ಬಸ್‌ನಲ್ಲಿ ನಗರ ಸುತ್ತಿದ ಯತ್ನಾಳ
Team Udayavani, Feb 4, 2019, 11:31 AM IST
ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ರವಿವಾರ ಸಾರಿಗೆ ಸಂಸ್ಥೆ ಬಸ್‌ನಲ್ಲಿ ನಗರ ಸಂಚಾರದ ಮೂಲಕ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು.
ನಗರದ ನೂತನ ಬಡಾವಣೆಗಳಿಗೆ, ಕಾಲೋನಿಗಳಿಗೆ, ಮೂಲಭೂತ ಸೌಕರ್ಯಗಳು ಮತ್ತು ನಗರ ಸಾರಿಗೆ ವ್ಯವಸ್ಥೆ ಜೊತೆಗೆ ಬಸ್ ನಿಲ್ದಾಣ ಸ್ಥಾಪನೆ ಸೇರಿದಂತೆ ಸಾರ್ವಜನಿಕರ ದೂರು ಆಲಿಸಲು ಪಾಲಿಕೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸ್ವಯಂ ಬಡಾವಣೆ ಸುತ್ತಿದರು. ನಗರ ಸಾರಿಗೆ ಬಸ್‌ನಲ್ಲಿ ಹೊಸ ಬಡಾವಣೆಗಳಾದ ಸಾಯಿಪಾರ್ಕ್, ಗಡಗಿ ಲೇಔಟ್, ಗೋಕುಲ್ ಪಾರ್ಕ್ ಸಮರ್ಥ ನಗರ, ವಜ್ರ ಹನುಮಾನ ನಗರ, ಸಾಯಿ ಹಾಸ್ಪಿಟಲ್ ಏರಿಯಾ ಸೇರಿದಂತೆ ಸುತಮುತ್ತಲಿನ ಬಡಾವಣೆಗಳಲ್ಲಿ ಸಂಚರಿಸಿದರು.
ಆಯಾ ಬಡಾವಣೆಗಳ ನಿವಾಸಿಗಳು ಶಾಸಕರಿಗೆ ತಮ್ಮ ಬಡಾವಣೆಯಲ್ಲಿನ ಸಮಸ್ಯೆ ನಿವೇದಿಸಿಕೊಂಡರು. ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಸಮಸ್ಯೆ ಚರ್ಚಿಸಿ, ತ್ವರಿತ ಪರಿಹಾರಕ್ಕೆ ಸೂಚನೆ ನೀಡಿದರು.
ನಾನು ವಿಜಯಪುರ ನಗರ ಶಾಸಕನಾದ ಮೇಲೆ ನಿರಂತರವಾಗಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡು, ಆಯಾ ವಾರ್ಡ್‌ಗಳ ಸಮಸ್ಯೆಗಳಿಗೆ ಪರಿಹಾರ ನೀಡಿದ್ದೇನೆ. ಆದೆ ರೀತಿ ಇದೀಗ ನಗರ ಸಚಾರದ ಮೂಲಕ ನಿಮ್ಮ ಬಳಿಗೆ ಬಂದಿದ್ದೇನೆ. ಗಡಗಿ ಲೇಔಟ್, ಗೋಕುಲ್‌ಪಾರ್ಕ್, ಸಮರ್ಥ ನಗರ ಏರಿಯಾಗಳಲ್ಲಿ ಹೊಸದಾಗಿ ಬಸ್ ಸಂಚಾರ, ಸಿಟಿ ಬಸ್ ನಿಲ್ದಾಣ ನಿರ್ಮಿಸಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮೇಯರ್ ಶ್ರೀದೇವಿ ಲೋಗಾವಿ, ಆಯುಕ್ತ ಡಾ| ಔದ್ರಾಮ್, ಪಾಲಿಕೆ ಸದಸ್ಯರಾದ ರಾಹುಲ್ ಜಾಧವ, ಉಮೇಶ ವಂದಾಲ, ಪ್ರೇಮಾನಂದ ಬಿರಾದಾರ, ಲಕ್ಷ್ಮೀ ಕನ್ನೋಳಿ, ಅಶೋಕ ಬೆಲ್ಲದ, ಪರಶುರಾಮ ರಜಪೂತ, ಡಿಎಸ್‌ಪಿ ಅಶೋಕ, ಬಿಜೆಪಿ ಮುಖಂಡರಾದ ಭಾಗಪ್ಪ ಕನ್ನೊಳ್ಳಿ, ಮುಕುಂದ ದೇಸಾಯಿ, ಶ್ರೀನಿವಾಸ ಬೆಟಗೇರಿ, ಶ್ರೀಹರಿ ಗೊಳಸಂಗಿ, ಚಂದ್ರು ಚೌಧರಿ, ರಾಮನಗೌಡ ಪಾಟೀಲ ಯತ್ನಾಳ, ಮಧು ಯಲಗುದ್ರಿ, ದತ್ತಾ ಗೋಲಾಂಡೆ, ಅಮೀತ ಗರುಡಕರ ಸೇರಿದಂತೆ ಸ್ಥಳಿಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.