ಯುವಕರು ಕೃಷಿ ವಿಮುಖರಾಗಿದ್ದು ದೇಶಕ್ಕೆ ಸಮಸ್ಯೆ: ಬಾಲಗೊಂಡ
Team Udayavani, Aug 28, 2018, 3:24 PM IST
ವಿಜಯಪುರ: ಪ್ರಸಕ್ತ ಸಂದರ್ಭದಲ್ಲಿ ದೇಶದ ಯುವ ಸಮೂಹ ಕೃಷಿ ವ್ಯವಸ್ಥೆಯಿಂದ ವಿಮುಖರಾಗುತ್ತಿದ್ದು ಭವಿಷ್ಯದ ಭಾರತಕ್ಕೆ ಸಮಸ್ಯೆ ತಂದೊಡ್ಡಲಿದೆ ಪ್ರಗತಿಪರ ರೈತ ಸಿದ್ದು ಬಾಲಗೊಂಡ ಆತಂಕ ವ್ಯಕ್ತಪಡಿಸಿದರು.
ಕೊಲ್ಹಾರ ತಾಲೂಕು ಕೇಂದ್ರದಲ್ಲಿ ಉಪ್ಪಾಶೆಪ್ಪ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ರೈತ ಜಾಗೃತಿ ಜಾತ್ರೆ ಸಾವಯವ ಕೃಷಿ ಸಮಾರಂಭದಲ್ಲಿ ಮಾತನಾಡಿದ ಅವರು, ಆಧುನಿಕ ಜೀವನ ಶೈಲಿಗೆ ಆದ್ಯತೆ ನೀಡುತ್ತಿರುವ ಕಾರಣ ಭಾರತೀಯ ಮೂಲ ಕೃಷಿ ಅಪಾಯಕ್ಕೆ ಸಿಲುಕಿದೆ ಎಂದರು.
ರೈತ ಜಾಗೃತಿ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹರ್ಷಗೌಡ ಪಾಟೀಲ, ಸರ್ಕಾರ ಮಾಡುವಂತಹ ಕೃಷಿ ಮೇಳ, ಅರಣ್ಯ ಕೃಷಿ, ಅರಣ್ಯ ಸಂರಕ್ಷಣೆಯಂತಹ ಕಾರ್ಯಕ್ರಮಗಳನ್ನು ರೈತರು ತಮ್ಮ ಸ್ವಂತ ಖರ್ಚಿನಿಂದ ಹಮ್ಮಿಕೊಂಡಿದ್ದು ಸಂತೋಷದಾಯಕ ವಿಷಯ ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಕೃಷಿ ಜಾತ್ರೆಯನ್ನು ಶ್ರಾವಣ ಮಾಸದಲ್ಲಿ ನಡೆಸಿದರೆ ಈ ರೀತಿ ಮಳೆ ಸುರಿಯುವ ಕಾರಣ ರೈತರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಜನವರಿ ತಿಂಗಳಲ್ಲಿ ನಡೆಸಿದರೆ ರೈತರಿಗೆ ಕೃಷಿ ತಜ್ಞರಿಂದ ಅನುಕೂಲ ಮಾಹಿತಿ ಸಿಗುತ್ತದೆ ಎಂದು ಸಲಹೆ ನೀಡಿದರು.
ಜೆಡಿಎಸ್ ಧುರೀಣ ಅಪ್ಪುಗೌಡ ಪಾಟೀಲ ಮಾತನಾಡಿ, ಇಂದಿನ ಯುವಕರು ದುಶ್ಚಟಗಳಿಂದ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಅನೇಕ ರೈತರು ಅಧಿಕ ಇಳುವರಿ ಪಡೆಯಲು ಅತಿಯಾದ ರಾಸಾಯನಿಕ ಗೊಬ್ಬರಗಳನ್ನು ಬಳಸಿ ವಿಷಯುಕ್ತ ಆಹಾರವನ್ನು ಬೆಳೆಯುತ್ತಿದ್ದಾರೆ. ಆದ್ದರಿಂದ ರೈತರು ಸಾವಯವ ಕೃಷಿಯತ್ತ ಗಮನ ಹರಿಸಿ ವಿಷಮುಕ್ತ ಬೆಳೆಯನ್ನು ಬೆಳೆಯಬೇಕು
ಎಂದರು.
ಅಖೀಲ ಭಾರತ ಸಾವಯವ ಕೃಷಿ ದೃಢೀಕರಣ ಮತ್ತು ಮಾರುಕಟ್ಟೆ ಸಲಹೆಗಾರ ಯೋಗೇಶ ಅಪ್ಪಯ್ಯಜ್ಜ ಮಾತನಾಡಿ, ರೈತರು ಸಾವಯವ ಕೃಷಿ ಬೆಳೆ ಬೆಳೆದರೆ ಸಾಲದು. ಸಾವಯವ ಬೆಳೆಗಳಿಗೆ ಹೆಚ್ಚಿನ ಬೆಲೆ ಸಿಗಬೇಕಾದರೆ ಸಾವಯವ ದೃಢೀಕರಣ ಅಗತ್ಯ ಎಂದರು.
ರೋಹಿಣಿ ಬಯೋಟೆಕ್ ಕಂಪನಿ ವ್ಯವಸ್ಥಾಪಕ ಎಂ.ವೈ. ಕಟ್ಟಿ ಮಾತನಾಡಿ, ರೈತರು ಮಣ್ಣನ್ನು ಪರೀಕ್ಷಿಸಿಕೊಳ್ಳಿ, ಆಮಣ್ಣಿನಲ್ಲಿ ಹೆಚ್ಚಿನ ಫಲವತ್ತತೆ ಕಾಯ್ದುಕೊಳ್ಳಲು ರೈತರು ಯಾವ ಬೆಳೆ, ಭೂಮಿಗೆ ಎಷ್ಟೆಷ್ಟು ಪ್ರಮಾಣದಲ್ಲಿ ರಾಸಾಯನಿಕ ಬಳಸಬೇಕು ಎಂದು ತಜ್ಞರ ಸಲಹೆ ಮೇರೆಗೆ ಬಳಸಬೇಕು ಎಂದು ಸಲಹೆ ನೀಡಿದರು; ನಾಗಲದಿನ್ನಿಯ ಸದ್ಗುರು ಸದಾನಂದ ಶಿವಯೋಗಿಗಳ ಆಶ್ರಮ ಮಲ್ಲಿಕಾರ್ಜುನ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಈರಪ್ಪ ಬಾಲಗೊಂಡ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಸ್ತರಣಾಧಿಕಾರಿ ಡಾ| ಆರ್.ಬಿ.ಬೆಳ್ಳಿ, ಶಿವಾನಂದ ಮಂಗಾನವರ ಇದ್ದರು.
ಕಾವ್ಯಾ ದೇಸಾಯಿ ಮತ್ತು ಸಂಗಡಿಗರು ರೈತ ಗೀತೆ ಹಾಡಿದರು. ಶಿಕ್ಷಕಿ ಆರ್.ಎಸ್. ಗಿಡ್ಡಪ್ಪಗೋಳ ನಿರೂಪಿಸಿದರು. ಕೆ.ಎಸ್. ಬಾಲಗೊಂಡ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.