ಮಾಳನೂರ ಕೆರೆ ನೀರಿನ ಸಂಗ್ರಹಮಟ್ಟ ಪರಿಶೀಲನೆ
Team Udayavani, Nov 14, 2020, 7:08 PM IST
ತಾಳಿಕೋಟೆ: ಪಟ್ಟಣದ ಜನರಿಗೆ ಮೂರು ದಿನಗಳಿಂದ ಕುಡಿಯುವ ನೀರಿನ ತೊಂದರೆಯಾಗಿರುವುದನ್ನು ಗಮನಿಸಿದ ಪುರಸಭೆ ನೂತನ ಅಧ್ಯಕ್ಷ ಸಂಗಮೇಶ ಇಂಗಳಗಿ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಶುಕ್ರವಾರ ನೀರು ಸರಬರಾಜು ಮಾಡುವ ಮಾಳನೂರ ಕೆರೆಗೆ ಭೇಟಿ ನೀಡಿ ಪಂಪ್‌ಸೆಟ್ ದುರಸ್ತಿ ಕಾರ್ಯವನ್ನು ವಿಕ್ಷೀಸಿದರಲ್ಲದೇ ಕೂಡಲೇಕಾರ್ಯವನ್ನು ಬೇಗನೆ ಮುಗಿಸಿನೀರು ಸರಬರಾಜಿಗೆ ಕ್ರಮ ಕೈಗೊಳ್ಳಿ ಎಂದು ಉಪಸ್ಥಿತ ನೀರು ಸರಬರಾಜು ಅಧಿಕಾರಿಗಳಿಗೆ ಸೂಚಿಸಿದರು.
ಮೋಟರ್‌ನಲ್ಲಿ ಸವಕಳಿಯಿಂದಾಗಿ ದುರಸ್ತಿಗೆ ಬಂದಿದೆ. ಮೂರು ದಿನಗಳಿಂದ ಸತತ ಹಗಲು ರಾತ್ರಿಯನ್ನದೇ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ.ಸಂಜೆಯ ಹೊತ್ತಿಗೆ ಸಂಪೂರ್ಣದುರಸ್ತಿ ಮುಗಿಯಲಿದೆ. ಶನಿವಾರಪಟ್ಟಣದ ಜನರಿಗೆ ಎಂದಿನಂತೆ ನೀರು ಪೂರೈಕೆಯಾಗಲಿದೆ ಎಂದು ನೀರು ಸರಬರಾಜು ಮೇಲ್ವಿಚಾರಕ ಶಂಕರಗೌಡ ಬಿರಾದಾರ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ಮಾತನಾಡಿ, ಕೇರ್ ಸಿಟಿ ಮತ್ತು ಕುಡಿಯುವ ನೀರಿನಯೋಜನೆ ವತಿಯಿಂದ 20 ಲಕ್ಷ ರೂ. ತೆಗೆದಿಡಲಾಗಿದೆ. ಕೆಲ ಪಂಪ್‌ಸೆಟ್‌ಗಳು ಹಳೆಯದಾಗಿರುವದನ್ನು ಪದೇ-ಪದೇದುರಸ್ತಿಗೆ ಬರುತ್ತಿವೆ. ಅವುಗಳನ್ನು ಬದಲಿಸುವುದು ಅಗತ್ಯವಿದೆ. ಅವುಗಳನ್ನು ಖರೀದಿಸಿ ಬದಲಿಸಿದರೆತೊಂದರೆ ತಪ್ಪಲಿದೆ. ಅದಕ್ಕೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮುತ್ತಪ್ಪಣ್ಣ ಚಮಲಾಪುರ, ಜೈಸಿಂಗ್ ಮೂಲಿಮನಿ, ಮುದಕಣ್ಣಬಡಿಗೇರ, ಮೈಹಿಬೂಬ ಲಾಹೋರಿ, ಉಮರಶ್ಯಾ ಮಕಾಂದಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
Vijayapura: ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವುದು ನಮ್ಮ ನಿಲುವು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.