ಚಾಮರಾಜನಗರ ಜಿಪಂಗೆ ಅಶ್ವಿನಿ ಅಧ್ಯಕ್ಷೆ
Team Udayavani, May 31, 2020, 4:45 AM IST
ಚಾಮರಾಜನಗರ: ಜಿಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಎಂ.ಅಶ್ವಿನಿಅವಿರೋಧವಾಗಿ ಆಯ್ಕೆಯಾದರು. ಜಿಪಂ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಚುನಾ ವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಜಯರಾಂ ಅಶ್ವಿನಿ ಅವರ ಅವಿರೋಧ ಆಯ್ಕೆಯನ್ನು ಘೋಷಿ ಸಿದರು. ಶಿವಮ್ಮ ರಾಜೀನಾಮೆಯಿಂದ ತೆರ ವಾಗಿದ್ದ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು.
ತೆರಕಣಾಂಬಿ ಜಿಪಂ ಕ್ಷೇತ್ರದ ಸದಸ್ಯೆ ಎಂ.ಅಶ್ವಿನಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಮೊದಲು ಹರದನಹಳ್ಳಿ ಕ್ಷೇತ್ರದ ರಾಮಚಂದ್ರ ಅಧ್ಯಕ್ಷರಾಗಿದ್ದರು. ರಾಮಚಂದ್ರ ಬಿಜೆಪಿಗೆ ಸೇರ್ಪಡೆ ಯಾಗಿ ರಾಜೀನಾಮೆ ನೀಡಿದ ಬಳಿಕ ಪಾಳ್ಯ ಕ್ಷೇತ್ರದ ಶಿವಮ್ಮ ಅಧ್ಯಕ್ಷರಾಗಿದ್ದರು. 36 ತಿಂಗಳ ಅವಧಿಯಲ್ಲಿ 18 ತಿಂಗಳು ಶಿವಮ್ಮ, ಇನ್ನು 18 ತಿಂಗಳು ಅಶ್ವಿನಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಪಕ್ಷದೊಳಗೆ ಒಪ್ಪಂದ ಆಗಿತ್ತು.
ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 23 ಸದಸ್ಯ ಬಲವಿದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 14 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. ಬಿಜೆಪಿ 9 ಸ್ಥಾನಗಳನ್ನು ಹೊಂದಿದೆ.
ಅಭಿವೃದ್ಧಿಗೆ ಆದ್ಯತೆ: ನೂತನ ಜಿಪಂ ಅಧ್ಯಕ್ಷೆ ಎಂ.ಅಶ್ವಿನಿ ಮಾತನಾಡಿ, ಎಲ್ಲ ಸದಸ್ಯರ ವಿಶ್ವಾಸ ಪಡೆದು ಜಿಲ್ಲೆಯಲ್ಲಿ ಕುಡಿಯುವ ನೀರು, ಸ್ವತ್ಛತೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದರು. ಡೀಸಿ ಡಾ. ಎಂ.ಆರ್.ರವಿ, ಜಿಪಂ ಸಿಇಒ ಭೋಯರ್ ಹರ್ಷಲ್ ನಾರಾಯಣ್‌ರಾವ್, ಹೆಚ್ಚುವರಿ ಆಯುಕ್ತೆ ಗಾಯತ್ರಿ ಹಾಜರಿದ್ದರು. ಕಾಂಗ್ರೆಸ್ ಸದಸ್ಯೆ ಶಿವಮ್ಮ, ಬಿಜೆಪಿ ಸದಸ್ಯರಾದ ಬಾಲರಾಜ್, ಇಷತ್ ಬಾನು ಗೈರಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.