ತಾಳಿಕೋಟೆಯಲ್ಲಿ ಬೇಕಾಬಿಟ್ಟಿ ಕಾಮಗಾರಿ
Team Udayavani, Sep 10, 2018, 4:16 PM IST
ತಾಳಿಕೋಟೆ: ನಗರೋತ್ಥಾನ ಯೋಜನೆಯಡಿ 7 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಪಟ್ಟಣದ ವಿವಿಧಡೆ ಕೈಗೊಳ್ಳಲಾಗುತ್ತಿದೆ. ಆದರೆ ಕಾಮಗಾರಿ ನಿರ್ವಹಣೆ ಬೇಕಾಬಿಟ್ಟಿ ಕೈಗೊಳ್ಳುವುದರ ಜೊತೆಗೆ ಗುತ್ತಿಗೆದಾರನ
ಕರಾಮತ್ತಿಗೆ ಒಳಚರಂಡಿ ಚೇಂಬರ್‌ಗಳು ಒಡೆದು ನೆಲದಲ್ಲಿ ಮುಚ್ಚಿ ಹೋಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
7 ಕೋಟಿ ರೂ. ವೆಚ್ಚದಲ್ಲಿ ಮುಖ್ಯಮಂತ್ರಿ ನಗರೋತ್ಥಾನ ಪೇಸ್ 3 ಯೋಜನೆಯಡಿ ಡಾಂಬರೀಕರಣ ಹಾಗೂ ಸಿಸಿ ರಸ್ತೆ, ಚರಂಡಿ ಒಳಗೊಂಡಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೈಗೊಂಡ ಕಾಮಗಾರಿಗಳಲ್ಲಿ ಕೆಲವೆಡೆ ಬೇಕಾಬಿಟ್ಟಿ ಕಾಮಗಾರಿ ನಿರ್ವಹಿಸಲಾಗಿದೆ. ಕೆಲವೆಡೆ ರಸ್ತೆ ಕಾಮಗಾರಿಗೆ ಮೆಟಿಂಗಮಾಡಿದ್ದರೆ ಇನ್ನೊಂದಡೆ ಇದ್ದ ರಸ್ತೆ ಮೇಲೆ ಡಾಂಬರೀಕರಣ ಕೈಗೊಂಡು ಗುತ್ತಿಗೆದಾರ ಕೈತೊಳೆದುಕೊಳ್ಳುತ್ತ ಸಾಗಿದ್ದಾನೆ.
ಯಾವುದೇ ಕಾಮಗಾರಿ ನಿರ್ವಹಿಸಬೇಕಾದರೆ ಪುರಸಭೆ ಸಂಬಂಧಿತ ಆಸ್ತಿ ಹಾನಿಗೊಳಗಾಗದಂತೆ ಗುತ್ತಿಗೆದಾರ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಒಂದು ವೇಳೆ ಅಚಾತುರ್ಯದಿಂದ ಹಾನಿಗೊಳಗಾದರೆ ಅದೇ ಗುತ್ತಿಗೆದಾರು
ಹಾನಿಗೀಡಾಗಿದ್ದನ್ನು ಸರಿಪಡಿಸಿ ಮುಂದಿನ ಕಾಮಗಾರಿ ಕೈಗೊಳ್ಳಬೇಕಾಗುತ್ತದೆ.
ಅದ್ಯಾವುದನ್ನು ಲೆಕ್ಕಿಸದೇ ರಸ್ತೆ ಡಾಂಬರೀಕರಣದ ನೆಪದಲ್ಲಿ ಒಳಚರಂಡಿ ಚೇಂಬರ್‌ಗಳನ್ನು ಒಡೆದು ಹಾಕಿದ್ದಲ್ಲದೇ ಚೆಂಬರ್‌ನ ಸುತ್ತ ಕಡಿ ಕಂಕರಗಳನ್ನು ಹಾಕಿ ಚೇಂಬರ್ ಇಲ್ಲೇ ಇದೇ ಎಂಬುದನ್ನು ಗುರುತಿಸಲಿಕ್ಕೆ ಆಗದ ಹಾಗೆ ಡಾಂಬರೀಕರಣಕ್ಕೆ ಮುಂದಾಗಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮಗಾರಿ ನಿರ್ವಹಣೆ ಸಮಯದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಂತ ಹಂತದಲ್ಲಿ ತಪಾಸಣೆ ಕೈಗೊಳ್ಳುತ್ತ
ಸಾಗಬೇಕಾಗುತ್ತದೆ. ಆದರೆ ವಿವಿಧ ಕಾಮಗಾರಿಗಳಲ್ಲಿ ಬಹುತೇಕ ಕಾಮಗಾರಿಗಳು ಮುಕ್ತಾಯ ಹಂತಕ್ಕೆ ಬಂದರೂ ಯಾವ ಒಬ್ಬ ಅಧಿಕಾರಿಯೂ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳದಿರುವುದು ಅಧಿಕಾರಿಗಳ ನಡೆ ಮೇಲೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಈಗಾಗಲೇ ಕೆಲವು ವಾರ್ಡ್‌ಗಳಲ್ಲಿ ಬೇಕಾ ಬಿಟ್ಟಿ ರಸ್ತೆ ಕಾಮಗಾರಿ ನಿರ್ವಹಿಸುತ್ತಿರುವದನ್ನು ಮನಗಂಡ ಸಾರ್ವಜನಿಕರು ಹಾಗೂ ಕೆಲವು ಸಂಘಟಕರು ನಗರಾಭಿವೃದ್ಧಿ ಯೋಜನೆ ಇಲಾಖೆ ಅಧಿಕಾರಿಗಳಿಗೆ ಲಿಖೀತವಾಗಿ ದೂರು ಸಲ್ಲಿಸುತ್ತ ಬಂದರೂ ಯಾವುದೇ ಪ್ರಯೋಜನೆ ಆಗಿಲ್ಲ.
ಜಿಲ್ಲಾಧಿಕಾರಿಗಳು ಕಾಮಗಾರಿ ನಿರ್ವಹಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳಬೇಕು. ಬೇಕಾಬಿಟ್ಟಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರನ ಮೇಲೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ನಗರೋತ್ಧಾನ ಯೋಜನೆಯಡಿ ಪಟ್ಟಣದಲ್ಲಿ ನಡೆದಿರುವ ಡಾಂಬರೀಕರಣ ಹಾಗೂ ಸಿಸಿ ರಸ್ತೆ ಕಾಮಗಾರಿಗಳು ಕಳಪೆಯಾಗಿವೆ. ಒಳಚರಂಡಿ ಚೇಂಬರ್‌ಗಳನ್ನು ಒಡೆದು ಹಾಕಿದ್ದಲ್ಲದೇ ಅವುಗಳನ್ನು ಸುತ್ತಲೂ ಕಡಿ ಕಂಕರಗಳಿಂದ ಮುಚ್ಚಿ ಬೇಕಾಬಿಟ್ಟಿ ಕಾಮಗಾರಿ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲಾ ನಗರಾಭಿವೃದ್ಧಿ ಯೋಜನೆ ಇಲಾಖೆಗೆ ಲಿಖೀತವಾಗಿ ದೂರು ಸಲ್ಲಿಸಿದ್ದೇವೆ. ಕೂಡಲೇ ಕಾಮಗಾರಿ ತಪಾಸಣೆ ಕೈಗೊಂಡು ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಬೇಕು.
ಜೈಭೀಮ ಮುತ್ತಗಿ, ಕರವೇ ತಾಲೂಕು ಉಪಾಧ್ಯಕ್ಷ
ಒಳಚರಂಡಿ ಚೇಂಬರ್‌ಗಳು ಒಡೆದು ಹಾಗೆ ಮುಚ್ಚಿ ರಸ್ತೆ ಕಾಮಗಾರಿ ಕೈಗೊಂಡಿರುವ ದೂರಿನ ಬಗ್ಗೆ ಎರಡು ದಿನದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಈ ವಿಷಯ ಕುರಿತು ಗುತ್ತಿಗೆದಾರನ ಜೊತೆ ಈಗಲೇ ದೂರವಾಣಿ ಮೂಲಕ ಮಾತನಾಡುತ್ತೇನೆ.
ಮಹೇಶ ಕಲಾಲ್, ನಗರಾಭಿವೃದ್ಧಿ ಕೋಶದ ಎಇಇ
ಜಿ.ಟಿ. ಘೋರ್ಪಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.