![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jul 10, 2020, 6:56 PM IST
ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 13 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 96 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
ಇದುವರೆಗೆ ಒಟ್ಟಾರೆ ಜಿಲ್ಲೆಯಲ್ಲಿ 145 ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ 49 ಮಂದಿ ಗುಣಮುಖರಾಗಿದ್ದಾರೆ. ಶುಕ್ರವಾರ 449 ಮಾದರಿಗಳ ಪರೀಕ್ಷೆಯಲ್ಲಿ 13 ದೃಢಪಟ್ಟಿದ್ದು, ಇನ್ನೂ 1654 ಮಾದರಿಗಳ ಫಲಿತಾಂಶ ನಿರೀಕ್ಷಿಸಲಾಗಿದೆ.
ಶುಕ್ರವಾರದ ಪ್ರಕರಣಗಳಲ್ಲಿ, ಗುಂಡ್ಲುಪೇಟೆ 6, ಚಾಮರಾಜನಗರ 4, ಕೊಳ್ಳೇಗಾಲ 2 ಮತ್ತು ಯಳಂದೂರಿನಿಂದ 1 ಪ್ರಕರಣ ವರದಿಯಾಗಿವೆ.
ರೋಗಿ ಸಂಖ್ಯೆ 134: 24 ವರ್ಷದ ಯುವತಿ, ಚಂಗಚಹಳ್ಳಿ,ಯಳಂದೂರು. ಸಂಖ್ಯೆ 135: 24 ವರ್ಷದ ಯುವಕ ಕುಣಗಹಳ್ಳಿ, ಗುಂಡ್ಲುಪೇಟೆ. ಸಂಖ್ಯೆ 136: 70 ವರ್ಷದ ವೃದ್ಧ, ತೆರಕಣಾಂಬಿ, ಗುಂಡ್ಲುಪೇಟೆ. 137: 50 ವರ್ಷದ ವ್ಯಕ್ತಿ ಸಂತೆಮಾಳ, ಗುಂಡ್ಲುಪೇಟೆ. 138: 31 ವರ್ಷದ ಯುವತಿ, ಬೀರನಬೀದಿ, ಕೊಳ್ಳೇಗಾಲ, 139: 31 ವರ್ಷದ ಯುವತಿ, ಚೆನ್ನಿಪುರದಮೋಳೆ, ಚಾಮರಾಜನಗರ. 140: 42 ವರ್ಷದ ವ್ಯಕ್ತಿ ಚೆನ್ನಿಪುರದಮೋಳೆ, ಚಾಮರಾಜನಗರ. 141: 43 ವರ್ಷದ ಮಹಿಳೆ, ಗರಡಿ ರಸ್ತೆ, ಕೊಳ್ಳೇಗಾಲ, 142: 38 ವರ್ಷದ ವ್ಯಕ್ತಿ, ಮುಬಾರಕ್ ಮೊಹಲ್ಲ, ಚಾಮರಾಜನಗರ. 143: 25 ವರ್ಷದ ಗರ್ಭಿಣಿ, ಮಂಗಲ ಗ್ರಾಮ, ಚಾಮರಾಜನಗರ. 144: 29 ವರ್ಷದ ಯುವತಿ, ಗುಂಡ್ಲುಪೇಟೆ, 145: 42 ವರ್ಷದ ಮಹಿಳೆ, ಶೆಟ್ಟರಹುಂಡಿ, ಗುಂಡ್ಲುಪೇಟೆ. 146: 45 ವರ್ಷದ ವ್ಯಕ್ತಿ, ದೊಡ್ಡತುಪ್ಪೂರು, ಗುಂಡ್ಲುಪೇಟೆ.
ಇವರೆಲ್ಲರೂ ಚಾಮರಾಜನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರಲ್ಲಿ ಗುಂಡ್ಲುಪೇಟೆ ಪಟ್ಟಣ ಮತ್ತು ತಾಲೂಕಿನ 14 ಮಂದಿ, ಚಾಮರಾಜನಗರ ಪಟ್ಟಣ ಮತ್ತು ತಾಲೂಕಿನ 3 ಮಂದಿ ಹಾಗೂ ಬೆಂಗಳೂರಿನ ಗೊರಗುಂಟೆಪಾಳ್ಯದ ಓರ್ವ ಇದ್ದಾರೆ
You seem to have an Ad Blocker on.
To continue reading, please turn it off or whitelist Udayavani.