ಶೇ.100ರಷ್ಟು ಲಸಿಕೆ ಗುರಿ: ಶಾಸಕ ನಿರಂಜನ್
Team Udayavani, Jun 1, 2021, 12:13 PM IST
ಗುಂಡ್ಲುಪೇಟೆ: ಪ್ರತಿ ಗ್ರಾಮದಲ್ಲೂ ಎಲ್ಲರೂ ಲಸಿಕೆ ಪಡೆಯಬೇಕು. ಸೋಂಕಿನ ಲಕ್ಷಣ ಕಂಡರೆ ಟೆಸ್ಟ್ ಗೊಳಪಡಿಸಬೇಕು. ಪಾಸಿಟಿವ್ ಬಂದರೆ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಬೇಕು ಎಂದು ಶಾಸಕ ಸಿ. ಎಸ್.ನಿರಂಜನಕುಮಾರ್ ಆಶಾ ಕಾರ್ಯಕರ್ತೆಯರಿಗೆ ಸಲಹೆ ನೀಡಿದರು.
ತಾಲೂಕಿನ ಕಬ್ಬಳ್ಳಿ ಜಿಪಂ ವ್ಯಾಪ್ತಿಯ ಶಿಂಡನಪುರ, ಬನ್ನೀತಾಳಪುರ, ಪಡುಗೂರು,ಕಬ್ಬಳ್ಳಿ, ಅಗತಗೌಡನಹಳ್ಳಿಗ್ರಾಪಂಗಳಲ್ಲಿ ಟಾಸ್ಕ್ಫೋರ್ಸ್ ಸಭೆ ನಡೆಸಿ ಮಾತನಾಡಿ, 2ನೇ ಅಲೆಯಲ್ಲಿ ತಾಲೂಕಿನ ಕೆಲಸೂರುಪುರದಲ್ಲಿ ಯಾರಿಗೂ ಸೋಂಕು ತಗುಲಿಲ್ಲ. ಆ ರೀತಿ ಗ್ರಾಪಂನ ಎಲ್ಲ ಗ್ರಾಮಗಳು ಕೊರೊನಾ ಮುಕ್ತವಾಗಬೇಕು. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಈ ವೇಳೆ ತಹಶೀಲ್ದಾರ್ ರವಿಶಂಕರ್, ಇಒ ಶ್ರೀಕಾಂತ ರಾಜೇ ಅರಸ್, ಸಿಡಿಪಿಒ ಚಲುವರಾಜು, ಪಿಡಿಒ ನಾಗರಾಜಪ್ಪ, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಮಂಡಲ ಅಧ್ಯಕ್ಷ ಡಿಪಿ ಜಗದೀಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎನ್.ಮಲ್ಲೇಶ್, ಮುಖಂಡರಾದ ಕಲ್ಲಹಳ್ಳಿ ಮಹೇಶ್, ಮಲ್ಲಿಕಾರ್ಜುನಪ್ಪ, ಮಹದೇವಪ್ರಸಾದ್, ಸುನಿಲ್, ಶಿಂಡನಪುರ ಮಂಜು, ಎಸ್.ಟಿ. ಮಹದೇವಸ್ವಾಮಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.