2ನೇ ಅಲೆ ಮಧ್ಯೆ ಹುಂಡಿಯಲ್ಲಿ 45 ದಿನದಲ್ಲಿ 2.33 ಕೋಟಿ ರೂ.

75 ದಿನಗಳ ಕಾಲ ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

Team Udayavani, Jul 24, 2021, 6:40 PM IST

2ನೇ ಅಲೆ ಮಧ್ಯೆ ಹುಂಡಿಯಲ್ಲಿ 45 ದಿನದಲ್ಲಿ 2.33 ಕೋಟಿ ರೂ.

ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಜರುಗಿದ ಹುಂಡಿ ಎಣಿಕೆಯಲ್ಲಿ 2.33 ಕೋಟಿ ರೂ. ನಗದು, 155 ಗ್ರಾಂ ಚಿನ್ನ ಮತ್ತು 2 ಕೆ.ಜಿ.ಗೂ ಅಧಿಕ ಬೆಳ್ಳಿ ಸಂಗ್ರಹವಾಗಿದೆ. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಖಾಸಗಿ ಬಸ್‌ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾದ ಗುಂಡಿ ಎಣಿಕೆ ಕಾರ್ಯವು ತಡರಾತ್ರಿ 10 ಗಂಟೆಯ ವರೆಗೂ ಜರುಗಿತು.

ಹುಂಡಿ ಎಣಿಕೆ ಪ್ರಕ್ರಿಯೆಯು ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಶ್ರೀಗಳ ದಿವ್ಯಸಾನ್ನಿಧ್ಯದಲ್ಲಿ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿ ಸಮ್ಮುಖದಲ್ಲಿ ಸಿಸಿ ಟಿವಿ ಕಣ್ಗಾವಲಿನಲ್ಲಿ ಜರುಗಿತು. ಈ ಬಾರಿಯ ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ 45 ದಿನಗಳ ಅವಧಿಯಲ್ಲಿ 2,33,57,028 (ಎರಡು ಕೋಟಿ ಮೂವತ್ತಮೂರು ಲಕ್ಷದ ಐವತ್ತೇಳು ಸಾವಿರದ ಇಪ್ಪತ್ತೆಂಟು) ರೂ. ನಗದು, 155ಗ್ರಾಂ ಚಿನ್ನ ಮತ್ತು 2 ಕೆ.ಜಿ 200 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿಜಯವಿಭವಸ್ವಾಮಿ, ಉಪ ಕಾರ್ಯದರ್ಶಿ ಬಸವರಾಜು, ಪ್ರಾಧಿಕಾರದ ಅಧಿಕಾರಿ, ಸಿಬ್ಬಂದಿ, ಬ್ಯಾಂಕ್‌ ವ್ಯವಸ್ಥಾಪಕ ಮತ್ತು ಸಿಬ್ಬಂದಿ, ಮ.ಬೆಟ್ಟ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

ಲಾಕ್‌ಡೌನ್‌ ನಡುವೆ ಉತ್ತಮ ಆದಾಯ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾರ್ಚ್‌ 25 ರಂದು ಹುಂಡಿ ಎಣಿಕೆ ಪ್ರಕ್ರಿಯೆ ಅಂತಿಮವಾಗಿ ಜರುಗಿತ್ತು. 119 ದಿನಗಳ ಅಂತರದಲ್ಲಿ ಜರುಗಿದ ಹುಂಡಿ ಎಣಿಕೆಯು ಇದಾಗಿದ್ದು, 75 ದಿನಗಳ ಕಾಲ ದೇವಾಲಯಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಕೊರೋನಾ 2ನೇ ಅಲೆ ತಗ್ಗಿದ ಬಳಿಕ ಜುಲೈ 5ರಿಂದ ದೇವಾಲಯಗಳಿಗೆ ಭಕ್ತಾದಿಗಳ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ವಾರಾಂತ್ಯದಲ್ಲಿ ಮತ್ತು ಸರ್ಕಾರಿ ರಜಾದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಹಿನ್ನೆಲೆ 2 ಕೋಟಿಗೂ ಅಧಿಕ ನಗದು ಸಂಗ್ರಹವಾಗಿದೆ.

ಬೆಟ್ಟದಲ್ಲಿ ದಾಸೋಹ ಸೇವೆ ಆರಂಭ
ಮಲೆ ಮಹದೇಶ್ವರ ಬೆಟ್ಟದಲ್ಲಿ2ನೇ ಅಲೆ ಹಿನ್ನೆಲೆ ಭಕ್ತಾದಿಗಳಿಗೆ ನಿರ್ಬಂಧಿಸಲಾಗಿದ್ದ ದಾಸೋಹ ಸೇವೆ ಹಾಗೂ ಡಾರ್ಮಿಟರಿ ಕಟ್ಟಡಗಳ ಬಳಕೆಗೆ ಅನುಮತಿ ನೀಡಲಾಗಿದೆ. ಮಾದಪ್ಪನ ಬೆಟ್ಟದಲ್ಲಿ ಶುಕ್ರವಾರದಿಂದಲೇ ದಾಸೋಹ ಸೇವೆ ಆರಂಭವಾಗಿದ್ದು, ಶ್ರೀಕ್ಷೇತ್ರದಲ್ಲಿ ತಂಗುವ ಭಕ್ತಾದಿಗಳಿಗೆ ಡಾರ್ಮಿಟರಿ ಕಟ್ಟಡವನ್ನೂ ಬಾಡಿಗೆಗೆ ನೀಡಲು ಅವಕಾಶಕಲ್ಪಿಸಲಾಗಿದೆ. ಅಲ್ಲದೆ ಡಾರ್ಮಿಟರಿಯಲ್ಲಿ10 ಜನಕ್ಕೆ ಮಾತ್ರ ಅವಕಾಶಕಲ್ಪಿಸಲಾಗಿದೆ. ಅಲ್ಲದೆ ಪ್ರಾಧಿಕಾರದ5 ಬಸ್‌ಗಳ ಸಂಚಾರಕ್ಕೆ ಆಗಸ್ಟ್‌1ರಿಂದ ಅವಕಾಶಕಲ್ಪಿಸಲಾಗಿದೆ.ಇನ್ನುಳಿದಂತೆ ಲಾಡು ಪ್ರಸಾದ ವಿತರಣೆ, ತೀರ್ಥ ಪ್ರಸಾದ, ಉತ್ಸವ ಮತ್ತು ರಥೋತ್ಸವ ಸೇವೆಗಳಿಗೆ ಇದ್ದ ನಿರ್ಬಂಧವನ್ನು ಮುಂದುವರಿಸಲಾಗಿದೆ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

Kollegala: ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ ಸಾಗಾಟ… ಇಬ್ಬರ ಬಂಧನ

Kollegala: ಬೆಂಗಳೂರಿನಿಂದ ತಮಿಳುನಾಡಿಗೆ ತಿಮಿಂಗಿಲದ ವಾಂತಿ ಸಾಗಾಟ… ಇಬ್ಬರ ಬಂಧನ

5

Gundlupete: ಎರಡು ಬೈಕ್ ಗಳ ನಡುವೆ ಅಪಘಾತ; ಇಬ್ಬರು ಸಾವು

10-gundlupete

Gundlupete: ಬೈಕ್ ಸವಾರನ ಮೇಲೆ ದಾಳಿಗೆ ಮುಂದಾದ ಕಾಡಾನೆ

14(1)

Gundlupete: 3 ತಿಂಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.