Vijayapura: ಸಿಎಂ ಕುರ್ಚಿಯಲ್ಲಿ ಟಗರು ಕುಂತವ್ರೆ, ಅಲ್ಲಾಡಿಸಲು ಅಷ್ಟು ಸುಲಭನಾ..? ಜಮೀರ್
Team Udayavani, Oct 8, 2024, 3:38 PM IST
ವಿಜಯಪುರ: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಸಿಎಂ ಕುರ್ಚಿಯಲ್ಲಿ ಟಗರು (ಸಿದ್ದರಾಮಯ್ಯ) ಕುಂತವ್ರೆ. ಆ ಟಗರಿಗೆ ಅಲ್ಲಾಡಿಸಲು ಅಷ್ಟು ಸುಲಭನಾ?, ಅದು ಸಾಧ್ಯನಾ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.
ದಲಿತ ಸಿಎಂ ವಿಚಾರವಾಗಿ ಮಂಗಳವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ. ಕುರ್ಚಿ ಖಾಲಿ ಇದ್ದರೆ ತಾನೆ ಮುಂದಿನ ಮಾತು. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಖರ್ಗೆ ಅವರೇ ಹೇಳಿದ್ದಾರೆ ಎಂದು ಪುನರುಚ್ಚರಿಸಿದರು.
ಸಿಎಂ ಅಧಿಕಾರ ತಲಾ ಎರಡೂವರೆ ವರ್ಷ ಹಂಚಿಕೆಯಾಗಿದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಮೀರ್, ಇದು ಗೊತ್ತಿಲ್ಲ. ನಿಮಗೆ ಯಾರು ಹೇಳಿದ್ದು?. ಇದೆಲ್ಲ ಮಾಧ್ಯಮದವರ ಸೃಷ್ಟಿ. ಇದೇ ವಿಚಾರ ಕುರಿತು ಡಿ.ಕೆ.ಸುರೇಶ್ ಸಹ 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಹೇಳಿದ್ದಾರಲ್ಲ ಎಂದರು.
ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಹಿರಿಯ ನಾಯಕರು ಮತ್ತು ಮೈಸೂರು ಭೇಟಿ ಬಗ್ಗೆ ಮಾತನಾಡಿ ಅವರು, ಅಲ್ಲಿ ಹೋಗಿ ಭೇಟಿ ಮಾಡಿದ್ರಿ, ಇಲ್ಲಿ ಹೋಗಿ ಭೇಟಿ ಮಾಡಿದ್ರು.
ಯಾರನ್ನು ಭೇಟಿಯಾಗಬಾರದಾ?
ಜಾರಕಿಹೊಳಿ ಅವರು ಮೈಸೂರಿಗೂ, ಹೋಗುತ್ತಾರೆ, ಬೆಳಗಾವಿಗೂ ಹೋಗುತ್ತಾರೆ. ನಾನು ವಿಜಯಪುರಕ್ಕೆ ಬಂದಿದ್ದೇನೆ. ಮುಖಂಡರನ್ನು ಭೇಟಿ ಮಾಡುವುದು ತಪ್ಪಾ?. ಸಚಿವ ಶಿವಾನಂದ ಪಾಟೀಲ್ ಭೇಟಿಯಾಗಿದ್ದರು. ನಾವು ಜತೆಗೆ ಊಟ ಮಾಡಿದ್ದೇವೆ. ಅದು ಕೂಡ ಸುದ್ದಿ ಮಾಡೋಕಾಗುತ್ತಾ ಎಂದು ಬೇಸರ ವ್ಯಕ್ತಪಡಿಸಿದರು.
ಉಪಚುನಾವಣೆಯಲ್ಲಿ ಕುಮಾರಸ್ವಾಮಿಗೆ ಚನ್ನಪಟ್ಟಣ ಮತದಾರರು ತಕ್ಕಪಾಠ ಕಲಿಸುತ್ತಾರೆ:
ವಿಜಯಪುರ: ಈ ಬಾರಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಮತದಾರರು ಜೆಡಿಎಸ್ ನಾಯಕ, ಕೇಂದ್ರ ಸಚಿವ ಹೆಚ್. ಡಿ.ಕುಮಾರಸ್ವಾಮಿ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಮುಂಬರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಅವರಿಗೆ ಬಿಜೆಪಿ- ಜೆಡಿಎಸ್ ಮೈತ್ರಿ ಟಿಕೆಟ್ ಕೊಟ್ಟರೆ ನಮ್ಮ ಪಕ್ಷ ಉಳಿಯುತ್ತಾ ಎಂಬ ಕುಮಾರಸ್ವಾಮಿ ಹೇಳಿಕೆಗೆ ಮಂಗಳವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಆ ಪಕ್ಷ (ಜೆಡಿಎಸ್) ಎಲ್ಲಿದೆ ಉಳಿಯೋಕೆ?, ಜನ ಎಷ್ಟು ಅಂತಾ ಸಹಿಸಿಕೊಳ್ಳುತ್ತಾರೆ. ರಾಮನಗರ ಇತ್ತು, ರಾಮನಗರಕ್ಕೆ ರಾಜಿನಾಮೆ ಕೊಟ್ಟರು. ಈಗ ಸೋತು ಸುಣ್ಣರಾಗಿದ್ದಾರೆ. ಚನ್ನಪಟ್ಟಣಕ್ಕೆ ಜನ ಆಯ್ಕೆ ಮಾಡಿದ್ದರು. ಚನ್ನಪಟ್ಟಣ ಜನರನ್ನ ಕೇಳಿ ಮಂಡ್ಯ ಲೋಕಸಭಾ ಚುನಾವಣೆಗೆ ನಿಂತರಾ ಎಂದು ಪ್ರಶ್ನಿಸಿದರು.
ಅಲ್ಲದೇ, ಮಂಡ್ಯ ಲೋಕಸಭೆ ಚುನಾವಣೆಯಲ್ಲೂ ಚನ್ನಪಟ್ಟಣದಲ್ಲಿ ಜನ ಗೆಲ್ಲಿಸಿಕೊಂಡು ಬಂದಿದ್ದರು. ಆದರೆ, ಮಂಡ್ಯಕ್ಕೆ ಹೋಗುವ ಮುನ್ನ ಒಂದು ಮಾತು ಚನ್ನಪಟ್ಟಣ ಜನರನ್ನು ಕೇಳಿದ್ದರಾ?, ಚನ್ನಪಟ್ಟಣ ಮತದಾರರ ಅನುಮತಿ ತೆಗೆದುಕೊಂಡಿದ್ದಾರಾ?, ಏನೇನೂ ಕೇಳಿಲ್ಲ, ತಮ್ಮ ಮನಸ್ಸಿಗೆ ಬಂದಂಗೆ ಮಾಡಿದ್ದಾರೆ. ಹೀಗಾಗಿ ಜನ ಎಷ್ಟು ಅಂತಾ ಸಹಿಸಿಕೊಳ್ಳುತ್ತಾರೆ ಎಂದು ಕುಮಾರಸ್ವಾಮಿ ಅವರಿಗೆ ಜಮೀರ್ ಕುಟುಕಿದರು.
ಇದನ್ನೂ ಓದಿ: Jammu Kashmir Result: ಜಮ್ಮು-ಕಾಶ್ಮೀರದ ನೂತನ ಸಿಎಂ ಹೆಸರು ಘೋಷಿಸಿದ ಫಾರೂಕ್ ಅಬ್ದುಲ್ಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.T.Ravi; ನನ್ನ ಬಂಧನ ನ್ಯಾಯಾಂಗ ತನಿಖೆಯಾಗಲಿ…ಈಗಲೂ ಜೀವ ಬೆದರಿಕೆ ಇದೆ
C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.