Vijaypur: ಕರ್ತವ್ಯ ಲೋಪ ಡಿಡಿಪಿಐ ನಾಗೂರ ಮತ್ತೆ ಸಸ್ಪೆಂಡ್
ಫೆ.1 ರಂದು ಅವ್ಯವಹಾರ ಆರೋಪದಲ್ಲಿ ಸಸ್ಪೆಂಡ್ ಆಗಿದ್ದರು... ಕುರ್ಚಿಗಾಗಿ ಕಿತ್ತಾಟ ಮಾಡಿದ್ದರು
Team Udayavani, Apr 16, 2024, 12:01 AM IST
ವಿಜಯಪುರ : ಕರ್ತವ್ಯ ಲೋಪ ಆರೋಪ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ವಿಜುಯಪುರ ಉಪ ನಿರ್ದೇಶಕ ಎನ್.ಎಚ್.ನಾಗೂರು ಸೇವೆಯಿಂದ ಅಮಾನತ್ತು ಆಗಿದ್ದಾರೆ.
ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಧಿನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರ ಇವರು ಡಿಡಿಪಿಐ ಹುದ್ದೆಯಿಂದ ಎನ್.ಎಚ್.ನಾಗೂರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ವಲಯದ ಅಪರ ಆಯುಕ್ತರು ಇಲಾಖೆಯ ಮೇಲಾಧಿಕಾರಿಗಳಿಗೆ ಮಾಡಿದ ಶಿಫಾರಸ್ಸಿನ ಮೇಲೆ ನಾಗೂರ ಅವರನ್ನು ಡಿಡಿಪಿಐ ಹುದ್ದೆಯಿಂದ ಅಮಾನತ್ತು ಮಾಡಲಾಗಿದೆ.
ಎಸ್.ಎಸ್.ಎಲ್.ಸಿ. ಪರೀಕ್ಷೆ ವೇಳೆ ಸಿಸಿ ಕೆಮೆರಾ ದೃಷ್ಯಾವಳಿ ಪರಿಶೀಲನೆ ಮಾಡಿಲ್ಲ, ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಜನ ಜಂಗುಳಿ ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ. ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳನ್ನು ತಪಾಸಣೆ ಮಾಡದೇ ಪರೀಕ್ಷಾ ಕೇಂದ್ರದೊಳಗೆ ಬಿಡಲಾಗಿದೆ ಎಂಬ ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
ಇದಲ್ಲದೇ ಪರೀಕ್ಷಾ ಕೇಂದ್ರದ ಶಾಲಾ ಶಿಕ್ಷಕರನ್ನೇ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನಾಗಿ ಸ್ಥಾನಿಕ ಜಾಗೃತ ದಳ ಆಧಿಕಾರಿಗಳನ್ನಾಗಿ ನೇಮಕ ಮಾಡಿರುವ ಆರೋಪ ಸಾಬೀತಾಗಿದ್ದು, ಶಿಸ್ತು ಕ್ರಮ ಬಾಕಿ ಇರಿಸಿ ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ವಿವರಿಸಲಾಗಿದೆ.
ಅಮಾನತಾಗಿರುವ ಎನ್.ಎಚ್.ನಾಗೂರ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡಬಾರದು ಸಸ್ಪೆಂಡ್ ಆದೇಶದಲ್ಲಿ ಸೂಚಿಸಲಾಗಿದೆ.
ಕೆಲವೇ ಫೆಬ್ರವರಿ 1 ರಂದು ಇದೇ ಡಿಡಿಪಿಐ ಹುದ್ದೆಗೆ ಬಡ್ತಿ ಪಡೆದರೂ ನಾಗೂರ ಅವರು ಕೆಳ ಹಂತದ ಅಧಿಕಾರಿಯಾಗಿದ್ದಾಗ ಮಾಡಿದ ಆರ್ಥಿಕ ದುರ್ಬಳಕೆ ಆರೋಪದಲ್ಲಿ ಸಸ್ಪೆಂಡ್ ಆಗಿದ್ದರು. ಇದರ ವಿರುದ್ಧ ಕೆಎಟಿ ನ್ಯಾಯಾಲದಿಂದ ತಮ್ಮ ಸಸ್ಪೆಂಡ್‍ಗೆ ತಡೆಯಾಜ್ಞೆ ತಂದಿದ್ದರು.
ಸಸ್ಪೆಂಡ್ ಆದ ತಮ್ಮ ಹುದ್ದೆಯಲ್ಲಿದ್ದ ಪ್ರಭಾರಿ ಡಿಡಿಪಿಐ ಅವರಿಗೆ ಕುರ್ಚಿ ಬಿಟ್ಟುಕೊಡುವಂತೆ ಫೆ.9 ರಂದು ಡಿಡಿಪಿಐ ಕಛೇರಿಗೆ ತೆರಳಿ ಪ್ರಭಾರಿ ಡಿಡಿಪಿಐ ಆಗಿದ್ದ ಉಮಾದೇವಿ ಅವರೊಂದಿಗೆ ರಂಪಾಟ ಮಾಡಿಕೊಂಡು ನಾಗೂರ ಸುದ್ದಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.