ಲಿ ಯಾವ ಅಧಿಕಾರಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೋ ಅವರಿಗೆ ಜಿಲ್ಲಮಟ್ಟದಲ್ಲಿ ಗುರುತಿಸಿ ಜಿಲ್ಲಾಧಿಕಾರಿಗಳಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

2020-21ನೇ ಸಾಲಿನ ಜನಗಣತಿ ಕಾರ್ಯವು 2 ಹಂತದಲ್ಲಿ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಸಂಬಂದಪಟ್ಟ ಅಧಿಕಾರಿಗಳು ಸಿಎಂಎಂಎಸ್‌ (ಸೆನ್ಸ್‌ಸ ಮ್ಯಾನೆಜ್‌ಮೆಂಟ್‌ ಮಾನಿಟರಿ ಸಿಸ್ಟಂ) ಪೋರ್ಟಲ್‌ ನಲ್ಲಿ ಕ್ಷೇತ್ರವಾರು ವಿಭಾಗ ಮತ್ತು ಉಪ ವಿಭಾಗಗಳನ್ನುರಚಿಸಿ ಮಾಹಿತಿ ನೀಡಬೇಕು ಎಂದು ಸಾಂಖ್ಯೀಕ ಅಧಿಕಾರಿ ಗಂಗಾಧರ ಕುಲಕರ್ಣಿ ಹೇಳಿದರು.

ಜನಗಣತಿ ಪೂರ್ವಭಾವಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜನಗಣತಿಗೆ ಸಂಬಂಧಿ ಸಿದಂತೆ 3,389 ಗಣತಿದಾರರು ಹಾಗೂ 564 ಗಣತಿದಾರರ ಮೆಲ್ವಿಚಾರಕರಾಗಿ ನೇಮಕ ಮಾಡಿಕೊಂಡಿದ್ದು ಪ್ರತಿಯೊಬ್ಬರು ತಮ್ಮ ಕಾರ್ಯವ್ಯಾಪ್ತಿ ಹಳೆಯ ಜನಗಣತಿಯನ್ನು ಆಧರಿಸಿ ಹೊಸ ವಿಭಾಗಗಳ ಸೆರ್ಪಡೆ ಮಾಡಿ ಸಂಪೂರ್ಣ ಮಾಹಿತಿ ನೀಡಬೇಕು ಎಂದರು.

ಇದೇ ಮೊದಲ ಬಾರಿಗೆ ಜನಗಣತಿಯಲ್ಲಿ ಮೊಬೈಲ್‌ ಆ್ಯಪ್‌ ತಾಂತ್ರಿಕತೆ ಬಳಸಲಾಗುತ್ತಿದೆ. ಜೊತೆಗೆ ಒಎಂಆರ್‌ ಹಾಳೆಯ ಪಟ್ಟಿ ನೀಡಲಾಗುತ್ತದೆ. ದೆಹಲಿ, ಪಟ್ನಾ ಹಾಗೂ ಬೆಂಗಳೂರಿನ ಕಚೇರಿಗಳಲ್ಲಿ ಮಾಹಿತಿ ಸಂಗ್ರಹವಾಗಲಿದ್ದು ನೆಟ್‌ವರ್ಕ್‌ ಇಲ್ಲದ ಸ್ಥಳದಲ್ಲಿಯೂ ಮೊಬೈಲ್‌ ಆ್ಯಪ್‌ನಲ್ಲಿ ಗಣತಿ ಕಾರ್ಯ ಮಾಡಬಹುದಾಗಿದೆ. ತದ ನಂತರ ನೆಟ್‌ವರ್ಕ್‌ ಬಂದತಕ್ಷಣ ನೇರವಾಗಿ ಅವುಗಳು ಮೂರು ಕಚೇರಿಗಳ ಸ್ಟೋರ್‌ ಆಗಲಿವೆ ಎಂದರು.

ಜನಗಣತಿಯಿಂದ ವೈಯಕ್ತಿಕ ಮಾಹಿತಿಗಳಿಗೆ ಯಾವುದೇ ಧಕ್ಕೆಯಾಗದೆ ಭದ್ರವಾಗಿ ಇರುವಂತೆ ತಾಂತ್ರಿಕತೆಯನ್ನು ಬಲಪಡಿಸಲಾಗಿದೆ. ಜನಗಣತಿಯಲ್ಲಿ ಪಾರದರ್ಶಕತೆ ಹಾಗೂ ವಸ್ತುನಿಷ್ಠ ಅಂಕಿ ಅಂಶ ಒದಗಿಸಬೇಕು. ಜಿಲ್ಲಾಧಿಕಾರಿಗಳು ಜಿಲ್ಲಾ ಪ್ರಧಾನ ಜನಗಣತಿ ಅಧಿಕಾರಿಗಳಾಗಿದ್ದು ಅವರ ಮಾರ್ಗದರ್ಶನದಲ್ಲಿ ಜನಗಣತಿ ಅಧ್ಯಯನ ಅಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಡಿಐಒ ಹಾಗೂ ಎನ್‌ ಐಸಿ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ತಹಶೀಲ್ದಾರ್‌ ಮೋಹನಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳಿಗೆ ರಾಜ್ಯದ ಹಾಗೂ ರಾಷ್ಟ್ರದ ಗಣ್ಯವ್ಯಕ್ತಿಗಳು ಆಗಮಿಸಿದಾಗ ಜಿಲ್ಲೆಯ ಗಡಿಭಾಗದಲ್ಲಿ ಸ್ವಾಗತಿಸುವುದು. ಆಮಂತ್ರಣ ಪತ್ರಿಕೆಗಳಲ್ಲಿ ಮತ್ತು ಸಭಾಂಗಣದಲ್ಲಿ ಸರ್ಕಾರಿ ಶಿಷ್ಠಾಚಾರದಂತೆ ಗೌರವಿಸುವುದು, ಎಲ್ಲ ಇಲಾಖೆ ಕರ್ತವ್ಯವಾಗಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮದಲ್ಲಿ ಸರ್ಕಾರಿ ಶಿಷ್ಠಾಚಾರ ಕಡ್ಡಾಯವಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಟಾಪ್ ನ್ಯೂಸ್

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

Madikeri: ಅರೆಭಾಷಿಕ ಗೌಡರ ಅವಹೇಳನ: ಕ್ರಮಕ್ಕೆ ಆಗ್ರಹ

Madikeri: ಅರೆಭಾಷಿಕ ಗೌಡರ ಅವಹೇಳನ: ಕ್ರಮಕ್ಕೆ ಆಗ್ರಹ

Aranthodu ಕಲ್ಲುಗುಂಡಿ: ಮಟ್ಕಾ ಅಡ್ಡೆಗೆ ಪೊಲೀಸರ ದಾಳಿ;  ಓರ್ವನ ಬಂಧನ

Aranthodu ಕಲ್ಲುಗುಂಡಿ: ಮಟ್ಕಾ ಅಡ್ಡೆಗೆ ಪೊಲೀಸರ ದಾಳಿ; ಓರ್ವನ ಬಂಧನ

Karkala: ಎಂಬಿಎ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹ*ತ್ಯೆ

Karkala: ಎಂಬಿಎ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹ*ತ್ಯೆ

Ankola: 10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Ankola: 10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Brahmavar: ಆನ್‌ಲೈನ್‌ ವ್ಯವಹಾರ ಹೆಸರಲ್ಲಿ ಲಕ್ಷಾಂತರ ರೂ. ಮೋಸ

Brahmavar: ಆನ್‌ಲೈನ್‌ ವ್ಯವಹಾರ ಹೆಸರಲ್ಲಿ ಲಕ್ಷಾಂತರ ರೂ. ಮೋಸ

Udupi ಗಾಂಜಾ ಮಾರಾಟ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ

Udupi ಗಾಂಜಾ ಮಾರಾಟ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್

Vijayapura: ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ಅಮಾನುಷ ಹಲ್ಲೆ; ಇಬ್ಬರ ಬಂಧನ

Vijayapura: ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ಅಮಾನುಷ ಹಲ್ಲೆ; ಇಬ್ಬರ ಬಂಧನ

Vijayapura: ತಂದೆ ಸಹಿ ನಕಲು ಮಾಡಿದ ಬಿವೈವಿ ಒಪ್ಪಲ್ಲ; ಯತ್ನಾಳ್‌

Vijayapura: ತಂದೆ ಸಹಿ ನಕಲು ಮಾಡಿದ ಬಿವೈವಿ ಒಪ್ಪಲ್ಲ; ಯತ್ನಾಳ್‌

BSN-Gowda-yatnal

ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್‌

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

1-telanga

America; ಗುಂಡು ಹಾರಿಸಿ ತೆಲಂಗಾಣದ ಯುವಕನ ಹ*ತ್ಯೆ

Kasaragod ಬದ್ಧತೆ, ಸೇವಾ ಮನೋಭಾವದಿಂದ ಯಶಸ್ಸು: ಎಡನೀರು ಸ್ವಾಮೀಜಿ

Kasaragod ಬದ್ಧತೆ, ಸೇವಾ ಮನೋಭಾವದಿಂದ ಯಶಸ್ಸು: ಎಡನೀರು ಸ್ವಾಮೀಜಿ

amitab bacchan

Amitabh Bachchan; ಫ್ಲ್ಯಾಟ್‌ ಮಾರಿ 4 ವರ್ಷದಲ್ಲಿ 52 ಕೋಟಿ ರೂ. ಲಾಭ ಗಳಿಸಿದ ಬಿಗ್‌ ಬಿ

Madikeri: ಅರೆಭಾಷಿಕ ಗೌಡರ ಅವಹೇಳನ: ಕ್ರಮಕ್ಕೆ ಆಗ್ರಹ

Madikeri: ಅರೆಭಾಷಿಕ ಗೌಡರ ಅವಹೇಳನ: ಕ್ರಮಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.