ಯೋಗ ಕಾರ್ಯಕ್ರಮ ಸಮಾರೋಪ
Team Udayavani, Jun 30, 2021, 8:49 PM IST
ಇಂಡಿ: 2018-19, 2019-20 ಎರಡು ಬಾರಿ ಗಾಂಧಿ ಗ್ರಾಮ ಪ್ರಶಸ್ತಿ ಮತ್ತು ಸಿ.ಜಿ. ಪಾರೆಯವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅತ್ಯುತ್ತಮ ಪಿಡಿಒ ರಾಜ್ಯ ಪ್ರಶಸ್ತಿ ಬಂದಿದ್ದು ಇಂಡಿ ತಾಲೂಕಿನ ಹಿರಿಮೆ ಹೆಚ್ಚಿದೆ ಎಂದು ಯೋಗ ಗುರು ಬಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಜಿಆರ್‌ಜಿ ಕಲಾ, ವೈಎಪಿ ವಾಣಿಜ್ಯ ಮತ್ತು ಎಂಎಫ್‌ಡಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶಾಂತೇಶ್ವರ ಶಾಲೆಯಲ್ಲಿ 1989ರಲ್ಲಿ ಎಸ್ಸೆಸ್ಸೆಲ್ಸಿ ಕಲಿತ ಗೆಳೆಯರ ಬಳಗ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಇಂಡಿ, ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ನಡೆದ ಯೋಗ ಕಾರ್ಯಕ್ರಮ ಸಮಾರೋಪದಲ್ಲಿ ಅವರು ಮಾತನಾಡಿದರು.
ಕ್ಷೇತ್ರ ಸಮನ್ವಯ ಅ ಧಿಕಾರಿ ಸಿ.ಎಂ. ಬಂಡಗಾರ ಮಾತನಾಡಿ, ಪಾರೆಯವರು ಗ್ರಾಪಂ ಅನುದಾನದಲ್ಲಿ ಶಿಕ್ಷಣಕ್ಕೆ 40 ಲಕ್ಷ ರೂ. ಮತ್ತು ಗ್ರಾಪಂ ಮಟ್ಟದಲ್ಲಿ ಡಿಜಿಟಲ್ ಗ್ರಂಥಾಲಯ ಮಾಡಿದ್ದು ಜಿಲ್ಲೆಯಲ್ಲಿಯೇ ಪ್ರಥಮ ಎಂದರು. ಯೋಗ ತರಬೇತಿ ಕುರಿತು ಶಿವಾನಂದ ಚಿಕ್ಕಬೇವನೂರ, ರಮೇಶ ಕುಲಕರ್ಣಿ, ಶ್ರೀಮಂತ ಬಾರಿಕಾಯಿ, ಉಮೇಶ ಕೋಳೆಕರ, ಸನ್ಮಾನಿತ ಸಿ.ಜಿ. ಪಾರೆ ಮಾತನಾಡಿದರು.
ಪ್ರಾಚಾರ್ಯ ಎಸ್.ಬಿ. ಜಾಧವ, ಕಜಾಪ ಅಧ್ಯಕ್ಷ ಆರ್.ವಿ. ಪಾಟೀಲ, ಅನಿಲ ಏಳಗಿ, ಬಸವರಾಜ ದೇವರ, ಸುರೇಶ ಅವರಾದಿ, ಎಸ್.ಬಿ. ಪಾಟೀಲ, ವೈ.ಜಿ. ಬಿರಾದಾರ, ಸುರೇಶ ಅವರಾದಿ, ಶಾಂತು ಧನಶೆಟ್ಟಿ, ಬಸವರಾಜ ಚೌಧರಿ, ರವಿ ವಂದಾಲ, ಶಹಾಜಿ ಪಾಟೀಲ, ಮಹಿಬೂಬ ಉಡಚಾಣಕರ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.