![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 15, 2022, 5:55 PM IST
ಯಳಂದೂರು: ಇಡೀ ಏಷ್ಯಾಖಂಡದಲ್ಲೇ ಹೆಜ್ಜೆ ಹೆಜ್ಜೆಗೂ ವಿಭಿನ್ನ ಕಾಡು ಪ್ರಬೇಧವನ್ನು ಹೊಂದಿರುವ ಪೂರ್ವ ಹಾಗೂ ಪಶ್ಚಿಮಘಟ್ಟಗಳ ಸಂಗಮ ಸ್ಥಾನವಾಗಿರುವ ಬಿಆರ್‌ಟಿ (ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ) ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಿಶಿಷ್ಟ ಪ್ರಭೇದದ ಹಲ್ಲಿಯೊಂದು ಪತ್ತೆಯಾಗಿದೆ.
ಬೆಟ್ಟದಲ್ಲಿರುವ ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕೋಲಜಿ ಅಂಡ್ ದಿ ಎನ್ವಿರಾನ್ಮೆಂಟ್(ಏಟ್ರೀ) ಸಂಸ್ಥೆಯಲ್ಲಿ ಸಂಶೋಧಕರಾಗಿ ಕೆಲಸ ನಿರ್ವಹಿಸುತ್ತಿದ್ದ
ಡಾ.ಎನ್.ಎ. ಅರವಿಂದ್ ಮತ್ತು ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣನ್ ಈ ಹಲ್ಲಿ ಪ್ರಬೇಧವನ್ನು ಪತ್ತೆ ಹಚ್ಚಿದ್ದಾರೆ. ಈ ಹಲ್ಲಿಗೆ ಕುಬ್ಜ ಹಲ್ಲಿ ಎಂದು ಗುರುತಿಸಲಾಗಿದ್ದು ಇವರ ಉದ್ದ ಕೇವಲ 2.57 ಸೆಂ.ಮೀ ಮಾತ್ರ ಇದೆ.
ಇದರಲ್ಲಿ ಗಂಡು ಹಲ್ಲಿಯ ದೇಹ ಕಂದು ಬಣ್ಣದಿಂದ ಕೂಡಿದ್ದು, ಬಾಲ ಕಪ್ಪುಬಣ್ಣದ್ದಾಗಿದೆ. ಆದರೆ ಹೆಣ್ಣು ಹಲ್ಲಿ ಪೂರ್ಣವಾಗಿ ಕಂದು ಬಣ್ಣದಿಂದ ಕೂಡಿದೆ. ನಿವೃತ್ತ ಪ್ರಾಧ್ಯಾಪಕ ಡಾ. ಉಮಾಶಂಕರ್ ಅವರ ಹೆಸರನ್ನು ಈ ಹಲ್ಲಿಗೆ ಇಡಲಾಗಿದ್ದು “ಉಮಾಶಂಕರ್ ಕುಬ್ಜ ಹಲ್ಲಿ” ((umashankar’s Dawrf Gecko) ಎಂದು ಇದನ್ನು ಕರೆಯಲಾಗಿದೆ.
ಇದು ರಾತ್ರಿ ವೇಳೆಯಲ್ಲಿ ಹೆಚ್ಚು ಕಾಣಬರುವ ಪ್ರಭೇದವಾಗಿದೆ. ಕಲ್ಲು, ಬಂಡೆಗಳ ಸಂದಿಗಳಲ್ಲಿ ಇವು ಹೆಚ್ಚಾಗಿ ಕಂಡುಬಂದಿದೆ. ಎರಡಕ್ಕಿಂತ ಹೆಚ್ಚು ಹಲ್ಲಿಗಳು ಒಂದೇ ಕಡೆ ಮೊಟ್ಟೆ ಇಡಲಿದ್ದು ಈ ಹಲ್ಲಿಯು ಸಾಮಾನ್ಯ ಹಲ್ಲಿಗಿಂತಲೂ ಆಕಾರದಲ್ಲಿ ಚಿಕ್ಕ ಗಾತ್ರವನ್ನು ಹೊಂದಿದ್ದು ಇದು ಕೇವಲ ಬಿಳಿಗಿರಿರಂಗನಬೆಟ್ಟದ ಕಾಡಿನಲ್ಲಿ ಮಾತ್ರ ಕಂಡು ಬರುವ ಪ್ರಬೇಧವಾಗಿದೆ ಎಂದು ಅಧ್ಯಯನದಲ್ಲಿ ಸ್ಪಷ್ಟಪಡಿಸಲಾಗಿದೆ.
ಚರ್ಚೆ ಹೊತ್ತಲ್ಲಿ ಗಮನ ಸೆಳೆದ ಹಲ್ಲಿ: ಬಿಳಿಗಿರಿ ರಂಗನಬೆಟ್ಟದಲ್ಲಿರುವ ಏಟ್ರಿಯ ಕಚೇರಿ ಯಲ್ಲಿ ಚರ್ಚೆ ನಡೆಸುತ್ತಿರುವಾಗ ಒಂದು ಹಲ್ಲಿ ಇಲ್ಲಿ ಕಾಣಿಸಿತು. ಆದರೆ ಇದರ ಆಕಾರ ವಿಚಿತ್ರವಾಗಿದೆ. ಇದು ಅತ್ಯಂತ ಚಿಕ್ಕಗಾತ್ರ ದ್ದಾಗಿದೆ ಎಂದು ಇದನ್ನು ಪರಿಶೀಲಿಸಲಾಯಿತು. ನಂತರ ಇದು ಸಾಮಾನ್ಯ ವಾದ ಹಲ್ಲಿಯಲ್ಲ ಎಂದು ಅನುಮಾನ ಬಂದು ಹೊಸ ಪ್ರಬೇಧ ಇರಬಹುದು ಎಂದು ಇದನ್ನು ಅರಣ್ಯ ಇಲಾಖೆಯ ಅನುಮತಿ ಪಡೆದು ಉಮಾ ಶಂಕರ್ ಮತ್ತು ಸೂರ್ಯನಾರಾಯಣನ್ ಈ ಬಗ್ಗೆ ಸಂಶೋಧನೆ ಕೈಗೊಂಡು, ಇದರ ದೇಹ ರಚನೆ, ಚಲನೆ, ಇರುವಿಕೆ ಬಗ್ಗೆ ಮಾಹಿತಿ ಕಲೆಹಾಕಿ ಎಲ್ಲಾ ಪರೀಕ್ಷೆ ನಡೆಸಿ ಇದೊಂದು ಹೊಸ ಹಲ್ಲಿಯ ಪ್ರಬೇಧ ಎಂದು ಸಾಬೀತು ಪಡಿಸಿದ್ದಾರೆ. ಈ ಸಂಬಂಧ ಅಂತಾರಾಷ್ಟ್ರೀಯ ನಿಯತಕಾಲಿಕೆ ವಟೇಬ್ರೇಟ್ ಝೂಲಾಜಿಯಲ್ಲಿ ಲೇಖನ ಪ್ರಕಟಗೊಂಡಿದೆ.
*ಫೈರೋಜ್ ಖಾನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.