Vijayapura; ಈದ್ ಮೆರವಣಿಗೆಯಲ್ಲಿ ಯತ್ನಾಳ ಭಾವಚಿತ್ರದ ಬ್ಯಾನರ್ ಗೆ ಹಾನಿ
Team Udayavani, Sep 28, 2023, 5:10 PM IST
ವಿಜಯಪುರ: ಮಹಮ್ಮದ್ ಪೈಗಂಬರ ಅವರ ಜನ್ಮದಿನದ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಹಸಿರು ವರ್ಣದ ಧ್ವಜ ಹಿಡಿದ ಕೋಲಿನಿಂದ ಸ್ಥಳೀಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಭಾವಚಿತ್ರವಿದ್ದ ಬ್ಯಾನರ್ ಹರಿಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಗುರುವಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ನಿಮಿತ್ತ ನಗರದಲ್ಲಿ ಇಸ್ಲಾಂ ಧರ್ಮೀಯರು ಮೆರವಣಿಗೆ ನಡೆಸಿದ್ದರು. ಮೆರವಣಿಗೆ ನಗರದ ಶಿವಾಜಿ ವೃತ್ತಕ್ಕೆ ಆಗಮಿಸಿದಾಗ, ಸ್ಥಳದಲ್ಲಿ ಅಳವಡಿಸಿದ್ದ ಗಣೇಶ ಹಬ್ಬದ ಶುಭಾಶಯ ಕೋರಿ ಶಾಸಕ ಬಸನಗೌಡ ಪಾಟೀಲ, ಅವರ ಪುತ್ರ ರಾಮನಗೌಡ ಪಾಟೀಲ ಅವರ ಭಾವಚಿತ್ರ ಸಹಿತ ಬ್ಯಾನರನ್ನು ಹರಿಯಲಾಗಿದೆ.
ಮೆರವಣಿಗೆಯಲ್ಲಿದ್ದ ಕಿಡಿಗೇಡಿ ಯುವಕನೊಬ್ಬ ದೊಡ್ಡ ಗಾತ್ರದಲ್ಲಿದ್ದ ಹಸಿರು ಬಣ್ಣದ ಧ್ವಜವನ್ನು ಯತ್ನಾಳ ಭಾವಚಿತ್ರದ ಬ್ಯಾನರ್ ಗೆ ಮರೆಯಾಗಿರಿಸಿ, ಕೋಲಿನಿಂದ ಚುಚ್ಚಿ ಬ್ಯಾನರ್ ಹರಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹಸಿರು ಧ್ವಜ ಹಿಡಿದು ಬ್ಯಾನರ್ ಹರಿದು ಹಾಕಿದನ್ನು ಚಿತ್ರೀಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದ್ದಿ ತಿಳಿಯುತ್ತಲೇ ಗಾಂಧಿಚೌಕ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:World Cup ; ಹೈದರಾಬಾದ್ ನಲ್ಲಿ ‘ಅನಿರೀಕ್ಷಿತ’ ಸ್ವಾಗತ ಕಂಡು ಪಾಕ್ ತಂಡ ಫುಲ್ ಖುಷ್
ಸ್ಥಳದಲ್ಲಿ ಬೂದಿಮುಚ್ಚಿದ ಪರಿಸ್ಥಿತಿ ಇರುವ ಮಾಹಿತಿ ಅರಿತ ಎಸ್ಪಿ ಋಷಿಕೇಶ ಭಗವಾನ ನೇತೃತ್ವದಲ್ಲಿ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಜಿಲ್ಲಾ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಿ ಪರಿಸ್ಥಿತಿ ನಿಭಾಯಿಸುವಲ್ಲಿ ಮುಂದಾಗಿದ್ದಾರೆ.
ಈ ಮಧ್ಯೆ ಯತ್ನಾಳ ಬೆಂಬಲಿಗರು ಸ್ಥಳಕ್ಕೆ ಧಾವಿಸಿದ್ದು, ಉದ್ಧೇಶಪೂರ್ವಕವಾಗಿ ಶಾಸಕ ಯತ್ನಾಳ ಅವರ ಭಾವಚಿತ್ರ ಇರುವ ಗಣೇಶ ಹಬ್ಬದ ಬ್ಯಾನರ್ ಹರಿಯಲಾಗಿದೆ. ಹೀಗಾಗಿ ಕೃತ್ಯಕ್ಕೆ ಕಾರಣವಾದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಪರಿಸ್ಥಿತಿಯ ಗಂಭೀರತೆ ಅರಿತಿರುವ ಪೊಲೀಸರು, ಬ್ಯಾನರ್ ಹರಿಯುವ ಸಂದರ್ಭದಲ್ಲಿ ಚಿತ್ರೀಕರಿಸಲಾಗಿರುವ ವಿಡಿಯೋ ಹಾಗೂ ಸಿಸಿ ಕೆಮೆರಾ ಚಿತ್ರೀಕರಣ ಪರಿಶೀಲನೆಗೆ ಮುಂದಾಗಿದ್ದಾರೆ. ಅಲ್ಲದೇ ತನಿಖೆಯ ಬಳಿಕ ಕೃತ್ಯಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.