ಶಾಸ್ತ್ರೀ ಜಲಾಶಯದಿಂದ ನದಿಗೆ ನೀರು
Team Udayavani, Mar 27, 2018, 5:27 PM IST
ಆಲಮಟ್ಟಿ: ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯದ 9 ಗೇಟು ಹಾಗೂ ಜಲ ವಿದ್ಯುತ್ ಘಟಕದಿಂದ ಜಲಾಶಯದ ಮುಂಭಾಗಕ್ಕೆ ವ್ಯಾಪಕ ನೀರು ಹರಿದು ಬಿಡುತ್ತಿರುವುದ ರಿಂದ ಈ ಭಾಗದ ಜನತೆಯ ಆತಂಕಕ್ಕೆ ಕಾರಣವಾಗಿದೆ.
ಕಳೆದ ಎರಡು ವರ್ಷದಿಂದ ರಾಜ್ಯದಲ್ಲಿ ಸಮರ್ಪಕ ಮಳೆಯಾಗದಿರುವುದರಿಂದ ನೀರಿಗಾಗಿ ಪರದಾಡುವಂತಾಗಿದೆ. ಇದೆಲ್ಲದರ ಮಧ್ಯೆಯೂ ಜಲಾಶಯದಿಂದ ನೀರನ್ನು ಹೊರಕ್ಕೆ ಬಿಡುವುದರಿಂದ ಜೂನ್ -ಜುಲೈ ತಿಂಗಳ ಅಂದರೆ ಮಳೆಗಾಲದ ಆರಂಭದವರೆಗೂ
ಈ ಭಾಗದ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲವೇ ಎನ್ನುವುದು ಕೂಡ ಯಕ್ಷ ಪ್ರಶ್ನೆಯಾಗಿದೆ.
ಸೋಮವಾರ 519.6 ಮೀ. ಎತ್ತರದ ಜಲಾಶಯದಲ್ಲಿ 509.88 ಮೀ. ಎತ್ತರದಲ್ಲಿ 27.74 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಇದರಲ್ಲಿ ಜಲ ವಿದ್ಯುತ್ ಘಟಕದಿಂದ 2100 ಕ್ಯೂಸೆಕ್, ಗೇಟುಗಳಿಂದ 7063 ಕ್ಯೂಸೆಕ್, ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ 1124 ಕ್ಯೂಸೆಕ್ ಹಾಗೂ ಕೂಡಗಿ ರಾಷ್ಟ್ರೀಯ ಉಷ್ಣ ವಿದ್ಯುತ್ ಘಟಕಕ್ಕೆ 30 ಕ್ಯೂಸೆಕ್ ಸೇರಿ ಒಟ್ಟು 11,377 ಕ್ಯೂಸೆಕ್ ನೀರನ್ನು ಹೊರ
ಬಿಡಲಾಗುತ್ತಿದೆ. ಇನ್ನು ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ 488.61 ಮೀ. ಎತ್ತರದಲ್ಲಿ 19.204 ಟಿಎಂಸಿ ಅಡಿ ನೀರು
ಸಂಗ್ರಹವಿದ್ದು 8136 ಕ್ಯೂಸೆಕ್ ನೀರು ಒಳ ಹರಿವಿದ್ದು ಇದರಲ್ಲಿ ಎನ್‌ಎಲ್‌ಬಿಸಿ ಕಾಲುವೆಗೆ 11,715 ಕ್ಯೂಸೆಕ್, ಎನ್‌ಆರ್‌ಬಿಸಿ ಕಾಲುವೆಗೆ 2800 ಕ್ಯೂಸೆಕ್, ಆರ್‌ಎಲ್ ಐಎಸ್‌ಗೆ 353 ಕ್ಯೂಸೆಕ್, ಎಂಎಲ್‌ಐಎಸ್‌ಗೆ 140 ಕ್ಯೂಸೆಕ್, ಜಿಂದಾಲ್‌ಗೆ 37 ಕ್ಯೂಸೆಕ್, ವಿವಿಧ ಕುಡಿಯುವ ನೀರು ಯೋಜನೆಗೆ 50 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.
ಆಲಮಟ್ಟಿ ಜಲಾಶಯದಲ್ಲಿ ಒಟ್ಟು ಸಂಗ್ರಹವಿರುವ ನೀರಿನಲ್ಲಿ 17.620 ಟಿಎಂಸಿ ಅಡಿ ಜಲಚರಗಳಿಗಾಗಿ ಮೀಸಲಿರುವ ನೀರು. ಅಂದರೆ ಜಲಾಶಯದ ಎತ್ತರದ ಮಟ್ಟ 506.87 ಮೀ. ಸಂಗ್ರಹವಿಟ್ಟುಕೊಂಡು ಜನ- ಜಾನುವಾರುಗಳಿಗೆ ಕುಡಿಯುವ ನೀರನ್ನೂ
ಸಂಗ್ರಹವಿರಿಸಿಕೊಂಡು ಇನ್ನುಳಿದ ನೀರನ್ನು ಬಳಸಿಕೊಳ್ಳಬಹುದಾಗಿದೆ. ಅಂದರೆ ಇನ್ನು 10.12 ಟಿಎಂಸಿ ಅಡಿ ನೀರಿನಲ್ಲಿಯೇ ಕುಡಿಯುವ ನೀರು ಸಂಗ್ರಹಮಾಡಿಕೊಂಡು ಮಾರ್ಚ್ 31ರವರೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ಕಾಲುವೆಗಳಿಗೆ ನೀರು
ಹರಿಸಬೇಕು. ಈಗ ಜಲಾಶಯದಿಂದ ವ್ಯಾಪಕವಾಗಿ ನೀರು ಹೊರಬಿಟ್ಟರೆ ಕಡು ಬೇಸಿಗೆಯಲ್ಲಿ ಅವಳಿ ಜಲಾಶಯ ವ್ಯಾಪ್ತಿಯ ಜನ-ಜಾನುವಾರುಗಳಿಗೆ ನೀರು ಕೊಡಲು ಸಾಧ್ಯವೇ ಎನ್ನುವುದು ಜನರ ದುಗುಡಕ್ಕೆ ಕಾರಣವಾಗಿದೆ.
ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 505.17 ಮೀ.ಎತ್ತರದಲ್ಲಿ 13.172 ಟಿಎಂಸಿ ಅಡಿ ನೀರು ಸಂಗ್ರಹವಿದ್ದರಿಂದ ಕುಡಿಯುವ ನೀರಿಗೆ ಪರದಾಡುವಂತಾಗಿ ಜಲಚರಗಳ ಸಾವಿಗೂ ಕಾರಣವಾಗಿರುವುದನ್ನು ಸ್ಮರಿಸಿಕೊಳ್ಳಬಹುದು.
ಕೃಷ್ಣಾ ಮೇಲ್ದಂಡೆ ಯೋಜನೆಯ ಮುಂದುವರಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಬಸವ ಸಾಗರ ಜಲಾಶಯ ವ್ಯಾಪ್ತಿ ಕಾಲುವೆಗಳಿಗೆ ನೀರು ಹರಿಸಲು ಆಲಮಟ್ಟಿಯಿಂದ ಗೇಟುಗಳ ಮೂಲಕ ಹಾಗೂ ಜಲ ವಿದ್ಯುತ್ ಘಟಕದಿಂದ ಜಲಾಶಯದ ಮುಂಭಾಗಕ್ಕೆ ನೀರು ಬಿಡಲಾಗುತ್ತಿದೆ.
ಎಸ್.ಎಚ್. ಮಂಜಪ್ಪ, ಮುಖ್ಯಅಭಿಯಂತರ
ಶಂಕರ ಜಲ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.