ನೀರಿನ ಸಮಸ್ಯೆ: ಪುರಸಭೆ ಮುಖ್ಯಾಧಿಕಾರಿ ತರಾಟೆಗ
Team Udayavani, Mar 6, 2018, 4:58 PM IST
ಮುದ್ದೇಬಿಹಾಳ: ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಸರಿಪಡಿಸಲು ಕ್ರಮ ಕೈಕೊಳ್ಳದ ಪುರಸಭೆ ಆಡಳಿತದ ವಿರುದ್ಧ ಆಕ್ರೋಶಗೊಂಡ ಮಹಿಳೆಯರು ಸೋಮವಾರ ತಮ್ಮ ಬಡಾವಣೆಯಲ್ಲಿ ಖಾಲಿ ಕೊಡ ಸಮೇತ ಪ್ರತಿಭಟನೆ ನಡೆಸಿದ ಘಟನೆ ಮಾರುತಿನಗರದಲ್ಲಿ ಸೋಮವಾರ ನಡೆದಿದೆ.
ಪುರಸಭೆ ಮುಖ್ಯಾಧಿಕಾರಿಣಿ ಎಸ್.ಎಸ್. ಬಾಗಲಕೋಟ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಮಾರುತಿನಗರ ವಾರ್ಡ್ ಪ್ರತಿನಿಧಿ ಸುವ ಪುರಸಭೆ ಸದಸ್ಯ ಮನೋಹರ ತುಪ್ಪದ ಅವರ ಎದುರೇ ಮಹಿಳೆಯರು ತರಾಟೆಗೆ ತೆಗೆದುಕೊಂಡರು. ಕೂಡಲೇ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.
ಬಡಾವಣೆಯ ಉದ್ಯಾನವನ ಜಾಗೆಯಲ್ಲಿ ವಾಸವಿರುವ ನಿವಾಸಿಗಳಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಕುಡಿಯಲು ಮತ್ತು ಬಳಸಲು ಸಾಕಷ್ಟು ಸಮಸ್ಯೆ ಆಗಿದೆ. ಇಲ್ಲಿರುವ ಕೈಪಂಪುಗಳು ದುರಸ್ಥಿಗೆ ಬಂದಿದ್ದರೂ ದುರಸ್ಥಿ ಮಾಡಿಸುವ ಕಾಳಜಿ ತೋರಿಸುತ್ತಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿ ನೀರು ಒದಗಿಸಿ ಎಂದು ವರ್ಷದಿಂದ ಮನವಿ ಮಾಡಿಕೊಳ್ಳುತ್ತಿದ್ದರೂ ಕಾಳಜಿ ತೋರುತ್ತಿಲ್ಲ ಎಂದು ಮಹಿಳೆಯರು ಹರಿಹಾಯ್ದರು.
ಮಾರುತಿನಗರ ವಾರ್ಡ್ ಪುರಸಭೆ ಸದಸ್ಯ ಮನೋಹರ ತುಪ್ಪದ ಅವರು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದು ನೀರಿನ ಸಮಸ್ಯೆ ಬಗೆಹರಿಸಿ ಎಂದು ಕೋರಿದರೂ ಪುರಸಭೆ ಆಡಳಿತ ಗಂಭೀರವಾಗಿ ಪರಿಗಣಿಸುತ್ತಿಲ್ಲ. ನೀರು ಬಿಡುವ ವಾಟರ್‌ಮನ್ ಶಿವಾನಂದ ಬೋಳಿ ಎಂಬಾತನಿಗೆ ಸಮಸ್ಯೆಯ ಅರಿವಿದ್ದು, ಆತ ಪುರಸಭೆ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಮಹಿಳೆಯರು ಆಕ್ರೋಶ ತೋಡಿಕೊಂಡರು.
ಪುರಸಭೆ ಕರ ವಸೂಲಿಗಾರರು ಪ್ರತಿ ವರ್ಷ ತಪ್ಪದೆ ಕರ್ತವ್ಯಪ್ರಜ್ಞೆ ತೋರಿಸಿ ನೀರಿನ ಬಿಲ್ ವಸೂಲಿ ಮಾಡುತ್ತಾರೆ. ಆದರೆ, ಬಿಲ್ ವಸೂಲಿ ಮಾಡಿದಂತೆ ಕುಡಿವ ನೀರು ಕೊಡಲು ಮಾತ್ರ ಕರ್ತವ್ಯ ಪ್ರಜ್ಞೆ ತೋರುತ್ತಿಲ್ಲ. ನಿತ್ಯ ಖಾಲಿ ಕೊಡ ಹಿಡಿದು ನೀರಿಗೆ ಅಲೆಯುವ ಸ್ಥಿತಿ ಬರಲು ಪುರಸಭೆ ಆಡಳಿತದ ನಿರಾಸಕ್ತಿ, ಅಧಿಕಾರಿ ವರ್ಗದ ಬೇಜವಾಬ್ದಾರಿತನವೇ ಕಾರಣ ಎಂದು ದೂರಿದರು. ಬಡಾವಣೆಯಲ್ಲಿ ಕೊಳಚೆ, ಮಳೆ ನೀರು ಹರಿದು ಹೋಗಲು ಚರಂಡಿ ಇಲ್ಲ, ತಿರುಗಾಡಲು ಸಮರ್ಪಕ ರಸ್ತೆ ಇಲ್ಲ. ಕೂಡಲೇ ಮೂಲಸೌಕರ್ಯ ಒದಗಿಸಲು ಕ್ರಮ ಕೈಕೊಳ್ಳುವಂತೆ ಒತ್ತಾಯಿಸಿದರು.
ಮುಖ್ಯಾಧಿಕಾರಿಣಿ ಎಸ್.ಎಸ್.ಬಾಗಲಕೋಟ ಪ್ರತಿಕ್ರಿಯಿಸಿ, ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಪರ್ಯಾಯ
ವ್ಯವಸ್ಥೆ ಮಾಡುವ ಮೂಲಕ ಕುಡಿವ ನೀರು ದೊರಕುವಂತೆ ನೋಡಿಕೊಳ್ಳುತ್ತೇನೆ. ಕೈಪಂಪುಗಳನ್ನು ದುರಸ್ಥಿ ಮಾಡಿಸಿಕೊಡುತ್ತೇನೆ.
ಕಿರು ನೀರು ಸರಬರಾಜು ಸೌಲಭ್ಯ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು. ನಗರಾಭಿವೃದ್ಧಿ ಯುವ ಹೋರಾಟ ವೇದಿಕೆ ಸಂಚಾಲಕ ಬಸಯ್ಯ ನಂದಿಕೇಶ್ವರಮಠ, ಪುರಸಭೆ ಸದಸ್ಯ ಮನೋಹರ ತುಪ್ಪದ, ಶಾಂತಲಾ ಧೂಪದ, ಸುಧಾ ಕಟ್ಟಿಮನಿ, ರುದ್ರಮ್ಮ ಜಾವೂರ, ಸುವರ್ಣ ನಂದಿಕೇಶ್ವರಮಠ, ಸಂಗಮ್ಮ ಹೊಸಗೌಡರ, ಶಕುಂತಲಾ ಮಾಮನಿ, ರೇಣುಕಾ ಹಳ್ಳೂರ, ಶಕುಂತಲಾ ಕೊಪ್ಪದ, ಗುರುದೇವಿ ಪಾಟೀಲ, ಶಾಂತಾ ಬಾಣಲದಿನ್ನಿ, ಸುಮಿತ್ರಾ ಹುಲಗನ್ನವರ್, ಕಮಲಾಕ್ಷಿ ಗೌಡರ, ಶಾಂತಾ ಹಾವರಗಿ, ಪ್ರಭಾವತಿ ಪಾಟೀಲ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.