ಕಳಪೆ ರಸ್ತೆ ಕಾಮಗಾರಿಗೆ ಗ್ರಾಮಸ್ಥರ ಆಕ್ರೋಶ
Team Udayavani, Feb 1, 2022, 4:09 PM IST
ಚಡಚಣ: ಚಡಚಣದಿಂದ ಉಮರಜ ಗ್ರಾಮದವರೆಗಿನ ಸುಮಾರು 17 ಕಿ.ಮೀ. ರಸ್ತೆ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ನಿವರಿ ಗ್ರಾಮದ ಮುಖಂಡ ಹಾಗೂ ನ್ಯಾಯವಾದಿ ಜಗದೀಶ ಕಾಂಬಳೆ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಚಡಚಣದಿಂದ ನಿವರಗಿ, ಗೋವಿಂದಪುರ ಉಮರಜ ಗ್ರಾಮಕ್ಕೆ ಹೋಗುವ ಸುಮರು 17 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟು ವರ್ಷಗಳೆ ಕಳೆಯುತ್ತ ಬಂದಿದೆ. ಅದರಲ್ಲಿ 2021-22ನೇ ಸಾಲಿನ ಲೆಕ್ಕ ಶಿರ್ಷಿಕೆ ಅಡಿ ಜಿಲ್ಲಾ ಮುಖ್ಯ ರಸ್ತೆಗಳ ನಿರ್ವಹಣೆ ನೆಪದಲ್ಲಿ ರಸ್ತೆ ಪ್ಯಾಚ್ ವರ್ಕ್ ಎಂಬ ಹೆಸರಿನಲ್ಲಿ ಕಳಪೆ ಕಾಮಗಾರಿ ಮಾಡಿದ್ದಾರೆ. ಇದನ್ನು ಕಂಡು ಕಾಣದಂತೆ ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವರ್ತನೆ ನೋಡಿದಾಗ ಇದರಲ್ಲಿ ಅವರದೂ ಪಾಲವಿದೆ ಎಂಭ ಭಾವನೆ ವ್ಯಕ್ತವಾಗುತ್ತಿದೆ.
ಜಿಲ್ಲಾ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಕಾಮಗಾರಿ ಅವಲೋಕಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಂಡು ರಸ್ತೆ ಮರು ಡಾಂಬರೀಕರಣವಾಗಬೇಕು ಎಂದ ಅವರು, ಇಲ್ಲದೇ ಹೋದಲ್ಲಿ ಹೋರಾಟ ಅನಿವಾರ್ಯ ಎಂದರು.
ಗ್ರಾಪಂ ಮಾಜಿ ಸದಸ್ಯ ಆರ್.ಎಸ್. ಕಾಂಬಳೆ, ಬಿ.ಎಂ. ಕಾಂಬಳೆ, ಪ್ರಶಾಂತ ಸರ್ಜಾ, ಎ.ವಿ. ಕಾಂಬಳೆ, ಸರ್ವೇಶ ಕಾಂಬಳೆ, ವಿ.ಡಿ. ಕಾಂಬಳೆ, ರಮೇಶ ಕಾಂಬಳೆ, ಆರ್.ಆರ್. ಕಾಂಬಳೆ, ಸಚಿನ ವಾಘೊ¾àರೆ, ಶ್ರೀಕಾಂತ ಬೋರ್ಗಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.