ಮಳೆ ಬಂದ್ರೆ ಕೆರೆಯಂತಾಗುವ ಬಿ.ರಾಚಯ್ಯ ಜೋಡಿ ರಸ್ತೆ


Team Udayavani, May 30, 2023, 2:13 PM IST

ಮಳೆ ಬಂದ್ರೆ ಕೆರೆಯಂತಾಗುವ ಬಿ.ರಾಚಯ್ಯ ಜೋಡಿ ರಸ್ತೆ

ಚಾಮರಾಜನಗರ: ಜೋರು ಮಳೆ ಬಂದ ಸಂದರ್ಭದಲ್ಲಿ ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಕಾಲುವೆಯಂತೆ ನೀರು ನಿಂತು, ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಸರಿ ಸುಮಾರು 10 ವರ್ಷಗಳಿಂದಲೂ ಈ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ವಿಫ‌ಲರಾಗಿದ್ದಾರೆ.

2013ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬಿ.ರಾಚಯ್ಯ ಜೋಡಿ ರಸ್ತೆಯನ್ನು 80 ಅಡಿಯಿಂದ 100 ಅಡಿಗೆ ಅಗಲ ಮಾಡಲಾಯಿತು. ಡಾಂಬರು ರಸ್ತೆಯನ್ನು ಸಿಮೆಂಟ್‌ ಕಾಂಕ್ರೀಟ್‌ ರಸ್ತೆಯನ್ನಾಗಿ ಪರಿವರ್ತಿಸಲಾಯಿತು. ಈ ಸಂದರ್ಭದಲ್ಲಿ ಅವೈಜ್ಞಾನಿ‌ಕ ತರಾತುರಿಯ ಕಾಮಗಾರಿ ನಡೆಯಿತು. ಜೋಡಿ ರಸ್ತೆಯನ್ನು ಅಗಲ ಮಾಡುವುದಕ್ಕೆ ಆದ್ಯತೆ ನೀಡಲಾಯಿತೇ ಹೊರತು, ಕೈಗೊಳ್ಳಬೇಕಾದ ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ.

ರಸ್ತೆ ಅಗಲ ಮಾಡುವ ಸಂದರ್ಭದಲ್ಲಿ ರಸ್ತೆಯಡಿ ಹಾದು ಹೋಗಿರುವ ನೀರು ಸರಬರಾಜು ಪೈಪುಗಳನ್ನು ಸ್ಥಳಾಂತರಿಸಿ ಪಕ್ಕಕ್ಕೆ ಹಾಕಲಿಲ್ಲ. ಮತ್ತು ಹಳೆಯ ಪೈಪುಗಳನ್ನೇ ಉಳಿಸಲಾಯಿತು. ಹೀಗಾಗಿ ಪ್ರತಿ ಬಾರಿ ಮನೆ ಮನೆಗಳಿಗೆ ನೀರು ಬಿಟ್ಟಾಗಲೂ, ಜೋಡಿ ರಸ್ತೆ ಮಧ್ಯ ಇರುವ ಅತ್ಯಂತ ಹಳೆಯ ಪೈಪುಗಳು ಒಡೆದು ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದಾಗಿ ನೀರು ಸರಬರಾಜು ಮಾಡಿದಾಗಲೆಲ್ಲಾ ಸಾವಿರಾರು ಲೀಟರ್‌ ನೀರು ವ್ಯರ್ಥವಾಗುತ್ತಿದೆ. ಇದು ಒಂದು ಸಮಸ್ಯೆ.

ಸಮಸ್ಯೆ ಬಗೆ ಹರಿಸಲು ಆಸಕ್ತಿ ವಹಿಸದ ಶಾಸಕ: ಆರೋಪ: 2013ರಲ್ಲಿ ದ್ದ ಕಾಂಗ್ರೆಸ್‌ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲಿಲ್ಲ. ನಂತರ 2018ರಲ್ಲಿ ಬಂದ ಬಿಜೆಪಿ ಸರ್ಕಾರವೂ ಈ ಸಮಸ್ಯೆ ಬಗೆ ಹರಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈಗ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ವಿಪರ್ಯಾಸವೆಂದರೆ, ಮೂರು ಅವಧಿಯಲ್ಲೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರೇ ಅಧಿಕಾರದಲ್ಲಿದ್ದಾರೆ. ಈ ಸಮಸ್ಯೆ ಬಗೆ ಹರಿಸಲು ಆಸಕ್ತಿಯನ್ನೇ ವಹಿಸಿಲ್ಲ ಎಂದು ನಾಗರಿಕರು ದೂರುತ್ತಾರೆ. ವಿಪರ್ಯಾಸವೆಂದರೆ, ಇಂಥ ತೀವ್ರ ಸಮಸ್ಯೆ ಜಿಲ್ಲಾಡಳಿತ ಭವನದ ಮುಂದೆಯೇ ನಡೆದರೂ ಅಧಿಕಾರಿಗಳು ಇದನ್ನು ಬಗೆಹರಿಸಲು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಒಮ್ಮೆ ಭಾರಿ ಮಳೆ ಬಂದು ಇಡೀ ಜೋಡಿ ರಸ್ತೆ ನೀರು ಜಿಲ್ಲಾಡಳಿತ ಭವನದ ಆವರಣಕ್ಕೇ ನುಗ್ಗಿ, ಜಿಲ್ಲಾಡಳಿತ ಭವನದ ಆವರಣ ನದಿಯೋಪಾದಿ ಕಾಣುತ್ತಿತ್ತು. ಇಷ್ಟಾದರೂ ಅಧಿಕಾರಿಗಳು ಸಮಸ್ಯೆ ಬಗೆ ಹರಿಸಲು ಯತ್ನಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಜನರು. ಈಗ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆ ಸರ್ಕಾರದ ಅವಧಿಯಲ್ಲಿ, ನಡೆದ ಜೋಡಿ ರಸ್ತೆಯ ಕೆಟ್ಟ ಕಾಮಗಾರಿಯೇ ಈ ಸಮಸ್ಯೆಗೆ ಕಾರಣ. ಇದನ್ನು ಆ ಸರ್ಕಾರವೇ ಸರಿಪಡಿಸಬೇಕಿದೆ. ಶಾಸಕ ಪುಟ್ಟರಂಗಶೆಟ್ಟಿಯವರು ಇದನ್ನು ಆದ್ಯತೆಯ ಮೇಲೆ ತೆಗೆದುಕೊಂಡು ಈ ಸಮಸ್ಯೆಯನ್ನು ಬಗೆಹರಿಸಿ ಮಳೆಗಾಲದಲ್ಲಿ ಜೋಡಿ ರಸ್ತೆಯಲ್ಲಿ ಸಂಚಾರ ಸುಗಮವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕೆಂಬುದು ಜನರ ಆಗ್ರಹ.

ಚರಂಡಿ ವ್ಯವಸ್ಥೆಯೇ ಇಲ್ಲ : ಇದಕ್ಕಿಂತಲೂ ತೀವ್ರ ರೀತಿಯ ಸಮಸ್ಯೆಯೆಂದರೆ, ಮಳೆ ನೀರು ಹರಿದುಹೋಗಲು, ಚರಂಡಿ ವ್ಯವಸ್ಥೆ ಮಾಡದಿರುವುದು. ಜೋಡಿ ರಸ್ತೆ ಅಗಲ ಮಾಡುವ ಕಾಮಗಾರಿ ನಡೆಸಿದ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳ ಜಾಗವನ್ನು ಒಡೆಯಲಾಯಿತು. ಆ ಸಂದರ್ಭದಲ್ಲಿ ಕಟ್ಟಡಗಳ ಮಾಲೀಕರಿಗೆ ಪರಿಹಾರ ನೀಡಲಿಲ್ಲ. ಆಗ ನಗರಸಭೆಯಿಂದ ಬಲಾತ್ಕಾರವಾಗಿ ಜಾಗವನ್ನು ತೆರವುಗೊಳಿಸಲಾಯಿತು. ಈ ಬೆದರಿಕೆಗೆ ಜಗ್ಗದ ಕೆಲವರು ನ್ಯಾಯಾಲಯದ ಮೊರೆ ಹೊಕ್ಕರು. ಹಾಗೆ ನ್ಯಾಯಾಲಯದ ಮೊರೆ ಹೋದವರ ಕಟ್ಟಡಗಳ ಮುಂದೆ ರಸ್ತೆ ಅಗಲ ಮಾಡಲಿಲ್ಲ. ಹಾಗಾಗಿ ಅಲ್ಲಿ ಚರಂಡಿ ನಿರ್ಮಾಣ ಮಾಡಿಲ್ಲ. ಹೀಗೆ ಒಂದಷ್ಟು ದೂರ ಚರಂಡಿ ಇದ್ದು, ಇನ್ನೊಂದಿಷ್ಟು ದೂರ ಚರಂಡಿ ಇಲ್ಲ. ಹೀಗಾಗಿ ಜೋಡಿ ರಸ್ತೆಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆಯೇ ಇಲ್ಲ.

ಮಳೆ ಬಂದರೆ ಸಾಕು ರಸ್ತೆಯಲ್ಲೇ ಹರಿಯುವ ನೀರು: ಈ ಕಾರಣದಿಂದ ಮಳೆ ಬಂದಾಗ ಮಳೆ ನೀರು ಚರಂಡಿಗೆ ಹೋಗದೇ ರಸ್ತೆಯಲ್ಲೇ ಹರಿಯುತ್ತದೆ. ಇದರ ಪರಾಕಾಷ್ಠೆ ಎಂದರೆ, ನಗರದ ಶ್ರೀನಿವಾಸ ಹೋಟೆಲ್‌ ಬಳಿ ರಾಜಕಾಲುವೆಯಿದ್ದು, ಇದರಲ್ಲಿ ನಗರದ ಅನೇಕ ಬೀದಿಗಳ ನೀರು ಹರಿದುಬರುತ್ತದೆ. ಈ ರಾಜಕಾಲುವೆ ಜೋಡಿ ರಸ್ತೆ ಸೇರುವ ಜಾಗದಲ್ಲಿ ದೊಡ್ಡ ಪೈಪನ್ನು ಹಾಕದ ಕಾರಣ, ರಾಜ ಕಾಲುವೆ ನೀರು ಜೋಡಿ ರಸ್ತೆಯ ಮೇಲೆ ಹರಿಯುತ್ತದೆ. ಒಂದೆಡೆ ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ನಿಂತ ನೀರು, ಇನ್ನೊಂದೆಡೆ ರಾಜಕಾಲುವೆಯ ನೀರು ಎರಡೂ ಸೇರಿ, ಜಿಲ್ಲಾಡಳಿತ ಭವನ, ಅಧ್ಯಕ್ಷ ಹೋಟೆಲ್‌ ಬಳಿ ಮಳೆ ಬಂದಾಗ ಕೊಳಚೆ ನೀರಿನ ಸರೋವರ ಸೃಷ್ಟಿಯಾಗುತ್ತದೆ. ಹೀಗಾಗಿ ಜೋರು ಮಳೆ ಬಂದಾಗ ಈ ಜಾಗವನ್ನು ದಾಟಲಾಗದೇ, ವಾಹನ ಸವಾರರು, ಪಾದಚಾರಿಗಳು ನಿಲ್ಲಬೇಕಾಗುತ್ತದೆ. ಈ ಸಂದರ್ಭದಲ್ಲಿ ಜೋಡಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿ ಜನರು ನಗರಸಭೆಯನ್ನೂ, ಅಧಿಕಾರಿಗಳನ್ನೂ, ಜನಪ್ರತಿನಿಧಿಗಳನ್ನು ಶಪಿಸುತ್ತಾ ನಿಂತಿರುತ್ತಾರೆ. ಇದು ಪ್ರತಿ ಬಾರಿ ಮಳೆ ಬಂದಾಗಲೂ ಜೋಡಿ ರಸ್ತೆಯಲ್ಲಿ ನಡೆಯುವ ನಿರಂತರ ಪ್ರಹಸನ.

ಕಳೆದ 10 ವರ್ಷಗಳಿಂದಲೂ ಬಿ. ರಾಚಯ್ಯ ಜೋಡಿ ರಸ್ತೆಯ ಅವ್ಯವಸ್ಥೆ ಯನ್ನು, ಮಳೆಗಾಲದಲ್ಲಾಗುವ ಅವಾಂತ ರವನ್ನು ಸರಿಪಡಿಸಲು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾಧ್ಯವಾಗಲಿಲ್ಲ ಎಂಬುದು ಅತ್ಯಂತ ಬೇಸರದ ಸಂಗತಿ. ಹಾಗಾದರೆ, ಓಟು ಕೊಟ್ಟು ಇವರನ್ನು ಗೆಲ್ಲಿಸುವುದು ಯಾತಕ್ಕಾಗಿ? -ಮಹದೇವು, ರಾಮಸಮುದ್ರ

ಜಿಲ್ಲಾಧಿಕಾರಿ ಕಚೇರಿ ಬಳಿ ರಾಜಕಾಲುವೆ ಕೆಳಗೆ ಕಾವೇರಿ ನೀರಿನ ಪೈಪ್‌ ಹಾದು ಹೋಗಿದೆ. ಮಳೆ ಬಂದಾಗ ಪೈಪ್‌ ಗೆ ಕಸ ಸಿಕ್ಕಿಕೊಂಡು ನೀರು ರಸ್ತೆಗೆ ಹರಿಯುತ್ತದೆ. ಆ ಪೈಪ್‌ ಅನ್ನು ಸ್ಥಳಾಂತರಿ ಸಲು 30 ಲಕ್ಷ ರೂ.ಗಳಿಗೆ ಎಸ್ಟಿಮೇಟ್‌ ಮಾಡ ಲಾಗಿದೆ. ಸರ್ಕಾರದ ಅನುದಾನ ನಿರೀಕ್ಷಿಸುತ್ತಿದ್ದೇವೆ. ಅನುದಾನ ಬಂದ ಬಳಿಕ ಪೈಪ್‌ ಅನ್ನು ಮೇಲೆ ಸ್ಥಳಾಂತರಿಸಿದರೆ ಸಮಸ್ಯೆ ಬಗೆ ಹರಿಯಲಿದೆ. -ಎಸ್‌.ವಿ.ರಾಮದಾಸ್‌, ಪೌರಾಯುಕ್ತ, ನಗರಸಭೆ

-ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-bandipura

New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ

Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police

Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

accident

Kasaragod; ಬಸ್‌-ಕಾರು ಢಿಕ್ಕಿ: ಇಬ್ಬರ ಸಾವು

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.