ಅಧಿಕಾರಿಯಿಂದ ಹಾನಿಯಾದ ಭತ್ತದ ಬೆಳೆ ವೀಕ್ಷಣೆ
Team Udayavani, Apr 10, 2020, 5:03 PM IST
ಯಡ್ರಾಮಿ: ಕುರುಳಗೇರಾ ಗ್ರಾಮದಲ್ಲಿ ಮಳೆಗೆ ಬಿದ್ದ ಭತ್ತದ ಬೆಳೆಯನ್ನು ಜಿಲ್ಲಾ ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ ವೀಕ್ಷಿಸಿದರು. ಜಿಪಂ ಸದಸ್ಯ ದಂಡಪ್ಪ ಸಾಹು, ತಾಪಂ ಸದಸ್ಯ ಮಲ್ಲನಗೌಡ ಪಾಟೀಲ ಇದ್ದರು.
ಯಡ್ರಾಮಿ: ತಾಲೂಕಿನಲ್ಲಿ ಎರಡು ದಿಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಭತ್ತದ ಜಮೀನುಗಳಿಗೆ ಜಿಲ್ಲಾ ಕೃಷಿ ಉಪನಿರ್ದೇಶಕಿ ಭೇಟಿ ನೀಡಿ, ನಷ್ಟ ಹೊಂದಿದ ಗದ್ದೆಗಳನ್ನು ವೀಕ್ಷಿಸಿದರು.
ತಾಲೂಕಿನ ಬಳಬಟ್ಟಿ, ಬಿಳವಾರ, ಕುರುಳಗೇರಾ, ಮಳ್ಳಿ, ನಾಗರಹಳ್ಳಿ, ಬಿರಾಳ (ಹಿಸ್ಸಾ) ಗ್ರಾಮಗಳ ಭತ್ತದ ಗದ್ದೆಗಳಿಗೆ ಭೇಟಿ ನೀಡಿದ ಕೃಷಿ ಅಧಿಕಾರಿಗಳು, ಮಳೆ ಮತ್ತು ಬಿರುಗಾಳಿಗೆ ನೆಲಕ್ಕೆ ಬಿದ್ದ ಭತ್ತದ ಬೆಳೆ ವೀಕ್ಷಿಸಿದರು. ನಂತರ ಕುರುಳಗೇರಾ ಗ್ರಾಮದಲ್ಲಿ ಹಾನಿಗೊಳಗಾದ ಭತ್ತದ ರೈತರನ್ನು ಭೇಟಿ ಮಾಡಿದ ಜಿಲ್ಲಾ ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ ಮಾತನಾಡಿ, ಕೂಡಲೇ ಗ್ರಾಮಲೆಕ್ಕಿಗರು ಹಾಗೂ ತಾಲೂಕು ಕೃಷಿ ಅಧಿ ಕಾರಿಗಳ ತಂಡದಿಂದ ಹಾನಿಗೊಳಗಾದ ಬೆಳೆಯನ್ನು ಸರ್ವೇ ಮಾಡಿಸಿ ಅದರ ಕುರಿತು ಸರಕಾರಕ್ಕೆ ಶೀಘ್ರದಲ್ಲಿ ವರದಿ ಕಳುಹಿಸಲಾಗುವುದು ಎಂದು ತಿಳಿಸಿದರು.
ಜಿ.ಪಂ ಸದಸ್ಯ ದಂಡಪ್ಪ ಸಾಹು ಕುರುಳಗೇರಾ, ತಾಪಂ ಸದಸ್ಯ ಮಲ್ಲನಗೌಡ ಪಾಟೀಲ, ಜೇವರ್ಗಿ ಕೃಷಿ ಸಹಾಯಕ ನಿರ್ದೇಶಕ ಸುನೀಲಕುಮಾರ ಜವಳಗಿ, ವಿಎ ಮಹಿಬೂಬ ಟೇಲರ, ಅರವಿಂದ ಸಾಹು ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕಾಲುವೆಗೆ ಮಕ್ಕಳೊಂದಿಗೆ ತಾಯಿ ಹಾರಿದ ಪ್ರಕರಣ; ನಾಲ್ಕನೇ ಮಗುವಿನ ಶವ ಪತ್ತೆ
Vijayapura: ನಾಲ್ಕು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ; ಮಹಿಳೆ ಬಚಾವ್, 2 ಮಕ್ಕಳು ಸಾವು
Congress Government: ಡಿ.ಕೆ.ಶಿವಕುಮಾರ್ ಎಂದಿಗೂ ಸಿಎಂ ಆಗುವುದಿಲ್ಲ: ಯತ್ನಾಳ್
ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳದ 4-5 ಜನರೇ ಟಾರ್ಗೆಟ್: ಯತ್ನಾಳ್
BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.