ಮಹರ್ಷಿ ವಾಲ್ಮೀಕಿ ತತ್ವಾದರ್ಶ ಪಾಲಿಸಿ
Team Udayavani, Oct 14, 2019, 3:00 AM IST
ಹನೂರು: ಆದಿಕವಿ, ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಯಣ ಗ್ರಂಥದಲ್ಲಿ ಅಡಕವಾಗಿರುವಂತಹ ಪಿತೃವಾಕ್ಯ ಪರಿಪಾಲನೆ, ಸೋದರ ಬಾಂಧವ್ಯ ಸಂಬಂಧಗಳ ಅಂಶಗಳನ್ನು ಇಂದಿನ ಜನತೆ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಆರ್.ನರೇಂದ್ರ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಹಿಂದುಗಳ ಪವಿತ್ರ ಗ್ರಂಥ: ಹಿಂದುಗಳಿಗೆ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳು ಪವಿತ್ರವಾದ ಗ್ರಂಥವಾಗಿದೆ. ಇವುಗಳ ಪೈಕಿ ರಾಮಾಯಣ ಪುರಾತನ ಗ್ರಂಥವಾಗಿದ್ದು ಈ ಕಾರಣಕ್ಕೆ ಮಹರ್ಷಿ ವಾಲ್ಮೀಕಿ ಅವರನ್ನು ಆದಿಕವಿ ಎಂದು ಕರೆಯಲಾಗುತ್ತಿದೆ ಎಂದು ತಿಳಿಸಿದರು.
ರಾಮಾಯಣದ ಅಂಶಗಳನ್ನು ಅಳವಡಿಸಿಕೊಳ್ಳಬೇಕು: ಆದಿಕವಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಣದಲ್ಲಿ ಹಲವಾರು ಅಂಶಗಳು ಅಡಕವಾಗಿದೆ. ಈ ಪೈಕಿ ಆ ಗ್ರಂಥದಲ್ಲಿನ ಪಿತೃವಾಕ್ಯ ಪರಿಪಾಲನೆ, ಸೋದರ ಬಾಂಧವ್ಯ ಮತ್ತು ಅತ್ತಿಗೆ ಮೈದುನ ಬಾಂಧವ್ಯವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ರೀತಿ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಕೆ ಮಾಡಿಕೊಟ್ಟು ಅವರ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಮಹಾನು ಪುರುಷರ, ಆದರ್ಶ ವ್ಯಕ್ತಿಗಳ ಜಯಂತಿ ಆಚರಣೆಗಳಿಗೆ ಅರ್ಥ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.
ವಾಲ್ಮೀಕಿ ಕಳ್ಳನಾಗಿದ್ದ ಎಂದಿದ್ದಕ್ಕೆ ಆಕ್ರೋಶ: ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಸಂಸ್ಕೃತ ಶಿಕ್ಷಕ ಮಲ್ಲಣ್ಣ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯ ಬಗ್ಗೆ ವಿವರಿಸುತ್ತಿದ್ದರು. ಈ ವೇಳೆ ಮಹರ್ಷಿ ವಾಲ್ಮೀಕಿ ಜೀವನ ನಿರ್ವಹಣೆಗಾಗಿ ಕಳ್ಳತನದ ಹಾದಿ ಹಿಡಿದಿದ್ದ ಎಂದು ಹೇಳುತ್ತಿದ್ದಂತೆ ಮುಖಂಡರಾದ ಪುಟ್ಟವೀರನಾಯ್ಕ ಮಧ್ಯೆ ಪ್ರವೇಶಿಸಿ ಈ ವಿಷಯದ ಪ್ರಸ್ತಾಪ ಬೇಕಿಲ್ಲ, ವಾಲ್ಮೀಕಿ ಮಹರ್ಷಿ ಕಳ್ಳನಾಗಿದ್ದ ಎಂಬುದಕ್ಕೆ ಯಾವ ಸಾಕ್ಷಿ ಪುರಾವೆಗಳಿವೆ ಎಂದು ಪ್ರಶ್ನಿಸುತ್ತಿದ್ದಂತೆ ಕೆಲಕಾಲ ಗೊಂದಲ ಉಂಟಾಯಿತು. ಬಳಿಕ ಸ್ಥಳದಲ್ಲಿದ್ದ ಮುಖಂಡರು ಮಧ್ಯೆ ಪ್ರವೇಶಿಸಿ ಅವರನ್ನು ಸಮಾಧಾನಪಡಿಸಿ ಆ ವಿಷಯವನ್ನು ಬಿಟ್ಟು ಮುಂದೆ ಮಾತನಾಡು ವಂತೆ ಸೂಚಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.
ತಾಪಂ ಸದಸ್ಯ ರಾಜೇಂದ್ರ, ಬಂಡಳ್ಳಿ ಗ್ರಾಪಂ ಅಧ್ಯಕ್ಷ ರಾಚಪ್ಪ, ಪಪಂ ಸದಸ್ಯ ಹರೀಶ್‌ಕುಮಾರ್, ಸೋಮಣ್ಣ, ಗಿರೀಶ್, ಮಹೇಶ್, ಸಂಪತ್‌ಕುಮಾರ್, ತಹಶೀಲ್ದಾರ್ ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ಮುಖಂಡರಾದ ಚೆಂಗವಾಡಿ ರಾಚಪ್ಪ, ಬಂಡಳ್ಳಿ ವೆಂಕಟಾಚಲ(ತಿರುಪತಿ), ಸುದರ್ಶನ್, ಸತೀಶ್, ಪ್ರಸನ್ನಕುಮಾರ್, ಬಂಡಳ್ಳಿ ಅರುಣ್, ಕೌದಳ್ಳಿ ಶಿವರಾಮು, ಅನಿಲ್ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.