ಮೂಢನಂಬಿಕೆ ಕಿತ್ತೂಗೆಯಲು ಬದುಕು ಸವೆಸಿದ ವೀರೇಶ್ವರರು
Team Udayavani, Feb 19, 2019, 9:56 AM IST
ನಾಲತವಾಡ: ಸಮಾಜದಲ್ಲಿ ಮೂಢನಂಬಿಕೆಯನ್ನು ಬುಡ ಸಮೇತ ಕಿತ್ತೂಗೆಯಬೇಕು. ಸರ್ವ ಸಮಾಜದಲ್ಲಿ ಸಮನ್ವತೆ, ಸಹಕಾರ, ಜಾತಿ ಭೇದ ಭಾವಗಳನ್ನು ತೊಲಗಿಸಿ ಪ್ರಾಣಿ ಬಲಿಗೆ ಕಡಿವಾಣ ಹಾಕುವಲ್ಲಿ ತಮ್ಮ ದಿನ ನಿತ್ಯದ ಕಾಯಕದೊಂದಿಗೆ ಅವಿರತವಾಗಿ ಶ್ರಮಿಸಿದ ನಾಲತವಾಡದ ಶರಣ ವೀರೇಶ್ವರರು ದೇಹ ತೊರೆಯುವವರೆಗೂ ಸಂಕಷ್ಟದ ಬದುಕನ್ನೇ ನಡೆಸಿದವರು. ಬರದ ನಾಡು, ಸಂತ ಶರಣ ಬೀಡು ಎಂಬ ಖ್ಯಾತಿ ಪಡೆದ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಂದಿನ ಲಿಲಾವತಿ ಪಟ್ಟಣ ಎಂದು ಕರೆಸಿಕೊಂಡ ಗ್ರಾಮವು ವೀರೇಶ್ವರರ ಸುಮಾರು 40 ಪವಾಡಗಳಿಂದ ನಲವತ್ತವಾಡ ಎಂದು ಕರೆಸಿಕೊಂಡಿತು.
ಕಂಠಿಮಠದ ದೊಡ್ಡಾರ್ಯ ಹಾಗೂ ರುದ್ರಾಂಬೆ ತಾಯಿಯವರ ಉದರಲ್ಲಿ 1848ರಲ್ಲಿ ಮುದ್ದೇಬಿಹಾಳ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಜನಿಸಿದರು. ಪಟ್ಟಣದ ಹಿರೇಮಠದ ರಾಮಗಿರಿ ನಾಥರನ್ನು ವೀರೇಶ್ವರರು ಗುರುವಾಗಿ ಸ್ವೀಕರಿಸಿ, ಚಿಕ್ಕಂದಿನಿಂದಲೇ ಮನೆ ಸಂಸ್ಕಾರದಂತೆ ಗುರುಸೇವೆ
ಲಿಂಗಪೂಜೆ ಜಂಗಮ ಪೂಜೆಯೊಂದಿಗೆ ಅಂದಿನ ಮುಲ್ಕಿ ಪರೀಕ್ಷೆ ಪಾಸಾದರು. ನಂತರ ಪಕ್ಕದ ಸಿದ್ದಾಪುರ ಗ್ರಾಮದ ಗಾಂವಠಿ ಶಾಲೆಯಲ್ಲಿ ದುಡಿಯುತ್ತ ಬಿದರಕುಂದಿಯ ಗುರುದೇವಿ ತಾಯಿಯವರನ್ನು ಮದುವೆಯಾದರು. ನಂತರ ವೃತ್ತಿ ಬಿಟ್ಟ ಶರಣರು, ಭಿಕ್ಷಾಟನೆ ಮೂಲಕ ದಿನಕ್ಕೆ 5 ಮನೆಗಳಿಗೆ
ಹೋಗಿ ಭಿಕ್ಷೆ ಮಾಡುವ ಕಾಯಕ ಶುರು ಮಾಡಿ, ಬೇಕು ಬೇಡ ಎಂಬಂತೆ ಜಂಗಮಗೆ ಬದುಕು ನಡೆಸಿದರು. ಬದುಕಿನಲ್ಲಿ ಹೆಚ್ಚಿದ ಸಂಕಷ್ಟಗಳಿಗೆ ನೊಂದ ಶರಣರು, ಸಂಸಾರದ ಸುಗಮಕ್ಕೆ ನೇಗಿಲು ಹಿಡಿದರು.
ಸಂಸಾರದ ನಡೆಸುತ್ತಲೇ ಗ್ರಾಮದಲ್ಲಿ ಪ್ಲೇಗ್ ರೋಗ ಹರಡಿದ್ದ ವೇಳೆ ನಿವಾರಣೆಗೆ ಗ್ರಾಮಸ್ಥರು ಗ್ರಾಮ ದೇವತೆಗೆ ಕೋಣ ಬಲಿಗೆ ಮುಂದಾಗಿದ್ದರು. ಇದನ್ನರಿತ ಶರಣ ವೀರೇಶ್ವರರು, ಕೋಣ ಬಲಿ ತಡೆಗೆ ಯತ್ನಿಸಿದರು. ಆದರೆ ಅದು ಫಲ ನೀಡದ ಕಾರಣ ಮನನೊಂದು ಪತ್ನಿಯೊಂದಿಗೆ ಗ್ರಾಮವನ್ನು ತೊರೆದು ಸೊಲ್ಲಾಪುರಕ್ಕೆ ಹೋದರು. ಅಲ್ಲಿಯೂ ಸಹ ಜನರಿಂದ ಅನೇಕ ಬಾರಿ ಹೊಡೆತಗಳಿಂದ ಸಂಕಷ್ಟಕ್ಕಿಡಾದರು. ಅಪಮಾನ ನಿಂದನೆಗೆ
ಒಳಗಾದ ಇವರು ಅಲ್ಲಿಯ ವಾರದ ಮಲ್ಲಪ್ಪ ಎಂಬುವರಿಗೆ ಸಂತಾನ ಭಾಗ್ಯ ನೀಡುವುದರ ಮೂಲಕ ಪವಾಡ ಮಾಡಿದರು.
ನಂತರ ಕೊಡೆಕಲ್ ಗ್ರಾಮದ ಶಿವಯೋಗಿಗಳ ಅಪ್ಪಣೆಯಂತೆ ಪತ್ನಿ ಸಂಗ ತೊರೆದು ಪರಮಾರ್ಥ ಜೀವನ ಪ್ರಾರಂಭಿಸಿದರು. ಇಡೀ ಜೀವನವನ್ನೇ ಸಮಾಜದ ತಿದ್ದುಪಡಿಗಾಗಿ, ಮೂಢನಂಬಿಕೆ ತಡೆಯುವಲ್ಲಿ ನಿರತರಾದ ಶರಣರು 1920ರಲ್ಲಿ ದೇಹ ತೊರೆಯುವ ಮುನ್ನ ಹಾನಗಲ್ಲ ಕುಮಾರ ಸ್ವಾಮಿಗಳ ದರ್ಶನಕ್ಕೆ ಆಸೆ ಹೊಂದಿದರು. ವಿಷಯ ತಿಳಿದ ಹಾನಗಲ್ ಶ್ರೀಗಳು ಎಂದೂ ವಾಹನಗಳಲ್ಲಿ ಪ್ರಯಾಣ ಮಾಡದ ಅವರು ವೀರೇಶ್ವರರನ್ನು
ಕಾಣಲು ರೈಲ್ವೆ ಮೂಲಕ ಬಂದು ವೀರೇಶ್ವರರನ್ನು ಕಂಡರು. ನಂತರ 72 ವರ್ಷಗಳ ಸಾರ್ಥಕ ಬದುಕನ್ನು ಮುಗಿಸಿದ ವೀರೇಶ್ವರ ಶರಣರು ಇಂದಿಗೂ ಸಹ ಹೊರ ರಾಜ್ಯ ಮಹಾರಷ್ಟ್ರದಲ್ಲೂ ಸಹ ಅಲ್ಲಿನ ಜನರು ಇವರನ್ನು ಆರಾಧಿಸುತ್ತಿದ್ದಾರೆ.
ಪಟ್ಟಣದಲ್ಲಿರುವ ಶರಣ ದಂಪತಿಗಳ ದೇವಸ್ಥಾನವನ್ನು ಹಿರಿಯರ ಸಹಾಯದಿಂದ ಹಾಗೂ ವೀರೇಶ್ವರರ ಮಹಾಮನೆಯನ್ನು ಅದ್ಭುತ ರೀತಿಯಲ್ಲಿ ನಿರ್ಮಿಸಲಾಗಿದೆ. ಶರಣರ ದೇವಸ್ಥಾನದ ಗೋಪುರವು ಅನುಭವ ಮಂಟಪದಲ್ಲಿ 120ಕ್ಕೂ ಹೆಚ್ಚು ಶರಣರ ಮೂರ್ತಿಗಳನ್ನು ಕೆತ್ತಲಾಗಿದೆ. ವಿವಿಧ
ದಾರ್ಶನಿಕ ಶರಣ ಮೂರ್ತಿಗಳಿಂದ ನಿರ್ಮಾಣಗೊಂಡ ಮಹಾಮನೆ ನೋಡಲು ಜಿಲ್ಲೆ ಸೇರಿದಂತೆ ಹೊರ ರಾಜ್ಯದಿಂದ ಭಕ್ತರು ಆಗಮಿಸುತ್ತಿರವುದಕ್ಕೆ ನಿಜಕ್ಕೂ ಶರಣರ 40 ಪವಾಡಗಳೇ ಕಾರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.