ಮಳೆಯಾಗದಿದ್ದರೆ ಬೆಳೆಗೆ ಡ್ಯಾಂನಿಂದ ನೀರು
Team Udayavani, Jun 29, 2021, 5:19 PM IST
ಆಲಮಟ್ಟಿ: ಉತ್ತರಕ ರ್ನಾಟಕದ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗಿದ್ದು ಈಗಾಗಲೇ ರೈತರು ಬಿತ್ತನೆ ಮಾಡಿದ್ದಾರೆ. ಮಳೆಗಾಲ ಇನ್ನೂ ಮೂರು ತಿಂಗಳಿದ್ದು ಅಷ್ಟರಲ್ಲಿ ಮಳೆಯಾಗದಿದ್ದರೆ ಅಥವಾ ಶಾಸ್ತ್ರಿ ಜಲಾಶಯದಲ್ಲಿ 123 ಟಿಎಂಸಿ ಅಡಿ ನೀರು ತುಂಬಿದ ನಂತರ ರೈತರಿಗೆ ನೀರು ಕೊಡಲಾಗುವದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.
ಸೋಮವಾರ ಆಲಮಟ್ಟಿಯ ರಾಕ್ ಉದ್ಯಾನದಲ್ಲಿ ಸುದ್ದುಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಮಧ್ಯ ಭಾಗದಲ್ಲಿರುವ ಆಲಮಟ್ಟಿಯಲ್ಲಿ ಜಂಗಲ್ ಸಫಾರಿ ಮಾಡಿದರೆ ಅವಳಿ ಜಿಲ್ಲೆಗಳು ಅಭಿವೃದ್ಧಿಯಾಗಲಿವೆ. ಈಗಾಗಲೇ ಬೆಳಗಾವಿಯಲ್ಲಿ ಜಂಗಲ್ ಸಫಾರಿ ಮಾಡುವ ಮುಂದಾಲೋಚನೆಯಿಂದ ಹುಲಿ, ಸಿಂಹ ಹಾಗೂ ಜಿಂಕೆಗಳನ್ನು ಬಿಡಲಾಗಿದೆ ಎಂದರು.
ಉತ್ತರ ಕರ್ನಾಟದಲ್ಲಿ ಜೋಳ ವಿತರಣೆ ಮಾಡಲು 6.5 ಲಕ್ಷ ಟನ್ ಜೋಳ ಮತ್ತು ದಕ್ಷಿಣ ಭಾಗದಲ್ಲಿ ರಾಗಿ ವಿತರಣೆ ಮಾಡಲು 6.5 ಲಕ್ಷ ಟನ್ ರಾಗಿ ಅವಶ್ಯಕತೆಯಿದೆ. ಇದರಲ್ಲಿ 80 ಸಾವಿರ ಟನ್ ಜೋಳ ಸಂಗ್ರಹವಿದೆ. ಇನ್ನಷ್ಟು ಜೋಳ ಖರೀದಿಗೆ ಬೆಂಬಲ ಬೆಲೆ ನಿಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ನಂತರ ಜೋಳ ಹಾಗೂ ರಾಗಿಯೊಂದಿಗೆ 2 ಕೆಜಿ ಅಕ್ಕಿಯನ್ನು ಪಡಿತರ ವಿತರಣೆಯಲ್ಲಿ ನೀಡುವ ಚಿಂತನೆಯಿದೆ ಎಂದು ಹೇಳಿದರು. ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.