ಯಾರಿಗೆ ಒಲಿಯಲಿದೆ ಅಧ್ಯಕ್ಷ ಗಾದಿ?
ಪುರಸಭೆಯಲ್ಲಿ ಅಧಿಪತ್ಯ ಸಾಧಿಸಲು ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ
Team Udayavani, Jun 4, 2019, 10:49 AM IST
ಇಂಡಿ: 23 ಸದಸ್ಯ ಬಲದ ಇಂಡಿ ಪುರಸಭೆಯಲ್ಲಿ ಮತದಾರರು ನೀಡಿದ ತೀರ್ಪು ಅತಂತ್ರ ಸ್ಥಾನಕ್ಕೆ ನಿಂತಿದೆ. ಹಾಗಾದರೆ ಅಧಿಕಾರದ ಗದ್ದುಗೆ ಬಿಜೆಪಿಗೋ ಕಾಂಗ್ರೆಸ್ ತೆಕ್ಕೆಗೋ ಎಂಬುದು ಜನರಲ್ಲಿ ಕುತೂಹಲ ಮೂಡಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸಂಖ್ಯಾಬಲ ಬಿಜೆಪಿ ಹೊಂದಿದ್ದರೂ ಅದಕ್ಕೆ ಅಧಿಕಾರದ ಗದ್ದುಗೆ ಏರಲಾಗಲಿಲ್ಲ, ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತಾಯಿತು. ಹಾಗೆ ಇಂಡಿ ಪುರಸಭೆ ಅಧಿಕಾರವೂ ಸಹ ಹೆಚ್ಚು ಸ್ಥಾನ ಪಡೆದ ಬಿಜೆಪಿಗೆ ಲಭಿಸುವುದೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಭಾರತೀಯ ಜನತಾ ಪಕ್ಷ 11 ಸ್ಥಾನ, ಕಾಂಗ್ರೆಸ್ 8 ಸ್ಥಾನ, ಜಾತ್ಯತೀತ ಜನತಾದಳ 2, ಪಕ್ಷೇತರರು 2 ಸ್ಥಾನ ಗಳಿಸಿದ್ದಾರೆ. ಬಹುಮತಕ್ಕೆ ಓರ್ವ ಸದಸ್ಯರ ಬಲ ಬಿಜೆಪಿಗೆ ಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ 4 ಸದಸ್ಯರ ಬಲ ಬೇಕು. ಓರ್ವ ಸದಸ್ಯರ ಬಲ ಪಡೆದು ಪುರಸಭೆಯಲ್ಲಿ ಕೇಸರಿ ಧ್ವಜ ಹಾರುವುದೋ 4 ಸದಸ್ಯರ ಬೆಂಬಲ ಪಡೆದು ಕೈ ಮೇಲುಗೈ ಸಾಧಿಸುತ್ತದಾ ಗೊತ್ತಿಲ್ಲ.
ಹಿಂದಿನ ಅವಧಿ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನ ಪಡೆದರೆ ಕೆಜೆಪಿ 3 ಸ್ಥಾನ ಪಡೆದಿತ್ತು. ಕಾಂಗ್ರೆಸ್ ಪಕ್ಷ 7 ಸ್ಥಾನ, ಜೆಡಿಎಸ್ 3 ಸ್ಥಾನ, ಪಕ್ಷೇತರರು 2 ಸ್ಥಾನ ಪಡೆದಿದ್ದರು. ಆದರೆ 7 ಸ್ಥಾನ ಪಡೆದ ಕಾಂಗ್ರೆಸ್ ಪಕ್ಷ ಶಾಸಕ ಯಶವಂತರಾಯಗೌಡ ಪಾಟೀಲರ ಶತಪ್ರಯತ್ನದಿಂದ ಪಕ್ಷೇತರರ ಹಾಗೂ ಇತರರ ಬೆಂಬಲ ಪಡೆದು 5 ವರ್ಷವೂ ಅಧಿಕಾರ ನಡೆಸಿದರೆ ಬಿಜೆಪಿ ವಿರೋಧ ಪಕ್ಷದಲ್ಲಿ ಕೂಡಬೇಕಾಯಿತು.
ಈ ಬಾರಿ 11 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಓರ್ವ ಅಭ್ಯರ್ಥಿ ಬೆಂಬಲ ಬೇಕಷ್ಟೆ. ಅದು ಸರಳವೆಂದು ಮೇಲ್ನೋಟಕ್ಕೆ ಕಂಡರೂ ಕಾರ್ಯರೂಪಕ್ಕೆ ಬರುವುದು ಕಠಿಣವಾಗಿ ತೋರುತ್ತಿದೆ. ಅಕಾರದ ಗದ್ದುಗೆಗೆ ಏರಲು ಎರಡು ಜನ ಪಕ್ಷೇತರರಲ್ಲಿ ಓರ್ವರನ್ನು ಅಥವಾ ಜೆಡಿಎಸ್ ಪಕ್ಷದ ಇಬ್ಬರಲ್ಲಿ ಒಬ್ಬರ ಬೆಂಬಲ ಬಿಜೆಪಿ ಪಡೆಯಲೇಬೇಕು. 4 ಸದಸ್ಯರ ಬೆಂಬಲ ಪಡೆದು ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಲು ತೆರೆ ಮರೆಯಲ್ಲಿ ಪ್ರಯತ್ನಿಸುತ್ತಿದೆ. ಓರ್ವ ಅಭ್ಯರ್ಥಿ ಬೆಂಬಲ ಪಡೆದು ಬಿಜೆಪಿ ಅಧಿಕಾರ ಹಿಡಿಯುವುದೋ ಅಥವಾ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆಗೆ ಏರುವುದೋ ಕಾದು ನೋಡಬೇಕು.
•ಉಮೇಶ ಬಳಬಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Vijayapura: ವಕ್ಫ್ ವಿರುದ್ಧ ಹಲವು ಮಠಾಧೀಶರ ನೇತೃತ್ವದಲ್ಲಿ ಹೋರಾಟ
Waqf Issue: ಲ್ಯಾಂಡ್ ಟೆರರಿಸಂ, ಲ್ಯಾಂಡ್ ಜಿಹಾದ್ ನಿಂದ ಬಚಾವಾಗಬೇಕು: ಶೋಭಾ ಕರಂದ್ಲಾಜೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.