Article 370 ತೆಗೆದಂತೆ ವಕ್ಪ್ ಕಾಯ್ದೆ ತೆಗೆಯಬೇಕು: ಯತ್ನಾಳ್
ವಿರೋಧ ಮಾಡುತ್ತಾರೆ.. ರಾಹುಲ್ ಗಾಂಧಿ ಅಂತೂ ಹಿಂದೂ ಅಲ್ಲ...
Team Udayavani, Aug 5, 2024, 6:37 PM IST
ವಿಜಯಪುರ: ”ವಕ್ಫ್ ಬೋರ್ಡ್ ಒಂದು ಕರಾಳ ಶಾಸನ,ಅದನ್ನ ತಗೆಯಲು ಪ್ರಧಾನಿ ಮೋದಿ ಅವರು ಮುಂಂದಾಗಿದ್ದು ಒಳ್ಳೆಯದು. ಅದನ್ನ ನಾನು ಸ್ವಾಗತಿಸುತ್ತೇನೆ” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಸೋಮವಾರ (ಆಗಸ್ಟ್ 5) ಸುದ್ದಿಗಾರರೊಂದಿಗೆ ಮಾತನಾಡಿ ‘ ಕಾಶ್ಮೀರದಲ್ಲಿ 370 ಕಾಯ್ದೆ ತೆಗೆದಂತೆ ವಕ್ಪ್ ಕಾಯ್ದೆ ತೆಗೆಯಬೇಕು. ದೇಶದಲ್ಲಿ 12 ಲಕ್ಷ ಎಕರೆ ಜಮೀನು ವಕ್ಫ್ ಬೋರ್ಡ್ ಹೆಸರಲ್ಲಿ ಇದೆ. ಈ ಕರಾಳ ಶಾಸನ ತೆಗೆಯುವು ದರಿಂದ ದಲಿತರಿಗೆ, ಹಿಂದುಳಿದವರಿಗೆ ಒಳ್ಳೆಯದಾಗಲಿದೆ. ಇದಕ್ಕೆ ಓವೈಸಿ, ಅವನಷ್ಟೇ ಯಾಕೆ ಆ ರಾಹುಲ್ ಗಾಂಧಿ, ಆಖಿಲೇಶ್ ಯಾದವ್ ಕೂಡ ವಿರೋಧ ಮಾಡುತ್ತಾರೆ’ ಎಂದರು.
‘ರಾಹುಲ್ ಗಾಂಧಿ ಯಾರು, ಅವನು ಹಿಂದೂ ಅಂತೂ ಅಲ್ಲ. ಅವನ ಜಾತಿನೇ ಯಾವುದು ಅಂತಾ ಗೊತ್ತಾಗಿಲ್ಲ.ಇಂತವರೆಲ್ಲ ವಿರೋಧ ಮಾಡುತ್ತಾರೆ,ಅದರಿಂದ ಏನು ಆಗಲ್ಲ. ವಕ್ಫ್ ಹೆಸರಲ್ಲಿರುವ ಜಮೀನು ವಾಪಸ್ ಬಂದರೆ ಎಲ್ಲರಿಗೂ ಅನುಕೂಲ ಆಗಲಿದೆ. ಪ್ರಧಾನ ಮಂತ್ರಿಗಳು ವಕ್ಪ್ ಕಾಯ್ದೆ ಬದಲಾವಣೆ ಮಾಡುತ್ತಿರೋದು ಸಂತಸದ ವಿಚಾರ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Yalandur: ಗಾಂಜಾ ಮಾರಾಟಕ್ಕೆ ಯತ್ನ ಇಬ್ಬರು ಪೊಲೀಸರ ವಶಕ್ಕೆ
Shimoga: ವಿಮಾನದಿಂದ ಜಿಗಿದಾಗ ಪ್ಯಾರಚೂಟ್ ತೆರೆಯದೆ ಹೊಸನಗರ ಮೂಲದ ಅಧಿಕಾರಿ ಸಾವು
Karnataka Govt.,: ಕೋವಿಡ್ ಬಳಿಕದ ಹಠಾತ್ ಮರಣಗಳ ತನಿಖೆಗೆ ಸಮಿತಿ
BJP: ಬಹಿರಂಗ ಹೇಳಿಕೆ ನಿಲ್ಲಿಸಿ: ಭಿನ್ನರಿಗೆ ಬಿಜೆಪಿ ವರಿಷ್ಠರ ಖಡಕ್ ತಾಕೀತು