ಪ್ರೀತಿಸುವಂತೆ ಬಾಲಕಿಯನ್ನು ಪೀಡಿಸುತ್ತಿದ್ದ ಆರೋಪಿಗಳಿಗೆ ಫೋಕ್ಸೋ ಕಾಯ್ದೆಯಡಿ ಶಿಕ್ಷೆ
Team Udayavani, Jan 29, 2022, 7:28 PM IST
ಚಾಮರಾಜನಗರ: ಪ್ರೀತಿಸುವಂತೆ ಬಾಲಕಿಯನ್ನು ಪೀಡಿಸಿ ಇಲ್ಲದಿದ್ದಲ್ಲಿ ಕುಟುಂಬಸ್ಥರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ 22 ದಿನ ಶಿಕ್ಷೆ , 10ಸಾವಿರ ದಂಡ ವಿಧಿಸಿ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೇ ಬಿ.ಎನ್.ಭಾರತಿ ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ?: ಚಾಮರಾಜನಗರ ತಾಲ್ಲೂಕು ಉಡಿಗಾಲ ಗ್ರಾಮದ ನಂಜಪ್ಪ ಅವರ ಪುತ್ರ ಚೇತನ್(23) ನೊಂದ ಬಾಲಕಿಯನ್ನು ಹಿಂಬಾಲಿಸುತ್ತಾ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು. ಇದಕ್ಕೆ ನೊಂದ ಬಾಲಕಿ ತಾನು ಎಸ್‍ಎಸ್ ಎಲ್‍ಸಿ ಪಾಸ್ ಮಾಡಬೇಕು ನನ್ನನ್ನು ಹಿಂಬಾಲಿಸಬೇಡ ಎಂದು ತಿಳಿಸಿದ್ದಳಿ. ಈ ನಡುವೆ ನೊಂದ ಬಾಲಕಿ ತನ್ನ ಅಜ್ಜಿಯ ಮನೆಗೆ ಹೋಗಿದ್ದಾಗ ಈತನ ಸ್ನೇಹಿತ ಚಂದ್ರಶೇಖರ್ ಅವರ ಪುತ್ರ ಗುರುಪ್ರಸಾದ್(25) ನೀನು ಚೇತನ್‍ನನ್ನು ಪ್ರೀಸಿಸಬೇಕು ಇಲ್ಲದಿದ್ದಲ್ಲಿ ನಿನ್ನ ಅಣ್ಣನನ್ನು ಕೊಲೆ ಮಾಡುವುದಾಗಿ ನೊಂದ ಬಾಲಕಿಗೆ ಬೆದರಿಕೆಯೊಡ್ಡಿ ಗ್ರಾಮಕ್ಕೆ ಬರುವಂತೆ ತಿಳಿಸಿದ್ದನು. ಈ ವೇಳೆ ನೊಂದ ಬಾಲಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಿಂತಿದ್ದ ಇಬ್ಬರೂ ಆರೋಪಿಗಳ ಹತ್ತಿರ ಬಂದಾಗ 1ನೇ ಆರೋಪಿ ಚೇತನ್ ನೊಂದ ಬಾಲಕಿಯನ್ನು ಆತನ ಕೆಎ-10 ಎಸ್-6136 ಸ್ಪ್ಲೆಂಡರ್ ಬೈಕಿನಲ್ಲಿ ಕೂರಿಸಿಕೊಂಡು ಸುತ್ತಾಡಿಸಿ ನಿನ್ನದು ಎಸ್‍ಎಸ್‍ಎಲ್‍ಸಿ ಮುಗಿದಿದ್ದು ನನ್ನನ್ನೇ ಮದುವೆಯಾಗಬೇಕು, ಇಲ್ಲದಿದ್ದಲ್ಲಿ ನಿಮ್ಮ ಕುಟುಂಬದಲ್ಲಿ ಯಾರನ್ನಾದರೂ ಕೊಲೆ ಮಾಡುವುದಾಗಿ ಬೆದರಕೆಯೊಡ್ಡಿದ್ದನು.
ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ ಲಕಂ 354(ಡಿ), 506 ಫೋಕ್ಸೋ ಕಾಯ್ದೆ ಲಕಂ 12 ಮತ್ತು 17ಕ್ಕೆ ಇಬ್ಬರೂ ಆರೋಪಿಗಳಿಗೆ 22 ದಿನ ಶಿಕ್ಷೆ ಮತ್ತು 10ಸಾವಿರ ದಂಡ, ದಂಡ ತಪ್ಪಿದಲ್ಲಿ ಮತ್ತೆ 1 ತಿಂಗಳ ಕಾಲ ಶಿಕ್ಷೆ ವಿಧಿಸಿದ್ದಾರೆ. ದಂಡದ ಮೊತ್ತ ತಲಾ 10ಸಾವಿರ ಮತ್ತು ಕಾನೂನು ಸೇವಾ ಪ್ರಾಧಿಖಾರದ 20ಸಾವಿರಗಳನ್ನು ನೊಂದ ಬಾಲಕಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.