Vijayapura; ಮಂಗಳಮುಖಿಯರಿಂದಲೇ ಮಂಗಳಮುಖಿಯ ವಿವಸ್ತ್ರಗೊಳಿಸಿ ಹಲ್ಲೆ
ಸಾರ್ವಜನಿಕವಾಗಿ ಮಂಗಳಮುಖಿಯರಿಂದ ವಿಕೃತಿ!! , ಗುಪ್ತಾಂಗಕ್ಕೆ ಖಾರದ ಪುಡಿ!!!
Team Udayavani, Jul 31, 2024, 2:34 PM IST
ವಿಜಯಪುರ : ಮಂಗಳಮುಖಿಯರೇ ಮಂಗಳಮುಖಿಯನ್ನು ಹಾಡಹಗಲೇ ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.
ನಗರದ ಕೇಂದ್ರ ಬಸ್ ನಿಲ್ದಾಣದ ಪರಿಸರದಲ್ಲಿ ಪ್ಯಾಂಟ್ ಶರ್ಟ್ ಧರಿಸಿದ್ದ ಮಂಗಳಮುಖಿ ಹಣ ಪಡೆಯುತ್ತಿದ್ದಾಗ ಆಕೆಯನ್ನು ಬೆನ್ನಟ್ಟಿ ಅಟ್ಟಾಡಿಸಿದ ಮಂಗಳಮುಖಿಯರ ಗುಂಪು, ಅಮಾನವೀಯ ರೀತಿಯಲ್ಲಿ ದೌರ್ಜನ್ಯ ಎಸಗಿದೆ. ಬೆತ್ತಲೆಗೊಳಿಸಿ, ಮರ್ಮಾಂಗಕ್ಕೆ ಖಾರದ ಪುಡಿ ಎರಚಿ ಮನಬಂದಂತೆ ಥಳಿಸಿದ್ದಾರೆ.
ಥಳಿತಕ್ಕೊಳಗಾದುದ್ದು ಮಂಗಳಮುಖಿಯಲ್ಲ. ಆದರೂ ಮಂಗಳಮುಖಿಯರ ರೀತಿಯಲ್ಲಿ ವರ್ತಿಸಿ ನಗರದಲ್ಲಿ ಹಣ ಎತ್ತುವಳಿ ನಡೆಸಿದ್ದಾಳೆ ಎಂಬುದು ಹಲ್ಲೆ ನಡೆಸಿರುವ ಮಂಗಳಮುಖಿಯರ ವಾದ. ಇಡೀ ದೌರ್ಜನ್ಯ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.ಥಳಿತಕ್ಕೊಳಗಾದ ಮಂಗಳಮುಖಿ ಅಂಗಲಾಚಿ ಬೇಡಿಕೊಂಡರೂ ಸಹ ಬಿಡದ ಮಂಗಳಮುಖಿಯರು ಗುಂಪು ಸಂಪೂರ್ಣ ಬೆತ್ತಲೆಗೊಳಿಸಿ ಮನಬಂದಂತೆ ಹಲ್ಲೆ ಮಾಡುತ್ತಿದ್ದರೂ ಸಾರ್ವಜನಿಕರು ನೆರವಿಗೆ ಬಾರದೇ, ಘಟನೆಯನ್ನು ನೋಡುತ್ತ ನಿಂತಿರುವುದು ಕಂಡುಬಂದಿದೆ.ಇದಲ್ಲದೇ ದೌರ್ಜನ್ಯ ಎಸಗಿದ ಗುಂಪಿನಲ್ಲಿದ್ದ ಕೆಲ ಮಂಗಳಮುಖಿಯರು ಸಾರ್ವಜನಿಕವಾಗಿ ತಮ್ಮ ಸೀರೆ ಎತ್ತಿ ಖಾಸಗಿ ಅಂಗ ತೋರಿಸಿ ಅಸಹ್ಯಕರ ರೀತಿಯಲ್ಲಿ ವಿಕೃತಿ ಮೆರೆದಿದ್ದಾರೆ.
ಈ ಅಮಾನವೀಯ ಘಟನೆ ಎರಡು ವಾರಗಳ ಹಿಂದೆಯೇ ನಡೆದಿದೆ ಎನ್ನಲಾಗಿದೆ. ಇಡೀ ಘಟನೆಯ ವಿಡಿಯೋ ವೈರಲ್ ಆಗಿದ್ದರೂ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅನುದಾನಿತ ಪ್ರೌಢಶಾಲೆಗೆ ನೇಮಕಾತಿ ಮಾಡಿಕೊಳ್ಳಬೇಡಿ;ಮಾರ್ಗಸೂಚಿ/ಸುತ್ತೋಲೆ ಬಿಡುಗಡೆವರೆಗೆ ತಡೆ
Karnataka Govt., ಅಗ್ನಿಶಾಮಕ ಇಲಾಖೆ 68 ಚಾಲಕರ ಹುದ್ದೆ ಅಂತಿಮ
Lakkundi ಇತಿಹಾಸ, ಪರಂಪರೆ,ಗತವೈಭವವನ್ನು ದೇಶಕ್ಕೆ ಪರಿಚಯಿಸಲು ಶೀಘ್ರ ಉತ್ಖನನ
USA ಪ್ರವಾಸ ವೈಯಕ್ತಿಕ; ಊಹಾಪೋಹಗಳಿಗೆ ಕಿವಿಗೊಡಬೇಡಿ: ಡಿ.ಕೆ.ಶಿವಕುಮಾರ್ ಮನವಿ
Congress ಒಳಗೊಳಗೆ ಸಿಎಂ ಕುರ್ಚಿಗಾಗಿ ನಾಯಕರು ಸಾಲುಗಟ್ಟಿ ನಿಂತಿದ್ದಾರೆ: ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.