ಚಳ್ಳಕೆರೆ: ಅಸ್ತಮಾ ರೋಗಿಗಳಿಗೆ ಉಚಿತ ಮಾತ್ರೆ ವಿತರಣೆ
35 ವರ್ಷಗಳಿಂದ ಡಾ| ಎಚ್.ಸಿ. ತಿಪ್ಪೇಸ್ವಾಮಿ ಅವರಿಂದ ಸೇವಾ ಕೈಂಕರ್ಯ
Team Udayavani, Jun 10, 2019, 5:06 PM IST
ಚಳ್ಳಕೆರೆ: ಡಾ| ತಿಪ್ಪೇಸ್ವಾಮಿಯವರ ಮನೆ ಮುಂಭಾಗದಲ್ಲಿ ಅಸ್ತಮಾ ಕಾಯಿಲೆಗೆ ಮಾತ್ರೆ ಸೇವಿಸಲು ಆಗಮಿಸಿದ್ದ ಜನಸ್ತೋಮ.
ಚಳ್ಳಕೆರೆ: ಪ್ರತಿ ವರ್ಷ ಮೃಗಶಿರಾ ಮಳೆ ಆರಂಭವಾಗುವಾಗ ನಗರದ ಖ್ಯಾತ ವೈದ್ಯ ಡಾ| ಎಚ್.ಸಿ. ತಿಪ್ಪೇಸ್ವಾಮಿ ಅಸ್ತಮಾ ರೋಗಿಗಳಿಗೆ ಉಚಿತ ಮಾತ್ರೆಯನ್ನುವಿತರಿಸುತ್ತಾ ಬಂದಿದ್ದಾರೆ. ಅದರಂತೆ ಈ ವರ್ಷ ಶನಿವಾರ ತಡ ರಾತ್ರಿ 1:05 ಗಂಟೆಗೆ ವಿವಿಧೆಡೆಗಳಿಂದ ಆಗಮಿಸಿದ್ದ ಅಸ್ತಮಾ ರೋಗಿಗಳಿಗೆ ಔಷಧ ನೀಡಿದರು.
ನಂತರ ಮಾತನಾಡಿದ ಡಾ| ಎಚ್.ಸಿ. ತಿಪ್ಪೇಸ್ವಾಮಿ, ಕಳೆದ 35 ವರ್ಷಗಳಿಂದ ನಿರಂತರವಾಗಿ ಪ್ರತಿ ವರ್ಷ ಮೃಗಶಿರಾ ಮಳೆ ಕೂಡುವ ಸಂದರ್ಭದಲ್ಲಿ ಸ್ವತಃ ತಯಾರಿಸಿದ ಮಾತ್ರೆಯನ್ನು ನೀಡುತ್ತೇನೆ. ಪ್ರತಿ ವರ್ಷಕ್ಕಿಂತ ಈ ವರ್ಷ ಹೆಚ್ಚು ರೋಗಿಗಳು ಆಗಮಿಸಿದ್ದರು. ಎಲ್ಲಾ ರೋಗಿಗಳಿಗೂ ಉಚಿತವಾಗಿ ಮಾತ್ರೆ ನೀಡಲಾಗಿದೆ. ರೋಗಿಗಳನ್ನು ಕರೆತಂದ ಸುಮಾರು 500ಕ್ಕೂ ಹೆಚ್ಚು ಜನರು ಸೇರಿದಂತೆ ಒಟ್ಟು 1500 ಜನರಿಗೆ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮಾತ್ರೆ ಸೇವಿಸುವವರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸಿದಲ್ಲಿ ತೊಂದರೆಯಾಗುತ್ತದೆ ಎಂದರು.
ಹಿರಿಯ ಸಹಕಾರಿ ಧುರೀಣ ಸಿ.ಬಿ. ಆದಿಭಾಸ್ಕರ ಶೆಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯಾವುದೇ ರೋಗಗಳಿಗೆ ಆಸ್ಪತ್ರೆಗೆ ಭೇಟಿ ನೀಡಿದಲ್ಲಿ ಹೆಚ್ಚಿನ ಚಿಕಿತ್ಸಾ ವೆಚ್ಚವನ್ನು ಭರಿಸಬೇಕಿದೆ. ಆದರೆ ಡಾ| ಎಚ್.ಸಿ. ತಿಪ್ಪೇಸ್ವಾಮಿಯವರು ಎಲ್ಲಾ ರೋಗಿಗಳಿಗೂ ಉಚಿತ ಮಾತ್ರೆ ನೀಡುವ ಮೂಲಕ ಸಾವಿರಾರು ರೋಗಿಗಳ ಅಸ್ತಮಾ ರೋಗ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಇವರ ಸೇವಾ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.
ಸಿ.ಎಚ್. ಚಂದ್ರಶೇಖರ್, ನಾಗರಾಜು, ಧನಂಜಯ, ಆದಿಶ್ರವಣ್, ಹರಿನಿವಾಸ್, ಮಯೂರ, ಸಿ.ಎ.ಫಣಿನಂದಕುಮಾರ್ ಮತ್ತಿತರರು ಮಾತ್ರೆವಿತರಣೆಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
ಮಂಗಳೂರಿಗೆ ವಾಟರ್ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.