ಹಲವು ಭರವಸೆಗಳೊಂದಿಗೆ ಹೊಸ ವರ್ಷಕ್ಕೆ ಸ್ವಾಗತ
Team Udayavani, Jan 1, 2019, 9:03 AM IST
ವಿಜಯಪುರ: ಮತ್ತೂಂದು ಹೊಸ ವರ್ಷ ಬರುತ್ತಿದ್ದು, ಮತ್ತದೇ ಹಳೆಯ ಕನಸುಗಳಿಹೆ ಹೊಸ ಭರವಸೆಯ ನಿರೀಕ್ಷೆಯೊಂದಿಗೆ ಸ್ವಾಗತಕ್ಕೆ ಬಸವನಾಡಿನ ಜನತೆ ಸಿದ್ಧವಾಗಿದ್ದಾರೆ. ವಿಜಯಪುರ ಜಿಲ್ಲೆ ಎಂದಾಕ್ಷಣ ನೆನಪಿಗೆ ಬರುವುದು ಇಲ್ಲಿನ ವಿಶ್ವ ಪ್ರಸಿದ್ಧ ಗೋಲಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ನೂರಾರು ಐತಿಹಾಸಿಕ ಅಪರೂಪದ ಸ್ಮಾರಕಗಳಿದ್ದರೂ ಒಂದೆರಡನ್ನು ಹೊರತು ಪಡಿಸಿದರೆ ಇತರೆ ಸ್ಮಾರಕಗಳಿಗೆ ರಕ್ಷಣೆಯೂ ಇಲ್ಲ, ನಿರ್ವಹಣೆಯೂ ಇಲ್ಲ. ಪರಿಣಾಮ ಬಹುತೇಕ ಸ್ಮಾರಕಗಳ ಸುತ್ತ ಬಯಲು ಶೌಚ ಹಾಗೂ ತ್ಯಾಜ್ಯಗಳ ರಾಸಿಯಿಂದ ಸ್ಮಾರಕಗಳ ಸುಂದರ ಪರಿಸರ ಮಲೀನ ಸ್ಥಿತಿಯಲ್ಲಿದ್ದು ಸ್ವತ್ಛತೆ ನಿರೀಕ್ಷೆಯಲ್ಲಿದೆ.
ನೂರಾರು ಸ್ಮಾರಕಗಳನ್ನು ಹೊಂದಿರುವ ವಿಜಯಪುರ ನಗರಕ್ಕೆ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಪ್ರಸ್ತಾವನೆಗೆ ಈವರೆಗೆ ಅಸ್ತು ಎಂದಿಲ್ಲ. ಇನ್ನು ದೇಶ-ವಿದೇಶಿ ಪ್ರವಾಸಿಗರ ಅನುಕೂಲಕ್ಕಾಗಿ ತುರ್ತಾಗಿ ಬೇಕಿರುವ ವಿಮಾನ ನಿಲ್ದಾಣ ನಿರ್ಮಾಣ ನನೆಗುದಿಗೆ ಬಿದ್ದಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ತ್ವರಿತ ಅನುಷ್ಠಾನದ ಅಗತ್ಯವಿದೆ. ದೇಶದ ವಿವಿಧ
ಕಡೆಗಳಲ್ಲಿ ಇರುವ ಪ್ರವಾಸೋದ್ಯಮ ಸೌಲಭ್ಯಗಳು ಆದಿಲ್ ಶಾಹಿ ನಾಡಿಗೂ ದಕ್ಕಬೇಕಿದೆ. ಪ್ರವಾಸಿಗರ ಮೂಲಭೂತ ಸೌಲಭ್ಯಗಳ ಬೇಡಿಕೆಗೆ ಹೊಸ ವರ್ಷ ನನಸಾಗಿಸಬೇಕಿದೆ.
ಸರ್ಕಾರಗಳು ಹಾಗೂ ರಾಜಕೀಯ ನಾಯಕರು ಜಿಲ್ಲೆಯ ನೀರಾವರಿ ಬಗ್ಗೆ ಮಾತನಾಡಿದರೂ ಮುಖ್ಯ ಹಾಗೂ ಉಪ ಕಾಲುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರೂ ಹೊಲಗಾಲುಗೆ ನಿರ್ಮಾಣಕ್ಕೆ ಆದ್ಯತೆ ನೀಡಿಲ್ಲ. ಪರಿಣಾಮ ತಮ್ಮ ಜಮೀನಿಗೆ ನೀರು ಹರಿಯುತ್ತದೆ ಎಂದು ಕಾಯುತ್ತಿರುವ ಲಕ್ಷಾಂತರ ರೈತರ ಕನಸು ನನಸಾಗಿಸುವಲ್ಲಿ ಹೊಸ ವರ್ಷ ಭರವಸೆ ಮೂಡಿಸಬೇಕಿದೆ.
ಇನ್ನು ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಹೊಸ ತಾಲೂಕಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು 7 ಹೊಸ ತಾಲೂಕು ರೂಪುಗೊಂಡು ವರ್ಷವಾದರೂ ವಾಸ್ತವಿಕ ಅನುಷ್ಠಾನವಾಗಿಲ್ಲ. ತಾಲೂಕು ಕೇಂದ್ರಗಳಲ್ಲಿ ಇರಬೇಕಾದ ಸರ್ಕಾರಿ ಕಚೇರಿಗಳು ಹಾಗೂ ಇತರೆ ಸೌಲಭ್ಯ ಕಲ್ಪಿಸುವಲ್ಲಿ
ನವಯುಗ ಹೊಸ ತಾಲೂಕಗಳ ಜನತೆಯ ಆಶಯ ಈಡೇರಿಸಲಿ.
ಇನ್ನು ನಿತ್ಯವೂ ಸಾವಿರಾರು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಿದ್ದ, ಅರ್ಧಕ್ಕೆ ನಿಂತಿರುವ ವಿಜಯಪುರ ನಗರದ ಮಾಸ್ಟರ್ ಪ್ಲಾನ್ ಪೂರ್ಣಗೊಳಿಸುವುದು ತುರ್ತಾಗಿ ಆಗಬೇಕಿದೆ. ಹಲವು ಕಡೆಗಳಲ್ಲಿ ಸ್ಮಾರಕಗಳ ವೀಕ್ಷಣೆಗೆ ಬರುವ ಪ್ರವಾಸಿಗರ ವಾಹನ ಸೇರಿದಂತೆ ಸಾರ್ವಜನಿಕರ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಬೇಕಿದೆ. ದುಸ್ಥಿತಿಯಲ್ಲಿರುವ ನಗರ ಸಂಚಾರ ವ್ಯವಸ್ಥೆಯನ್ನು ಸರಿದಾರಿಗೆ ತರಬೇಕಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಜಿಲ್ಲೆಯನ್ನು ಬಾಧಿ ಸುತ್ತಿರುವ ಬರ, ಗ್ರಾಮೀಣ ಕುಡಿಯುವ ನೀರು ಹಾಗೂ ಗುಳೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಜಿಲ್ಲೆಯ ಜನತೆಯ ಆಶಯ ಈಡೇರಬೇಕಿದೆ.
ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.