ಕೇಂದ್ರದ ವಿರುದ್ಧ ಕಾರ್ಮಿಕರ ಕಹಳೆ
Team Udayavani, Aug 3, 2018, 1:06 PM IST
ವಿಜಯಪುರ: ಅಂಗನವಾಡಿಗಳ ಖಾಸಗೀಕರಣ ಹಾಗೂ ಗುತ್ತಿಗೆ ಪದ್ಧತಿ ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ತಿಂಗಳು ಎರಡು ಹಂತದಲ್ಲಿ ವಿಭಿನ್ನ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಆ.9ರಂದು ಕಾರ್ಮಿಕ ಸಂಘಟನೆಗಳು ಜೈಲ ಭರೋ ಹಾಗೂ ಆ.14ರಂದು ಕರಾಳ ದಿನವನ್ನಾಗಿ ಆಚರಿಸಲು ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ.
ಕರ್ನಾಟಕ ಪ್ರಾಂತ ರೈತ ಸಂಘ ಸಿಐಟಿಯು, ಗ್ರಾಮ ಪಂಚಾಯತಿ ನೌಕರ ಸಂಘ, ಅಂಗನವಾಡಿ, ಬಿಸಿಯೂಟ, ಕರ್ನಾಟಕ ದಲಿತ ಹಕ್ಕುಗಳ ಸಮಿತಿ, ಜನವಾದಿ ಮಹಿಳಾ ಸಂಘ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಜಂಟಿ ಸಭೆಯಲ್ಲಿ ಈ ಕುರಿತಂತೆ ನಿರ್ಣಯ ಸ್ವೀಕರಿಸಲಾಗಿದೆ. ಕಾರ್ಮಿಕ ಮುಖಂಡ ಅಣ್ಣಾರಾಯ ಈಳಿಗೇರ ಅಧ್ಯಕ್ಷತೆಯಲ್ಲಿ ಜರುಗಿದ ಜಂಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಂತದಲ್ಲಿ ಮಾತನಾಡಿದ ಅಣ್ಣಾರಾಯ, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ಕಳೆದ ಲೋಕಸಭೆ ಚುನಾವಣೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಲಿಲ್ಲ.
ದೇಶದ ಜನರಿಗೆ ಅಚ್ಛೇ ದಿನ್ ಆಗಮಿಸಲಿವೆ ಎಂಬ ಭರವಸೆ ಭ್ರಮನಿರಸನ ಸೃಷ್ಟಿಸಿದೆ. ವಿದೇಶದಲ್ಲಿರುದ ಲಕ್ಷಾಂತರ ಕೋಟಿ ರೂ. ಕಪ್ಪು ಹಣ ಭಾರತಕ್ಕೆ ತಂದು, ಪ್ರತಿ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಮಾಡುವ ಭರವಸೆ ಈಡೇರಿಲ್ಲ. ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನಗೊಳ್ಳಲಿಲ್ಲ. ರೈತರ ಬೆಳೆಗಳಿಗೆ ವೈಜ್ಞಾನಿಕ
ಬೆಲೆ ಘೋಷಣೆ ಆಗಿಲ್ಲ. ಅವರ ಸಂಕಷ್ಟ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿಲ್ಲ. ನೀರಾವರಿ ಯೋಜನೆಗಳು ಅನುಷ್ಠಾನಗೊಳಿಸಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಹೀಗಾಗಿ ಬಿಜೆಪಿ ಸರ್ಕಾರದ ಕಾರ್ಮಿಕ ಹಾಗೂ ನಾಗರಿಕ, ರೈತ ವಿರೋಧಿಗೆ ಖಂಡನೆ, ದೇಶದ ಮಹಿಳಾ ದೌರ್ಜನ್ಯ ತಡೆಗೆ ಕಠಿಣ ಕಾನೂನು ರಚನೆ, ಅಂಗನವಾಡಿ ಕೇಂದ್ರಗಳ ಖಾಸಗೀಕರಣ ತಡೆಯುವುದು, ಕಾರ್ಮಿಕರ ಶೋಷಣೆಗೆ
ಕಾರಣವಾಗಿರುವ ಗುತ್ತಿಗೆ ಪದ್ಧತಿ ರದ್ದತಿ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡು ಹಂತದಲ್ಲಿ ಹೋರಾಟ ನಡೆಸಲಾಗುತ್ತಿದೆ. ಇದಕ್ಕಾಗಿ ಆ.9ರಂದು ಜೈಲ ಬರೋ ಮತ್ತು ಆ.14ರಂದು ಕರಾಳ ದಿನಾಚರಣೆ ಹಮ್ಮಿಕೊಳ್ಳಲು ನಿರ್ಧರಿಸಲಾಗುತ್ತಿದೆ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಸುರೇಖಾ ರಜಪೂತ, ಭಾರತಿ ವಾಲಿ, ಲಕ್ಷ್ಮಣ ಹಂದ್ರಾಳ, ಸುನಂದಾ ನಾಯಕ, ಸುಮಂಗಲಾ ಆನಂದಶೆಟ್ಟಿ, ಶೈಲಜಾ ಮುಲ್ಲಾ, ಅಶ್ವಿನಿ ತಳವಾರ, ಮಾದೇವಿ ಗುಗ್ಗರಿ, ಪಂಚಾಯತಿ ನೌಕರರ ರಾಜ್ಯದ ಸದಸ್ಯ ವಿಠ್ಠಲ ಹೊನಮೋರೆ, ಸಂಗು ನಾಲ್ಕಮಾನ, ಸೋಮಲಿಂಗ ತೋಂಟಾಪುರ, ಎನ್.ಕೆ.ಗುಡಿಮನಿ, ರಂಗಪ್ಪ ದಳವಾಯಿ, ಎಂ.ಕೆ. ಚಳ್ಳಗಿ, ದೇವದಾಸಿ ಸಂಘದ ರೇಣುಕಾ ಯಂಟಮಾನ, ಪರಶುರಾಮ ಮಂಟೂರ, ಸಿದ್ಧರಾಮ ಬಂಗಾರಿ, ಭೀಮರಾಯ ಪೂಜೇರಿ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.