ಹಲವೆಡೆ ಸಂಪೂರ್ಣಬಂದ್‌ಸ್ಥಿತಿ

Team Udayavani, Mar 15, 2020, 1:34 PM IST

15-March-14

ವಿಜಯಪುರ: ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದ್ದ ವಿಜಯಪುರ ರೈಲ್ವೆ ನಿಲ್ದಾಣ.

ವಿಜಯಪುರ: ಅಪಾಯಕಾರಿ ಹಾಗೂ ಸಾಂಕ್ರಾಮಿಕವಾಗಿರುವ ಕೋವಿಡ್‌-19 ಕೊರೊನಾ ವೈರಸ್‌ ಹರಡದಂತೆ ತುರ್ತು ಮುನ್ನೆಚ್ಚರಿಕೆಗಾಗಿ ಸರ್ಕಾರ ಮುಂದಿನ ಒಂದು ವಾರ ಕಾಲ ಎಲ್ಲ ಸಭೆ-ಸಮಾರಂಭ, ಉದ್ಯಮಗಳನ್ನು ಸ್ಥಗಿತಗೊಳಿಸಿ ಅದೇಶಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಮೊದಲ ದಿನ ಶನಿವಾರ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಹೊರತುಪಡಿಸಿ ಎಲ್ಲ ಪ್ರಮುಖ ಪಟ್ಟಣಗಳಲ್ಲಿ ಸಂಪೂರ್ಣ ಬಂದ್‌ ಚಿತ್ರಣ ಕಂಡು ಬಂತು. ಹೋಟೆಲ್‌, ಚಿತ್ರಮಂದಿರಗಳು, ವಿವಿಧ ವಾಣಿಜ್ಯ ಉದ್ಯಮಗಳು ಬಂದ್‌ ಆಗಿದ್ದವು. ಆದರೆ ಬಸ್‌ ಹಾಗೂ ನಗರ ಸಂಚಾರ ಎಂದಿನಂತಿದ್ದರೂ, ಎರಡನೇ ಶನಿವಾರ ಆಗಿದ್ದರಿಂದ ಸರ್ಕಾರಿ ಕಚೇರಿಗಳು ತೆರೆದಿರಲಿಲ್ಲ. ಆದರೆ ಅಲ್ಲಲ್ಲಿ ಕೊರೊನಾ ಕರ್ತವ್ಯಕ್ಕಾಗಿ ತೆರೆದಿದ್ದ ಕಚೇರಿಗಳಲ್ಲಿ ಸಾರ್ವಜನಿಕರ ಭೇಟಿ ವಿರಳವಾಗಿತ್ತು.

ಸರ್ಕಾರದ ಆದೇಶದ ಹೊರತಾಗಿಯೂ ಜಿಲ್ಲೆಯ ಹಲವೆಡೆ ಕೆಲವು ಶಾಲೆಗಳು 6ನೇ ತರಗತಿಗಿಂತ ಕೆಳಗಿನ ವರ್ಗಗಳ ಮಕ್ಕಳಿಗೆ ಪರೀಕ್ಷೆ ನಡೆಸಿದ್ದು ವರದಿಯಾಗಿವೆ. ಜಿಲ್ಲಾ ಕೇಂದ್ರವಾದ ವಿಜಯಪುರ ನಗರದಲ್ಲಿ ಬಸ್‌ ಸಂಚಾರ ಎಂದಿನಂತೆ ಕಂಡು ಬಂದಿದ್ದು, ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನದಂತೆಯೇ ಇತ್ತು. ದೂರದ ಊರುಗಳಿಗೆ ಹೋಗುವವರ ಸಂಖ್ಯೆ ವಿರಳವಾಗಿದ್ದರೂ, ಜಿಲ್ಲೆಯ ವ್ಯಾಪ್ತಿಯ ಪ್ರಯಾಣದ ಓಡಾಟ ಸಾಮಾನ್ಯವಾಗಿತ್ತು.

ನಗರದಲ್ಲಿ ನಗರ ಸಾರಿಗೆ ಹಾಗೂ ಆಟೋಗಳ ಓಡಾಟವೂ ಸಾಮಾನ್ಯವಾಗಿದ್ದ ಕಾರಣ ಜನಜೀವನಕ್ಕೆ ಯಾವುದೇ ವ್ಯತ್ಯಯವಾಗದೇ ಸುಗಮವಾಗಿದ್ದು ಕಂಡು ಬಂತು. ಆದರೆ ನಗರದ ರೈಲು ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರ ಸಂಖ್ಯೆ ಕಂಡು ಬರಲಿಲ್ಲ. ನಿರ್ದಿಷ್ಟ ರೈಲುಗಳ ಪ್ರಯಾಣಕ್ಕೆ ಸಿದ್ಧವಾಗಿದ್ದ ಜನರು ಮಾತ್ರ ಕಂಡು ಬಂದರು. ಉಳಿದಂತೆ ರೈಲ್ವೆ ಪ್ಲಾಟ್‌ಫಾರ್ಮ್ ಗಳಲ್ಲಿ ಜನರ ಸಂಖ್ಯೆ ವಿರಳವಾಗಿತ್ತು.

ರೈಲ್ವೆ ನಿಲ್ದಾಣ ಹಾಗೂ ಸುತ್ತಲಿನ ಅಂಗಡಿಗಳು ಎಂದಿನಂತೆಯೇ ವಹಿವಾಟು ನಡೆಸಿದವು.ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮಾ. 14ರಿಂದ 1ರಿಂದ 6ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸದೆ ಮಕ್ಕಳನ್ನು ಪಾಸ್‌ ಮಾಡಿ, ಶಾಲೆಗಳಿಗೆ ರಜೆ ನೀಡಲು ಆದೇಶಿಸಿದ್ದರು. ಆದರೆ ಸದರಿ ಆದೇಶ ಶುಕ್ರವಾರ ತಡರಾತ್ರಿ ಹೊರಟ ಕಾರಣ ಕೆಲವು ಶಾಲೆಗಳಿಗೆ ಎಂದಿನಂತೆ ಎಲ್ಲ ವರ್ಗದ ಮಕ್ಕಳು ಆಗಮಿಸಿದ್ದರು. ಆದರೆ ಬಹುತೇಕ ಶಾಲೆಗಳು 6ನೇ ತರಗತಿಗಿಂತ ಕಡಿಮೆ ವರ್ಗದ ಮಕ್ಕಳನ್ನು ಪ್ರಾರ್ಥನೆ ಬಳಿಕ ಮರಳಿ ಮನೆಗೆ ಕಳಿಸಿದವು. ಆದರೆ ಕೆಲವು ಶಾಲೆಗಳ ಆಡಳಿತ ಮಂಡಳಿಗಳು ಸರ್ಕಾರದ ಆದೇಶ ಧಿಕ್ಕರಿಸಿ ಶನಿವಾರ ಬೆಳಗ್ಗೆ ಶಾಲಾ ವಾಹನಗಳನ್ನು ಕಳಿಸಿ, 1-6ನೇ ತರಗತಿಯೊಳಗಿನ ಮಕ್ಕಳನ್ನು ಶಾಲೆಗೆ ಕರೆಸಿ ಪರೀಕ್ಷೆ ನಡೆಸಿದ್ದೂ ಕಂಡು ಬಂತು.

ಇನ್ನು ನಗರದ ಬಹುತೇಕ ಎಲ್ಲ ಹೋಟೆಲ್‌ಗ‌ಳು ನಿತ್ಯದಂತೆಯೇ ವಹಿವಾಟು ನಡೆಸಿದರೂ ಗ್ರಾಹಕರ ಕೊರತೆ ಎದುರಿಸಿದವು. ಆದರೆ ಜಿಲ್ಲೆಯ ಬಸವನಬಾಗೇವಾಡಿ, ಇಂಡಿ, ಹೂವಿನಹಿಪ್ಪರಗಿ ಸೇರಿದಂತೆ ಬಹುತೇಕ ಎಲ್ಲ ಪಟ್ಟಣಗಳಲ್ಲಿ ಪೊಲೀಸರ ಸಹಾಯದಿಂದ ಸ್ಥಳೀಯ ಆಡಳಿತಗಳು ಹೋಟೆಲ್‌, ಖಾನಾವಳಿ, ಬೀದಿ ಬದಿ ತಿನಿಸು ಮಾರಾಟಗಾರರು, ಬೇಕರಿ ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ವಾಣಿಜ್ಯ ವಹಿವಾಟನ್ನು ಮುಚ್ಚಿಸಿದರು. ಆದರೆ ಮುದ್ದೇಬಿಹಾಳ, ಆಲಮೇಲ ಸೇರಿದಂತೆ ಇತರೆ ಕೆಲವು ಪಟ್ಟಣಗಳಲ್ಲಿ ಜನಜೀವನ ಎಂದಿನಂತೆ ಕಂಡು ಬಂತು. ಹೀಗಾಗಿ ಸರ್ಕಾರದ ಫ‌ರ್ಮಾನು ಯಾವುದೇ ರೀತಿಯಲ್ಲೂ ಜನರ ಮೇಲೆ ಪರಿಣಾಮ ಬೀರಲಿಲ್ಲ.

ಚಿತ್ರಮಂದಿರಗಳು, ಬಾರ್‌, ಸೂಪರ್‌ ಮಾರ್ಕೇಟ್‌ನಂತ ವಹಿವಾಟು ಸಂಪೂರ್ಣ ಸ್ಥಗಿತವಾಗಿತ್ತು. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಒಂದು ವಾರ ಪ್ರದರ್ಶನ ರದ್ದು ಮಾಡಿದ್ದಾಗಿ ಚಿತ್ರಮಂದಿಗಳು ಪ್ರವೇಶ ದ್ವಾರದಲ್ಲೇ ಫ‌ಲಕ ಅಳವಡಿಸಿ ಚಿತ್ರ ಅಭಿಮಾನಿಗಳಿಗೆ ಮಾಹಿತಿ ನೀಡುವ ಕೆಲಸ ಮಾಡಿದವು. ಎರಡನೇ ಶನಿವಾರ ರಜೆ ಇರುವ ಕಾರಣ ಬ್ಯಾಂಕ್‌ಗಳು ಬಾಗಿಲು ತೆರೆಯಲಿಲ್ಲ. ಪೆಟ್ರೋಲ್‌ ಬಂಕ್‌ಗಳು ನಿತ್ಯದಂತೆ ಗ್ರಾಹಕರಿಗೆ ಸೇವೆ ನೀಡಿದವು.

ವಿಜಯಪುರ ನಗರ ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿದ್ದು ಶನಿವಾರ ಪ್ರವೇಶ ಮುಕ್ತವಾಗಿದ್ದರೂ ಐತಿಹಾಸಿಕ ಜಾಗತಿಕ ಅಚ್ಚರಿಗಳಲ್ಲಿ ಒಂದೆನಿಸಿದ ಗೋಲಗುಮ್ಮಟ, ಇಬ್ರಾಹಿಂ ರೋಜಾದಂತ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಇಲ್ಲದೇ ಭಣಗುಡುತ್ತಿತ್ತು. ಇನ್ನು ಐತಿಹಾಸಿಕ ಸ್ಮಾರಕಗಳಾದ ಗಗನಮಹಲ್‌, ಬಾರಾಕಮಾನ್‌, ಕಂದಕ ಪ್ರದೇಶ ಸೇರಿದಂತೆ ವಿವಿಧ ಉದ್ಯಾನವನದಲ್ಲಿ ನಿತ್ಯವೂ ಸಾವಿರಾರು ಜನರು ಆಹ್ಲಾದಕರ ವಾತಾರಣದಿಂದಾಗಿ ಹುಲ್ಲು ಹಾಸಿನ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಶನಿವಾರ ಐತಿಹಾಸಿಕ ಸ್ಮಾರಕಗಳ ಉದ್ಯಾನವನಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

Government will not turn a blind eye if public is inconvenienced: CM Siddaramaiah

Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.