World’s Top Scientists List: ವಿಜಯಪುರ ಮೂವರು ಸಂಶೋಧಕರು ಆಯ್ಕೆ
Team Udayavani, Oct 7, 2023, 7:38 PM IST
ವಿಜಯಪುರ : 2023 ನೇ ವರ್ಷದ ವಿಶ್ವದ ಉನ್ನತ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ವಿಜಯಪುರದ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಮೂವರು ಸಂಶೋಧಕರನ್ನು ಆಯ್ಕೆ ಮಾಡಲಾಗಿದೆ.
ವಿಜಯಪುರದ ಬಿ. ಎಲ್. ಡಿ. ಇ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ, ಡಾ. ಕುಸಾಲ ದಾಸ ಹಾಗೂ ಡಾ. ರಘು ಎ. ವಿ. ಅಇವರಿಗೆ ಔಷಧ ವಿಜ್ಞಾನ, ಶರೀರ ಶಾಸ್ತ್ರ ಹಾಗೂ ಪಾಲಿಮರ್ ಕ್ಷೇತ್ರದಲ್ಲಿನ ಸಂಶೋಧನೆಗಾಗಿ 2023 ನೇ ವರ್ಷದ ವಿಶ್ವದ ಉನ್ನತ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ.
ಅಮೇರಿಕಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ನೆದರಲ್ಯಾಂಡಿನ ಎಲ್ಸವಿಯರ್ ಪ್ರಕಾಶನ ಸಂಸ್ಥೆ ಪ್ರತಿ ವರ್ಷ ಸೈಟೇಷನ್ ಇಂಡೆಕ್ಸ್ ಆಧಾರದ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ, ಶ್ರೇಷ್ಠ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸುತ್ತದೆ.
19 ಪೇಟೆಂಟ್ ಪಡೆದಿರುವ ಹಾಗೂ 21 ಸಂಶೋಧನಾ ಪ್ರಕಟನೆ ಪ್ರಕಟಿಸಿರುವ ಡಾ. ರಾಘವೇಂದ್ರ ಕುಲಕರ್ಣಿ ಅವರು ಸತತ 3 ನೇ ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪಾಲಿಮರ್ ಆಧಾರಿತ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಿರುವ ಭಾರತದ ಸಂಶೋಧಕರಲ್ಲಿ 15ನೇ ಸ್ಥಾನದಲ್ಲಿದ್ದು, ವಿಶ್ವದ 127ನೇ ಸ್ಥಾನದಲ್ಲಿದ್ದಾರೆ. ಪಡೆದಿದ್ದಾರೆ. ಸಂಶೋಧನೆಗಾಗಿ ರೂ. 97 ಲಕ್ಷ ಅನುದಾನ ಪಡೆದಿದ್ದಾರೆ.
ಡಾ. ಕುಸಾಲ ದಾಸ ಅವರು ಶರೀರ ಶಾಸ್ತ್ರ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಿರುವ ಭಾರತದ ಸಂಶೋಧಕರಲ್ಲಿ 186ನೇ ಸ್ಥಾನದಲ್ಲಿದ್ದು, ವಿಶ್ವದಲ್ಲಿ 2407 ನೇ ಸ್ಥಾನ ಪಡೆದಿದ್ದಾರೆ. 135 ಸಂಶೋಧನಾ ಪ್ರಕಟಿಸಿರುವ ಇವರು, 2 ಪೇಟೆಂಟ್ ಪಡೆದಿದ್ದು, ಸಂಶೋಧನೆಗಾಗಿ 60 ಲಕ್ಷ ರೂ. ಅನುದಾನವನ್ನೂ ಪಡೆದುಕೊಂಡಿದ್ದಾರೆ.
ಡಾ. ರಘು ಎ.ವಿ. ಅವರು ಪಾಲಿಮರ್ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನೆ ಮಾಡಿರುವ ಭಾರತದ ಸಂಶೋಧಕರಲ್ಲಿ 20 ನೇ ಸ್ಥಾನದಲ್ಲಿದ್ದು, ವಿಶ್ವದ 326 ನೇ ಸ್ಥಾನ ಪಡೆದಿದ್ದಾರೆ. 110 ಸಂಶೋಧನಾ ಪ್ರಕಟನೆ ರಚಿಸಿದ್ದು, ಸಂಶೋಧನೆಗಾಗಿ 25 ಲಕ್ಷ ಅನುದಾನ ಪಡೆದಿದ್ದಾರೆ. ಕರ್ನಾಟಕ ಸರಕಾರದ ಸರ್ ಸಿ.ವಿ. ರಾಮನ್ ಪ್ರಶಸ್ತಿಯೂ ಇವರ ಮುಡಿಗೇರಿದೆ.
ಬಿಎಲ್‍ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಮೂವರು ಹಿರಿಯ ಸಂಶೋಧಕರ ಸಾಧನೆಗೆ ಸಾಧನೆಗೆ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸಚಿವ ಡಾ.ಎಂ.ಬಿ. ಪಾಟೀಲ, ಸಮಕುಲಾಧಿಪತಿ ಡಾ.ವೈ.ಎಂ. ಜಯರಾಜ, ಕುಲಪತಿ ಡಾ.ಆರ್.ಎಸ್.ಮುಧೋಳ ಹಾಗೂ ಅಡಳಿತ ಮಂಡಳಿ ಅಭಿನಂದಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.