ಎಲ್ಲಾ ಜಿಲ್ಲೆ ಸುತ್ತಿ ಅಭಿಮಾನಿಗಳನ್ನುಪಕ್ಷಕ್ಕೆ ಕರೆತರುವೆ:
ಬಿಜೆಪಿ ಸೇರ್ಪಡೆ ಬಳಿಕ ಕ್ಷೇತ್ರಕ್ಕೆ ಆಗಮಿಸಿದ ಮಹೇಶ್‌ಗೆ ಅದ್ಧೂರಿ ಸ್ವಾಗತ
Team Udayavani, Aug 10, 2021, 4:11 PM IST
ಕೊಳ್ಳೇಗಾಲ: ಬಿಜೆಪಿಗೆ ಸೇರ್ಪಡೆಯಾದ ಬಳಿಕ ಮೊದಲ ಬಾರಿಗೆ ತಾಲೂಕಿಗೆ ಆಗಮಿಸಿದ ಶಾಸಕ ಎನ್.ಮಹೇಶ್ ಅವರನ್ನು
ಸೋಮವಾರ ಕಾರ್ಯಕರ್ತರು ಹಾಗೂ ಬೆಂಬಲಿಗರು ಅದ್ಧೂರಿ ಸ್ವಾಗತ ನೀಡಿಬರಮಾಡಿಕೊಂಡರು. ಪಟ್ಟಣದ ಅಚ್ಗಳ್ ಯಾತ್ರಿ ನಿವಾಸ್
ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಜೈಕಾರ ಕೂಗುತ್ತಾ ಭಾರೀ ಗಾತ್ರದ ಪುಷ್ಪಹಾರವನ್ನು ಹಾಕುವ
ಮೂಲಕ ಸ್ವಾಗತಿಸಿ ಸಂಭ್ರಮಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಎನ್. ಮಹೇಶ್, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರವಾಸ ಕೈಗೊಂಡು ಜಿಲ್ಲೆಗಳಲ್ಲಿರುವ ನನ್ನ ಅಭಿಮಾನಿಗಳನ್ನು ಬಿಜೆಪಿಗೆ ಕರೆದು ತಂದು ಪಕ್ಷ ಬಲಪಡಿಸುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆ ಯಲ್ಲೂ ಬಿಜೆಪಿ
ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಬಿಎಎಸ್ಪಿಯಿಂದ ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ವಿರೋಧ ಪಕ್ಷದ ಮುಖಂಡರು ಹಲವಾರು ರೀತಿಯಲ್ಲಿ ಆರೋಪ ಮಾಡಿದ್ದು, ಅದಕ್ಕೆ ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡುವುದಾಗಿ ಟೀಕಾಕಾರರಿಗೆ ಎದುರೇಟು ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ಪರಮೇಶ್, ಪ್ರಕಾಶ, ನಟರಾಜು, ನಾಶೀರ್ ಷರೀಫ್,
ಸೆಲ್ವರಾಜ್, ಬಿಜೆಪಿ ಟೌನ ಅಧ್ಯಕ್ಷ ಲಕ್ಷ್ಮೀಪತಿ, ಪ್ರಜ್ವಲ್, ಸುರೇಶ್, ಬಸವ ರಾಜು, ಮಹಾದೇವಿ, ಪದ್ಮಾ, ವರದರಾಜ್ ಇತರರಿದ್ದರು. ಬಿಎಸ್ಪಿಯಿಂದಉಚ್ಚಾಟಿತರಾಗಿದ್ದ ಶಾಸಕ ಎನ್.ಮಹೇಶ್ ಅವರು ಬೆಂಗಳೂರಿನಲ್ಲಿ ಆ.5ರಂದು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.