ಬೀದಿನಾಯಿಗಳ ಹಾವಳಿಯಿಂದ ಜನತೆಗೆ ಆತಂಕ


Team Udayavani, Nov 7, 2019, 3:00 AM IST

bidi-nayi-hava

ಕೊಳ್ಳೇಗಾಲ: ಪಟ್ಟಣದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಎಲ್ಲಿ ಜನರ ಮೇಲೆ ಬೀಳುತ್ತದೆಯೋ ಎಂದು ಭಯಭೀತರಾಗಿದ್ದಾರೆ. ನಗರಸಭೆಯ ಅಧಿಕಾರಿಗಳು ಬೀದಿನಾಯಿಗಳ ಹಾವಳಿಯನ್ನು ತಪ್ಪಿಸಿ, ಭಯಭೀತರಾಗಿರುವ ಸಾರ್ವಜನಿಕರು ಧೈರ್ಯದಿಂದ ಸಂಚಾರಿಸುವಂತೆ ಮಾಡಬೇಕಾಗಿದೆ.

ಪಟ್ಟಣದ ನಗರಸಭೆಯಲ್ಲಿ 31 ವಾರ್ಡ್‌ಗಳಿದ್ದು, ಎಲ್ಲಾ ವಾರ್ಡ್‌ಗಳಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ. ಬೀದಿ, ಬೀದಿಯಲ್ಲಿ ನಾಯಿಗಳ ಕಾಟ ತಾಳಲಾರದೇ ಹಲವರು ಭಯಭೀತರಾಗಿದ್ದಾರೆ. ಮತ್ತೆ ಕೆಲವರು ರಸ್ತೆಯಲ್ಲಿ ಸೈಕಲ್‌ ಮತ್ತು ಬೈಕ್‌, ಇನ್ನಿತರ ವಾಹನಗಳಲ್ಲಿ ಚಲಿಸುವಾಗಲೂ ನಾಯಿಗಳು ಅಡ್ಡ ಬರುವುದೆ ಎಂದು ಭಯದಿಂದಲೇ ಓಡಾಡಿಸುವಂತೆ ಆಗಿದೆ.

ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು: ಕಳೆದ ಐದಾರು ವರ್ಷಗಳಿಂದ ಬೀದಿನಾಯಿಗಳ ಉಪಟಳ ಉಲ್ಬಣದಿಂದಾಗಿ ಎಲ್ಲೆಲ್ಲೂ ನಾಯಿಗಳು ಹೆಚ್ಚಾಗಿದೆ. ಇದರ ನಿಯಂತ್ರಣವನ್ನು ಅಧಿಕಾರಿಗಳು ಮಾಡದೇ ಕಣ್ಣಿದ್ದು, ಕುರುಡರಂತೆ ನಾಯಿಗಳ ದಂಡನ್ನು ವೀಕ್ಷಿಸುತ್ತಾ ನಿಯಂತ್ರಣ ಮಾಡುವಲ್ಲಿ ಮೀನಾಮೇಷ ಎಸಗುತ್ತಿದ್ದಾರೆ.

ಕಾಡಿಗೆ ನಾಯಿಗಳು: ಹಲವಾರು ವರ್ಷಗಳ ಹಿಂದೆ ನಗರಸಭೆಯ ಅಧಿಕಾರಿಗಳು ನಾಯಿಯನ್ನು ಹಿಡಿದು ಚುಚ್ಚು ಮದ್ದು ನೀಡಿ ಕೊಲ್ಲುತ್ತಿದ್ದರು. ನಂತರ ಪ್ರಾಣಿಗಳ ಮೇಲೆ ದಯ ಇಟ್ಟ ಅಧಿಕಾರಿಗಳು ಹಿಡಿದು ರಾಶಿ ರಾಶಿ ನಾಯಿಗಳನ್ನು ಕಾಡಿಗೆ ಬಿಡುವ ಮೂಲಕ ನಿಯಂತ್ರಣ ನಡೆಯುತ್ತಿತ್ತು. ಆದರೆ, ಈ ಕಾರ್ಯ ಸಂಪೂರ್ಣ ನೆಲೆಕಚ್ಚಿದೆ.

ರಾತ್ರಿ ನಿದ್ದೆಗೆ ತೊಂದರೆ: ಪಟ್ಟಣದಲ್ಲೆಡೆ ನಾಯಿಗಳ ಸಂಖ್ಯೆ ಉಲ್ಬಣಗೊಂಡಿದ್ದು, ಇಡೀ ರಾತ್ರಿಯ ಹೊತ್ತು ಬೊಗಳುವುದರಿಂದ ವೃದ್ಧರು, ಹೃದಯ ಖಾಯಿಲೆಗೆ ಒಳಗಾದವರು ಮತ್ತು ಸಣ್ಣ ಮಕ್ಕಳು ನಿದ್ರೆಯಿಂದ ಎದ್ದಿ, ಇಡೀ ರಾತ್ರಿ ನಿದ್ರೆ ಮಾಡದೇ ಪರಿತಪಿಸುವಂತಹ ವಾತವರಣ ನಾಯಿಗಳಿಂದ ನಿರ್ಮಾಣವಾಗಿದೆ.

ರಸ್ತೆ ಅಪಘಾತ: ಬೀದಿನಾಯಿಗಳ ಹಿಂಡು ರಸ್ತೆಯಲ್ಲೇ ಹೆಚ್ಚಾಗಿ ಇರುವುದರಿಂದ ರಸ್ತೆಯಲ್ಲಿ ಬರುವ ವಾಹನಗಳಿಗೂ ದಾರಿ ಬಿಡುತ್ತಿಲ್ಲ. ಗುಂಪು ಗುಂಪಾಗಿ ನಿಲ್ಲುವುದರಿಂದ ಹಲವು ಬೈಕ್‌ ಸವಾರರು ನಾಯಿಗಳಿಗೆ ಗುದ್ದಿಸಿ, ರಸ್ತೆಯಲ್ಲಿ ಬಿದ್ದು, ತೀವ್ರಗಾಯಗೊಂಡಿದ್ದು, ಹಲವು ಘಟನೆಗಳು ಜರುಗಿರುವ ನಿರ್ದೇಶನ ಪಟ್ಟಣದಲ್ಲಿ ಇದೆ.

ಭಯಪಡುವ ವಿದ್ಯಾರ್ಥಿಗಳು: ಮುಖ್ಯ ರಸ್ತೆಗಳಲ್ಲಿ ಶಾಲೆ, ಕಾಲೇಜಿಂದ ನಡೆದು ಬರುವ ವಿದ್ಯಾರ್ಥಿಗಳು, ನಾಯಿಗಳ ಹಿಂಡು ಕಂಡು ಎಲ್ಲಿ ಕಚ್ಚಿ ಬಿಡುತ್ತದೆಯೋ ಎಂದು ಭಯಭೀತರಾಗಿ, ನಾಯಿಗಳಿಗೆ ರಸ್ತೆಯನ್ನು ಬಿಟ್ಟು, ರಸ್ತೆ ಬದಿಯಲ್ಲಿ ಅಂಜಿ ಹೋಗುವಂತಹ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಎದುರಾಗಿದೆ.

ಇನ್ನು ಮುಂದೆಯಾದರೂ ನಗರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡು, ವಿವಿಧ ಬಡಾವಣೆಗಳಲ್ಲಿ ಹೆಚ್ಚಿರುವ ನಾಯಿಗಳ ಉಪಟಳವನ್ನು ನಿಯಂತ್ರಣ ಮಾಡಿ ಭಯಭೀತರಾಗಿರುವ ಸಾರ್ವಜನಿಕರಿಗೆ, ಮಕ್ಕಳಿಗೆ ಮತ್ತು ವಾಹನ ಸವಾರರಿಗೆ ಅನುಕೂಲ ಕಲ್ಪಿಸುವರೇ ಎಂದು ಕಾದು ನೋಡಬೇಕಾಗಿದೆ.

ಬೀದಿನಾಯಿಯನ್ನು ಬೇರೆಡೆ ಸಾಗಿಸಲಾಗದ ದುಸ್ಥಿತಿ: ಈ ಹಿಂದೆ ನಗರಸಭೆ ವತಿಯಿಂದ ಬೀದಿನಾಯಿಗಳಿಗೆ ಚುಚ್ಚು ಮದ್ದುಗಳನ್ನು ಹಾಕಿ, ಕೊಲ್ಲಲಾಗುತ್ತಿತ್ತು. ನಂತರ ನಾಯಿಗಳನ್ನು ಹಿಡಿದು ಕಾಡಿಗೆ ಬಿಡಲಾಗುತ್ತಿತ್ತು. ಇದನ್ನು ಕಂಡ ಪ್ರಾಣಿ ದಯಾಳು ಸಂಘದವರು, ನಗರಸಭೆಯ ಅಧಿಕಾರಿಗಳ ಮೇಲೆ ದೂರುಗಳನ್ನು ಸಲ್ಲಿಸಿ, ನಾಯಿಗಳನ್ನು ಕೊಲ್ಲದಿರಲು ಮತ್ತು ಹಿಡಿದು ಬೇರೆಡೆಗೆ ಸಾಗಿಸಬಾರದು ಎಂದು ನ್ಯಾಯಾಲಯಗಳಲ್ಲಿ ಮೊಕದ್ದಮೆ ನೀಡಿದ ಹಿನ್ನಲೆಯಲ್ಲಿ ಬೀದಿನಾಯಿಯನ್ನು ಕೊಲ್ಲಲಾಗದೆ, ಬೇರೆಡೆಗೆ ಸಾಗಿಸಲಾಗದ ದುಸ್ಥಿತಿ ಎದುರಾಗಿದೆ ಎಂದು ನಗರಸಭೆಯ ಪೌರಾಯುಕ್ತ ನಾಗಶೆಟ್ಟಿ ತಿಳಿಸಿದ್ದಾರೆ.

ನಗರಸಭೆಯ ಅಧಿಕಾರಿಗಳು ನಾಯಿಗಳ ಸಂತಾನಹರಣ ಮಾಡಲು ಸೂಚಿಸಿದರೆ, ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪಶು ವೈದ್ಯ ಇಲಾಖೆ ಸಿದ್ಧವಾಗಿದೆ.
-ಡಾ.ವೆಂಕಟರಾಮು, ಸಹಾಯಕ ನಿರ್ದೇಶಕ, ಪಶು ವೈದ್ಯ ಇಲಾಖೆ

* ಡಿ ನಟರಾಜು

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-gundlupete

Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು

Kollegala-Archaka

Kollegala: ತೀರ್ಥ ಸ್ನಾನಕ್ಕೆ ಹೋದ ಅರ್ಚಕ ಕಾವೇರಿಯಲ್ಲಿ ಮುಳುಗಿ ಸಾವು

7-hanur

Hanur: ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯ ಬಂಧನ

5

Hanur: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ

Bandipur: ಕಾಡಾನೆ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ವ್ಯಕ್ತಿಗೆ 25 ಸಾವಿರ ರೂ. ದಂಡ!

Bandipur: ಕಾಡಾನೆ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ವ್ಯಕ್ತಿಗೆ 25 ಸಾವಿರ ರೂ. ದಂಡ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.