ಭದ್ರತಾ ಪಡೆ ಠಾಣೆಯಲ್ಲಿ ಆಯುಧ ಪೂಜೆ
Team Udayavani, Oct 20, 2018, 3:32 PM IST
ಆಲಮಟ್ಟಿ: ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ಭದ್ರತೆಗೆ ನಿಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಜಲಾಶಯದ ಬಲ ಭಾಗದಲ್ಲಿರುವ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ನೆರವೇರಿಸಲಾಯಿತು.
93 ಪೊಲೀಸರ ಬಲವುಳ್ಳ ಈ ಪಡೆಗೆ ನೀಡಲಾಗಿರುವ ವಿವಿಧ ಬಂದೂಕು, ಗುಂಡು ಮೊದಲಾದ ಆಯುಧಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಕೆಎಸ್‌ಐಎಸ್‌ಎಫ್ ಆಲಮಟ್ಟಿ ಉಸ್ತುವಾರಿ ಪಿಎಸ್‌ಐ ಐ.ಎಸ್. ವಾಲಿ ಮಾತನಾಡಿ, ಆಲಮಟ್ಟಿ ಜಲಾಶಯ ಸೂಕ್ಷ್ಮ ಪ್ರದೇಶವಾಗಿದ್ದು ಕೆಎಸ್‌ಐಎಸ್‌ಎಫ್ ಸುಪರ್ದಿಯಲ್ಲಿ ಭದ್ರತೆ ಕಟ್ಟುನಿಟ್ಟಾಗಿದೆ. ಜಲಾಶಯ, ಉದ್ಯಾನ, ಆಲಮಟ್ಟಿ ಅಣೆಕಟ್ಟು ಪ್ರವೇಶ ಸೇರಿದಂತೆ ಹಲವಾರು ಕಡೆ ಭದ್ರತೆ ಹೆಚ್ಚಿಸಲಾಗಿದೆ. ಸದ್ಯ ಜಲಾಶಯದ ಭದ್ರತೆಗಾಗಿ ಒಟ್ಟು 93 ಪೊಲೀಸರು ದಿನ 24 ಗಂಟೆ ಮೂರು ಪಾಳೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು ಐವರು ಪಿಎಸ್‌ಐ, 72 ಪೊಲೀಸರು ಹಾಗೂ 16 ಮಹಿಳಾ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಕೆಎಸ್‌ಐಎಸ್‌ಎಫ್ ಪಿಎಸ್‌ಐಗಳಾದ ಯಲ್ಲಪ್ಪ ಬೈಲಕೂರ, ಮಹೇಶ ಹುದ್ದಾರ, ಶಿವಲಿಂಗ ಕುರೆನ್ನವರ, ಜಯಶ್ರೀ ವಡ್ಡರ, ವಿ.ಎಸ್. ಗಾಳಪ್ಪಗೋಳ ಹಾಗೂ ಸಿಬ್ಬಂದಿ ಇದ್ದರು. ಆಲಮಟ್ಟಿ ಜಲಾಶಯದ ಪ್ರವೇಶ ದ್ವಾರ, ಜಲಾಶಯದ ಗೇಟ್ ನಿಯಂತ್ರಣ ಕೊಠಡಿ ಸೇರಿದಂತೆ ನಾನಾ ಕಡೆ ಆಯುಧ ಪೂಜೆ ನೆರವೇರಿಸಲಾಯಿತು.
ಕೃಷ್ಣಾ ಭಾಗ್ಯ ಜಲ ನಿಗಮದ ವಿವಿಧ ಸರ್ಕಾರಿ ವಾಹನಗಳನ್ನು ಹೂವುಗಳಿಂದ ಸಿಂಗಾರಗೊಳಿಸಿದ್ದು ಕಂಡು ಬಂತು. ಆಲಮಟ್ಟಿಯ ಏತ ನೀರಾವರಿ ಯೋಜನೆಗಳ ಮುಖ್ಯಸ್ಥಾವರಗಳಲ್ಲಿಯೂ ಆಯುಧ ಪೂಜೆ ನೆರವೇರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Vijayapura: ವಕ್ಫ್ ವಿರುದ್ಧ ಹಲವು ಮಠಾಧೀಶರ ನೇತೃತ್ವದಲ್ಲಿ ಹೋರಾಟ
Waqf Issue: ಲ್ಯಾಂಡ್ ಟೆರರಿಸಂ, ಲ್ಯಾಂಡ್ ಜಿಹಾದ್ ನಿಂದ ಬಚಾವಾಗಬೇಕು: ಶೋಭಾ ಕರಂದ್ಲಾಜೆ
Waqf Property: ಬೊಮ್ಮಾಯಿ ಕಾಲದಲ್ಲೂ ವಕ್ಫ್ ಆಸ್ತಿ ತೆರವಿಗೆ ಹೇಳಿದ್ರು: ಸಚಿವ ಜಮೀರ್
Vijayapura: ವಕ್ಫ್ ವಿವಾದ… ನಾಳೆಯಿಂದ ಅಹೋರಾತ್ರಿ ಧರಣಿ ಆರಂಭ: ಶಾಸಕ ಯತ್ನಾಳ
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.