ಕಾರ್ಗಿಲ್ ಗೆಲುವು ಸ್ಮರಣೀಯ
ವೀರ ಯೋಧರ ಕಾರ್ಯ ಗೌರವಿಸುವುದು ಎಲ್ಲರ ಕರ್ತವ್ಯ: ಶಿವಮೂರ್ತಿ
Team Udayavani, Jul 28, 2019, 11:20 AM IST
ಚಳ್ಳಕೆರೆ: ನಗರದ ಹೊಂಗಿರಣ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಾರ್ಗಿಲ್ ರೂಪಕ ಪ್ರದರ್ಶಿಸಲಾಯಿತು.
ಚಳ್ಳಕೆರೆ: ರಾಷ್ಟ್ರದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯೂ ದೇಶಪ್ರೇಮಿಯಾಗಬೇಕು. ವಿಶ್ವದಲ್ಲಿಯೇ ವಿಶೇಷತೆಗಳನ್ನು ಹೊಂದಿರುವ ರಾಷ್ಟ್ರ ಭಾರತವಾಗಿದೆ. ಇಂತಹ ಪುಣ್ಯ ನಾಡಿನಲ್ಲಿ ಜನ್ಮ ಪಡೆಯುವುದೇ ಸಂತಸದ ವಿಷಯ ಎಂದು ನಿವೃತ್ತ ಸೈನಿಕ ಶಿವಮೂರ್ತಿ ಹೇಳಿದರು.
ಇಲ್ಲಿನ ಹೊಂಗಿರಣ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದ ಭದ್ರತೆಗಾಗಿ ದಿನದ 24 ಗಂಟೆಗಳ ಕಾಲ ಸೈನಿಕರು ಹೋರಾಡುತ್ತಿರುತ್ತಾರೆ. ಅದರಲ್ಲೂ ಭಯೋತ್ಪಾದನೆ, ಉಗ್ರ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸುವ ನಮ್ಮ ಸೈನಿಕರು ರಾಷ್ಟ್ರದ ಹೆಮ್ಮೆಯ ವೀರ ಪುರುಷರು ಎಂದು ಬಣ್ಣಿಸಿದರು.
ಕಳೆದ 20 ವರ್ಷಗಳ ಹಿಂದೆ ಭಾರತದ ಸೈನಿಕರು ಹೋರಾಟ ನಡೆಸಿ ಜಯ ದಾಖಲಿಸಿದ ಕಾರ್ಗಿಲ್ ವಿಜಯ ರಾಷ್ಟ್ರದ ಪ್ರತಿಯೊಬ್ಬರೂ ಹೆಮ್ಮೆ ಪಡುವ ವಿಷಯವಾಗಿದೆ. ಸೈನಿಕರ ಬಗ್ಗೆ ವಿಶೇಷ ಗೌರವವನ್ನು ತಂದುಕೊಟ್ಟ ಜಯ ಇದಾಗಿದೆ. ಅಂದು ಸೈನಿಕರಿಗೆ ಸ್ಫೂರ್ತಿ ತುಂಬಿ ಕಾರ್ಯಚರಣೆಗೆ ಸಹಕರಿಸಿದ ಕೇಂದ್ರ ಸರ್ಕಾರದ ಸಹಕಾರವನ್ನು ಮರೆಯುವಂತಿಲ್ಲ ಎಂದರು.
ಹೊಂಗಿರಣ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ನಾಗಪ್ಪ ಮಾತನಾಡಿ, ಪ್ರಸ್ತುತ ವರ್ಷದಿಂದ ನಮ್ಮ ವಿದ್ಯಾಸಂಸ್ಥೆ ಪ್ರಾರಂಭವಾಗಿದೆ. ಪೋಷಕರ ಸಹಕಾರದಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆ ಹೆಚ್ಚು ಗಮನ ಹರಿಸಲು ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ. ಕಾರ್ಗಿಲ್ ವಿಜಯದ ಬಗ್ಗೆ ಮಕ್ಕಳಿಗೆ ಸಂಪೂರ್ಣ ಮಾಹಿತಿ ನೀಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ನಿವೃತ್ತ ಸೈನಿಕ ಶರಣಪ್ಪ, ಹರೀಶ್‌ಕುಮಾರ್, ಸಂಸ್ಥೆಯ ಕಾರ್ಯದರ್ಶಿ ಡಿ. ದಯಾನಂದ, ಶಿವಪ್ರಸಾದ್, ಮುಖ್ಯ ಶಿಕ್ಷಕಿ ವೀಣಾ ರಮೇಶ್, ಎಸ್. ಉಜ್ಜಿನಪ್ಪ, ಎಂ. ವಿಜಯಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪೋಷಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಗಿಲ್ ವಿಜಯೋತ್ಸವದ ಸಂತಸದ ಕ್ಷಣಗಳನ್ನು ಮೆಲುಕು ಹಾಕಿದರು. ವಿದ್ಯಾರ್ಥಿಗಳು ಸೈನಿಕರ ಪೋಷಾಕು ಧರಿಸಿ ಗಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಪಕ್ಷದ ಶಾಸಕರು ಹೈಕಮಾಂಡ್ ಸೂಚನೆ ಪಾಲಿಸುವ ವಿಶ್ವಾಸವಿದೆ: ಬೇಳೂರು ಗೋಪಾಲಕೃಷ್ಣ
Anegudde ಶ್ರೀ ವಿನಾಯಕ ದೇಗುಲ: ಮಕರ ಸಂಕ್ರಾಂತಿಯಂದು ಹರಿದು ಬಂದ ಭಕ್ತ ಸಮೂಹ
Sirsi: ಟ್ರಾಫಿಕ್ ಪೊಲೀಸ್ ಠಾಣಾ ಕಟ್ಟಡ ಪರಿಶೀಲಿಸಿದ ಎಸ್ಪಿ ನಾರಾಯಣ
Sirsi: ಸಂಸದ ಕಾಗೇರಿ ಮನೆ ಅಂಗಳದಲ್ಲಿ ಚಿರತೆ ಓಡಾಟ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
Padubidri: ಇಲ್ಲಿ ದೊಂದಿಯೇ ಬೆಳಕು, ಮರಳೇ ಪ್ರಸಾದ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.