ಜಾಧವಗಿಂತ ಖರ್ಗೆ ಖರ್ಚೇ ಹೆಚ್ಚು

„ಲೋಕಸಭೆ ಚುನಾವಣೆ ಲೆಕ್ಕಾಚಾರ „64 ಲಕ್ಷ ಖರ್ಗೆ-42 ಲಕ್ಷ ರೂ. ಜಾಧವ ಖರ್ಚು

Team Udayavani, Jul 5, 2019, 9:42 AM IST

Udayavani Kannada Newspaper

ಕಲಬುರಗಿ: ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ| ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಅವರಿಗಿಂತ ಹೆಚ್ಚಿನ ಖರ್ಚು ಮಾಡಿದ್ದಾರೆ.

ನಾಮಪತ್ರ ಸಲ್ಲಿಸಿದ ದಿನದಿಂದ ಹಿಡಿದು ಚುನಾವಣೆ ದಿನದ ವರೆಗೂ ಮಾಡಲಾದ ಖರ್ಚು-ವೆಚ್ಚಗಳನ್ನು ವಿವರವಾಗಿ ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗಕ್ಕೆ ಜುಲೈ 3ರಂದು ಸಲ್ಲಿಸಿದ್ದು, ಅದರ ಪ್ರಕಾರ ಖರ್ಗೆ ಅವರು ಡಾ| ಉಮೇಶ ಜಾಧವಗಿಂತ 21 ಲಕ್ಷ ರೂ. ಹೆಚ್ಚು ಖರ್ಚು ಮಾಡಿದ್ದಾರೆ.

ಖರ್ಗೆ 64,00,845 ಲಕ್ಷ ರೂ. ಖರ್ಚು ಮಾಡಿದ್ದರೆ ಡಾ| ಜಾಧವ 42,48,386 ರೂ. ಖರ್ಚು ಮಾಡಿದ್ದಾರೆ. ಉಳಿದಂತೆ ಬಿಎಸ್ಪಿ ಕೆ.ಬಿ. ವಾಸು ಮೂರು ಲಕ್ಷ ರೂ. ಖರ್ಚು ಮಾಡಿದ್ದಾರೆ. ಸ್ಪರ್ಧಾ ಅಭ್ಯರ್ಥಿಗಳು ಸಲ್ಲಿಸಿದ್ದ ಖರ್ಚಿನ ವಿವರವನ್ನು ಚುನಾವಣಾ ಖರ್ಚು-ವೆಚ್ಚದ ನೋಡಲ್ ಅಧಿಕಾರಿಗಳು ತಾಳೆ ಹಾಕಿ ಅಂತಿಮಗೊಳಿಸುತ್ತಾರೆ. ಅದರ ಪ್ರಕಾರ ಕಳೆದ ಜೂನ್‌ ಕೊನೆ ವಾರದಲ್ಲಿ ಖರ್ಚಿನ ಸಮಗ್ರ ವರದಿ ಅಂತಿಮಗೊಳಿಸಲಾಗಿದೆ. ಅಂತಿಮ ವರದಿಯನ್ನು ಆಯೋಗಕ್ಕೆ ಸಲ್ಲಿಸುವ ಮುಖಾಂತರ ಕಲಬುರಗಿ ಲೋಕಸಭಾ ಕ್ಷೇತ್ರದ 2019ರ ಚುನಾವಣೆ ನಿರ್ವಹಣೆಯನ್ನು ಮುಕ್ತಾಯಗೊಳಿಸಿದಂತಾಗಿದೆ.

ಲೋಕಸಭೆ ಚುನಾವಣೆಯ ಸ್ಪರ್ಧಾ ಅಭ್ಯರ್ಥಿ ಭಾರತೀಯ ಚುನಾವಣಾ ಆಯೋಗದ ಪ್ರಕಾರ 75 ಲಕ್ಷ ರೂ. ಮೀರದಂತೆ ಖರ್ಚು ಮಾಡಲು ಅವಕಾಶವಿದೆ. 75 ಲಕ್ಷ ರೂ.ಗಿಂತ ಹೆಚ್ಚಿಗೆ ಖರ್ಚು ಮಾಡುವಂತಿಲ್ಲ. ಒಂದು ವೇಳೆ ಇದನ್ನು ಮೀರಿ ಖರ್ಚು ಮಾಡಿದರೆ ಅಯ್ಕೆಯಾದ ಅಭ್ಯರ್ಥಿ ಆಯ್ಕೆಯನ್ನೇ ಅಸಿಂಧುಗೊಳಿಸಲಾಗುತ್ತದೆ. ಅಲ್ಲದೇ ಸೋತ ಅಭ್ಯರ್ಥಿಗಳು ಖರ್ಚು-ವೆಚ್ಚದ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಸ್ಪರ್ಧಾ ಅಭ್ಯರ್ಥಿಗಳೆಲ್ಲರೂ ಚುನಾವಣಾ ಖರ್ಚು-ವೆಚ್ಚದ ವಿವರವನ್ನು ದಾಖಲೆಗಳ ಸಮೇತ ನಿಗಧಿತ ಅವಧಿಯೊಳಗೆ ಚುನಾವಣಾಧಿಕಾರಿಗೆ ಸಲ್ಲಿಸಬೇಕು. ಒಂದು ವೇಳೆ ಸಲ್ಲಿಸದೇ ಇದ್ದಲ್ಲಿ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಕೇಂದ್ರ ಚುನಾವಣಾ ಆಯೋಗ ನಿಷೇಧ ಹೇರುತ್ತದೆ.

ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಬಿಎಸ್ಪಿ ಸೇರಿ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಚುನಾವಣಾ ಖರ್ಚು-ವೆಚ್ಚದ ವಿವರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಧಾರಕೇಶ್ವರಯ್ಯ ಹಾಗೂ ಜಿ. ತಿಮ್ಮರಾಜು, ಆರ್‌ಎಸ್‌ಪಿಯ ಡಿ.ಕೆ. ಕೊಂಕಟೆ ಕೇರೂರ ಅತ್ಯಂತ ಕಡಿಮೆ ಎಂದರೆ ತಲಾ 12500 ರೂ. ಮಾತ್ರ ಖರ್ಚು ಮಾಡಿದ್ದಾರೆ.

ಟಾಪ್ ನ್ಯೂಸ್

BJP ನನ್ನನ್ನು ತುಳಿದಿದೆ ಎನ್ನುವುದು ತಪ್ಪು: ಈಶ್ವರಪ್ಪ

BJP ನನ್ನನ್ನು ತುಳಿದಿದೆ ಎನ್ನುವುದು ತಪ್ಪು: ಈಶ್ವರಪ್ಪ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು

Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು

Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ… ಆಯುಕ್ತರ ಪಿಎ ಸೇರಿ ಐವರ ಬಂಧನ

Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ

Sachin Panchal Case: Sankranti shock for accused including Raju Kapanura

Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

BJP ನನ್ನನ್ನು ತುಳಿದಿದೆ ಎನ್ನುವುದು ತಪ್ಪು: ಈಶ್ವರಪ್ಪ

BJP ನನ್ನನ್ನು ತುಳಿದಿದೆ ಎನ್ನುವುದು ತಪ್ಪು: ಈಶ್ವರಪ್ಪ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.