ಕಾಡ್ಗಿಚ್ಚು ಹತೋಟಿಗೆ 2 ಹೆಲಿಕಾಪ್ಟರ್ ಬಳಕೆ
Team Udayavani, Feb 27, 2019, 6:56 AM IST
ಗುಂಡ್ಲುಪೇಟೆ: ಮೂಲೆಹೊಳೆ ಮತ್ತು ಚಮ್ಮನಹಳ್ಳದ ಎತ್ತರದ ಪ್ರದೇಶಗಳಲ್ಲಿ ಎರಡು ಹೆಲಿಕಾಪ್ಟರ್ ಬಳಸಿ ಕಾರ್ಯಾಚರಣೆ ಮಾಡುವುದರೊಂದಿಗೆ ಮಂಗಳವಾರ ಕಾಡ್ಗಿಚ್ಚನ್ನು ಹತೋಟಿಗೆ ತರಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ಪ್ರಭಾರ ನಿರ್ದೇಶಕ ಅಂಬಾಡಿ ಮಾಧವ್ ತಿಳಿಸಿದ್ದಾರೆ.
ಕರ್ನಾಟಕ-ತಮಿಳುನಾಡು-ಕೇರಳ ಗಡಿಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿರುವುದರಿಂದ ಅದನ್ನು ನಂದಿಸಲಾಗಿದ್ದು, ಮುಂದಿನ ಎರಡು ದಿನಗಳ ಕಾಲ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಹೆಲಿಕಾಪ್ಟರ್‌ಗಳನ್ನು ಬಂಡೀಪುರದಲ್ಲಿ ಇರಿಸಿಕೊಳ್ಳಲಾಗುವುದು ಮತ್ತು ಬುಧವಾರ ಪರಿಸ್ಥಿತಿಯನ್ನು ನೋಡಿಕೊಂಡು ಸಫಾರಿ ಆರಂಭಿಸಲಾಗುವುದು ಎಂದರು.
ಈಗಾಗಲೇ ನೂರಾರು ಸ್ವಯಂ ಸೇವಕರು ಮತ್ತು ಎರಡು ದಿನಗಳ ಹೆಲಿಕಾಪ್ಟರ್ ಕಾರ್ಯಾಚರಣೆ ಮತ್ತು ಅರಣ್ಯ ಮತ್ತು ಅಗ್ನಿಶಾಮಕ ಸಿಬ½ಂದಿ ಸತತ ಶ್ರಮದಿಂದ ಬೆಂಕಿಯು ತಹಬದಿಗೆ ಬಂದಿದ್ದು, ಅವರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಮತ್ತೆರಡು ದಿನಗಳು ಬೆಂಕಿಯ ಕೆಂಡಗಳು ಸಂಪೂರ್ಣವಾಗಿ ನಂದಿಹೋಗುವ ವರೆಗೂ ನಿಗಾ ಇಡಲಾಗುವುದು ಎಂದರು.
ಒಟ್ಟಾರೆಯಾಗಿ ಮೂರು ಸಾವಿರ ಎಕರೆಗಳಷ್ಟು ವನ್ಯ ಸಂಪತ್ತು ನಾಶವಾಗಿದ್ದು, ವನ್ಯಜೀವಿಗಳಿಗೆ ಅಪಾಯವಾಗಿಲ್ಲ. ಕಳೆದ ಡಿಸೆಂಬರ್ ನಿಂದಲೇ ಹುಲಿ, ಚಿರತೆ, ಆನೆ, ಜಿಂಕೆ ಮತ್ತಿತರೆ ದೊಡ್ಡಪ್ರಾಣಿಗಳು ಪಕ್ಕದ ಮಧುಮಲೆ, ವೈನಾಡು, ಕಬಿನಿ ಹಿನ್ನೀರಿನ ಕಡೆ ವಲಸೆ ಹೋಗಿರುವುದರಿಂದ ವನ್ಯಪ್ರಾಣಿಗಳಿಗೆ ಜೀವಕ್ಕೆ ಹಾನಿಯಾಗಿಲ್ಲ. ಸಣ್ಣಪುಟ್ಟ ಹಾವು, ಪಕ್ಷಿ, ಕಾಡುಕೋಳಿ ಇತರೆ ಸಣ್ಣ ಪ್ರಮಾಣದ ಪ್ರಾಣಿ ಪಕ್ಷಿಗಳು ಬೆಂಕಿಗೆ ಆಹುತಿಯಾಗಿರುವ ಸಾಧ್ಯತೆ ಇದೆ ಎಂದರು.
ಒಣಗಿ ನಿಂತ ಬಂಡೀಪುರ: ಹಸಿರ ಸಿರಿಯನ್ನು ಹೊದ್ದು ಕಂಗೊಳಿಸುತ್ತಿರದ್ದ ಬಂಡೀಪುರದಲ್ಲಿ ಈಗ ಕೇವಲ ಬೂದಿ, ಒಣಗಿದ ಮರಗಳು ಮತ್ತು ಸುಟ್ಟು ಕರಕಲಾಗಿ ನಿಂತಿರುವ ಮರಗಳು ಮತ್ತು ಹಸಿರಾಗಿದ್ದರೂ ಬೆಂಕಿಯ ಬಲೆಗೆ ಮುದುಡಿಹೋಗಿರುವ ಎಲೆಗಳನ್ನು ಹೊತ್ತ ಮರಗಳು ಕಾಣಸಿಗುತ್ತಿದೆ. ಅಲ್ಲಲ್ಲಿ ಜಿಂಕೆ, ಕೋತಿ ಮತ್ತು ಪಕ್ಷಿಗಳು ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.