Vijayapura ಅಖಂಡ ಜಿಲ್ಲೆಗೆ ಕಾರಜೋಳ ಕೊಡುಗೆ ಏನು?: ಕಾಂಗ್ರೆಸ್ ವಕ್ತಾರ ಗಣಿಹಾರ ಪ್ರಶ್ನೆ
Team Udayavani, Sep 4, 2023, 11:48 AM IST
ವಿಜಯಪುರ: ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಹಾಗೂ ಜಲಸಂಪನ್ಮೂಲ ಸಚಿವರಾಗಿ ಅವಳಿ ಜಿಲ್ಲೆಯವರೇ ಆಗಿರುವ ಗೋವಿಂದ ಕಾರಜೋಳ ತವರು ಜಿಲ್ಲೆಗೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿರುವ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಎಂ.ಬಿ.ಪಾಟೀಲ ಅವರಿಂದ ನೀರಾವರಿ ಕ್ರಾಂತಿಯಾಗಿದೆ ಎಂದು ಎಂದಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿ ಜಿಲ್ಲೆಯಲ್ಲಿ ನೀರಾವರಿ ಮಾಡಿದ್ದರಿಂದಲೇ ಜನತೆ ಆಧುನಿಕ ಭಗೀರಥ ಎಂಬ ಬಿರುದು ನೀಡಿದ್ದಾರೆ. ಹಲವು ದಶಗಳಿಂದ ಅಧಿಕಾರದಲ್ಲಾದ ಜಿಲ್ಲೆಯ ನೀರಾವರಿಗೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಬುದ್ಧ, ಬಸವ, ಅಂಬೇಡ್ಕರ್ ವಾದಿಯಾಗಿದ್ದ ಗೋವಿಂದ ಕಾರಜೋಳ ಅವರು ಅಧಿಕಾರದ ಆಸೆಗಾಗಿ ಬಿಜೆಪಿ ಸೇರಿದ್ದು, ರಾಜಕೀಯ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೃಷ್ಣಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ಟೀಕೆ ಮಾಡುವುದು ಸರಿಯಲ್ಲ ಎಂದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಎಂದು ನಿರಾಧಾರ ಆರೋಪ ಮಾಡುತ್ತಿದ್ದಾರೆ. ವಾಸ್ತವವಾಗಿ ಗ್ಯಾರಂಟಿ ಯೋಜನೆಗಳಿಂದ ಒಳಿತಾಗಿದೆ. ಶೇ.75 ರಷ್ಟು ಜನರು ಒಕ್ಕೂಟ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಬಿಜೆಪಿ, ಒಂದು ದೇಶ, ಒಂದು ಚುನಾವಣೆ ಹೆಸರಿನಲ್ಲಿ ಸಂವಿಧಾನ ತಿದ್ದುಪಡಿಗೆ ಮುಂದಾಗಿದೆ. ಭವಿಷ್ಯದಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ, ಐ.ಎನ್.ಡಿ.ಐ.ಎ. ಒಕ್ಕೂಟಕ್ಕೆ ಸಿಕ್ಕಿರುವ ಬೆಂಬಲದಿಂದ ಕಂಗೆಟ್ಟಿರುವ ಬಿಜೆಪಿ ರಾಷ್ಟ್ರದ ಅತ್ಯುನ್ನತ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದ ರಾಮನಾಥ ಕೋವಿಂದ ಅವರನ್ನು ಒಂದು ದೇಶ ಒಂದು ಚುನಾವಣೆ ವರದಿ ನೀಡುವ ಸಮೀತಿಗೆ ನೇಮಿಸಿದ್ದು, ರಾಷ್ಟ್ರಪತಿಯಂಥ ಮಹತ್ವದ ಹುದ್ದೆ ಅಲಂಕರಿಸಿದ ವ್ಯಕ್ತಿಗೆ ಘನತೆಗೆ ಮಾಡುವ ಅಪಮಾನ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಲಿಂಗಾಯತರನ್ನು ಎಂದೂ ಕಡೆಗಣಿಸಿಲ್ಲ. ಈ ವರೆಗೆ ಲಿಂಗಾಯತ ಸಮುದಾಯದ 7 ನಾಯಕರನ್ನೇ ಮುಖ್ಯಮಂತ್ರಿ ಮಾಡಿದೆ. ಹಾಲಿ ಸರ್ಕಾರದಲ್ಲಿ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಲಿಂಗಾಯತ ನಾಯಕರಲ್ಲವೇ ಎಂದು ಪ್ರಶ್ನಿಸಿದ್ದರು.
ವಸಂತ ಹೊನಮೋಡೆ, ನಾಗರಾಜ ಲಂಬು, ಫಯಾಜ ಕಲಾದಗಿ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.