ಹಣ ಕೊಟ್ಟರೆ ಸಿಗದ ಸರಕು ರಕ್ತ
ಸ್ವಾಮಿ ನರೇಂದ್ರಾಚಾರ್ಯಜಿ ಮಹಾರಾಜರ ಜನ್ಮೋ ತ್ಸವ-ರಕ್ತದಾನ ಶಿಬಿರ
Team Udayavani, Oct 13, 2019, 3:37 PM IST
ಭಾಲ್ಕಿ: ಇತ್ತೀಚೆಗೆ ಎಲ್ಲ ಭಾಗದಲ್ಲಿ ರಕ್ತದ ಅಭಾವ ಕಂಡು ಬರುತ್ತಿದೆ. ಬೇಡಿಕೆಗನುಗುಣವಾಗಿ ರಕ್ತ ಪೂರೈಕೆಯಾಗಬೇಕಾದರೆ ನವಯುವಕರು ರಕ್ತದಾನ ಮಾಡಲು ಉತ್ಸಾಹ ತೋರಬೇಕು ಎಂದು ಮುಖಂಡ ಕಿಶನರಾವ್ ಪಾಟೀಲ ಇಂಚೂರಕರ್ ಸಲಹೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಾರಾಷ್ಟ್ರದ ನಾಣಿಜಧಾಮ ಪೀಠದ ಸ್ವಾಮಿ ನರೇಂದ್ರಾಚಾರ್ಯಜೀ ಮಹಾರಾಜರ ಜನ್ಮೋತ್ಸವ ಅಂಗವಾಗಿ ಶ್ರೀ ಸಂಪ್ರದಾಯ ಸೇವಾ ಸಮಿತಿ ಮತ್ತು ಕನ್ನಡಪರ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಣ ಕೊಟ್ಟರೆ ಬೇರೆಲ್ಲ ಸರಕುಗಳು ತುರ್ತಾಗಿ ಸಿಗಬಹುದು. ಆದರೆ ಬೇರೆ ಬೇರೆ ಗುಂಪಿನ ರಕ್ತ ಲಭ್ಯವಾಗುವುದು ಕಷ್ಟದ ಕೆಲಸ. ಕಾರಣ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವ ಮಹಾತ್ಕಾರ್ಯಕ್ಕೆ ಎಲ್ಲ ಧರ್ಮದವರು ಕೈ ಜೋಡಿಸಬೇಕು ಎಂದು ಹೇಳಿದರು.
ಕನ್ನಡಪರ ಒಕ್ಕೂಟದ ಅಧ್ಯಕ್ಷ ಜೈರಾಜ ಕೊಳ್ಳಾ ಮಾತನಾಡಿ, ಸ್ವಾಮಿ ನರೇಂದ್ರಾಚಾರ್ಯಜೀ ಮಹಾರಾಜರ 112 ಜನ ಅಭಿಮಾನಿ ಭಕ್ತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದು ವಿಶೇಷವಾಗಿದೆ. ಪೂಜ್ಯರ ಆಶೀರ್ವಾದ ಅವರಿಗೆ ಲಭಿಸಲಿದೆ ಎಂದರು.
ಶ್ರೀ ಸಂಪ್ರದಾಯ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಾಲಾಜಿ ಕೋಠಾರೆ ಮಾತನಾಡಿ, ಸ್ವಾಮಿ ನರೇಂದ್ರಾಚಾರ್ಯಜೀ ಅವರ ಜನ್ಮದಿನೋತ್ಸವ ಅ.21ಕ್ಕೆ ನೆರವೇರುತ್ತದೆ. ಆ ನಿಮಿತ್ತ ಅಕ್ಟೋಬರ್ 2ರಿಂದ 15ರ ವರೆಗೆ ಜಿಲ್ಲಾದಾದ್ಯಂತ 7 ಕಡೆ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರಾಚಾರ್ಯ ಅಶೋಕ ರಾಜೋಳೆ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ನಗರ ಠಾಣೆಯ ಸಿಪಿಐ ಬಿ.ಅಮರೇಶ, ಕಲ್ಯಾಣ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ನಾಗಶೆಟೆಪ್ಪ ಲಂಜವಾಡೆ, ವೈಜಿನಾಥ ತಗಾರೆ, ವಿಠಲರಾವ್ ಮೇತ್ರೆ, ಟಿಎಚ್‌ಒ ಡಾ| ಜ್ಞಾನೇಶ್ವರ ನಿರಗೂಡೆ, ಸಿಎಂಒ ಡಾ|ರವಿ ಕಲಶೆಟ್ಟೆ, ರೋಟರಿ ಅಧ್ಯಕ್ಷ ಡಾ|ನಿತೀನ ಪಾಟೀಲ, ಪ್ರಾಚಾರ್ಯ ಎಸ್. ಎಸ್.ರಾಮಪೂರೆ, ಸತ್ಯವಾನ ವೈರಾಗೆ, ಬಮಶೆಟ್ಟಿ ಬಿರಾದಾರ, ಶ್ರೀ ಸಂಪ್ರದಾಯ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಶ್ರೀಧರ ಬಗದೂರೆ, ಓಂ ಪಾಟೀಲ, ಸಂಗಮೇಶ ಗುಮ್ಮೆ, ಮಾಳಸಕಾಂತ ವಾಘೆ , ಪ್ರಭು ಡಿಗ್ಗೆ, ಪಾಂಡುರಂಗ ಪಾಟೀಲ, ನಾಗನಾಥ ಪಾಟೀಲ, ದತ್ತಾತ್ರಯ ಧನುರೆ, ಲಕ್ಷ್ಮಣ ಪಾಟೀಲ, ಸಂಜೀವಕುಮಾರ ಬಿರಾದಾರ, ಅಯೋಧ್ಯತಾಯಿ ಸೂರ್ಯವಂಶಿ, ಮಂಗಳಾ ಸೋನಕಾಂಬಳೆ, ವಾಮನರಾವ್ ಮಾನೆ ಉಪಸ್ಥಿತರಿದ್ದರು. ತಾನಾಜಿ ಪಾಟೀಲ ಸ್ವಾಗತಿಸಿದರು. ಸಂಪ್ರದಾಯ ಸಮಿತಿ ಜಿಲ್ಲಾ ಸಚಿವ ಸತ್ಯವಾನ ಸೋಮವಂಶಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.