Bandipur: ಮರಿಗಳ ಜತೆ ನಿದ್ರೆಗೆ ಜಾರಿದ ತಾಯಿ ಹುಲಿಯ ದೃಶ್ಯ ವೈರಲ್
ಗಂಡು ಹುಲಿಯ ಕಾವಲು... ವಿಡಿಯೋ ವೈರಲ್
Team Udayavani, May 30, 2024, 8:03 PM IST
ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ತೊರೆಯೊಂದರ ಸಮೀಪ ಹುಲಿ ತನ್ನ ಮರಿಗಳ ಜತೆಗೆ ಜಾಲಿಯಾಗಿ ನಿದ್ರೆಗೆ ಜಾರಿದ ದೃಶ್ಯ ಪ್ರವಾಸಿಗರೊಬ್ಬರ ಕೆಮರಾ ಕಣ್ಣಲ್ಲಿ ಸೆರೆಯಾಗಿದೆ.
ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿಗೆ ಪ್ರವಾಸಿಗರು ತೆರಳಿದ್ದ ವೇಳೆ, ಸಫಾರಿ ಜೋನ್ ನ ಬಾರ್ಡರ್ ರೋಡ್ ಎಂಬಲ್ಲಿ ತೊರೆಯೊಂದರ ಬಳಿ ತಾಯಿ ಹುಲಿ ಹಾಗೂ ಎರಡು ಮರಿ ಹುಲಿಗಳು ಮಲಗಿ ನಿದ್ರಿಸುತ್ತಿದ್ದರೇ, ಗಂಡು ಹುಲಿ ಎಚ್ಚರವಾಗಿ ಅತ್ತಿತ್ತ ನೋಡುತ್ತಿರುವ ದೃಶ್ಯವನ್ನು ರೋಮಾಂಚನಗೊಂಡ ಪ್ರವಾಸಿಗರು ಸೆರೆ ಹಿಡಿಯುವ ಮೂಲಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಸಾಕಷ್ಟು ವೈರಲ್ ಆಗಿದೆ.
ಸಫಾರಿಯಲ್ಲಿ ಹೆಚ್ಚಿನ ಪ್ರಾಣಿಗಳ ದರ್ಶನ
ಬಂಡೀಪುರ ಅಭಯಾರಣ್ಯಕ್ಕೆ ಕಳೆದ 15 ದಿನಗಳಿಂದ ಉತ್ತಮ ಮಳೆಯಾಗಿರುವ ಕಾರಣ ಕಾಡೆಲ್ಲ ಅಚ್ಚ ಹರಿಸಿರಿನಿಂದ ಕಂಗೊಳಿಸುತ್ತಿದೆ. ಈ ಕಾರಣದಿಂದ ಜಿಂಕೆ, ನವಿಲು, ಕಾಡೆಮ್ಮೆ, ಆನೆಗಳು ಸಫಾರಿ ರಸ್ತೆಯಲ್ಲಿಯೇ ಮೇವು ಮೇಯುತ್ತ ನಿಂತಿರುತ್ತವೆ. ಇನ್ನು ಕೆರೆ-ಕಟ್ಟೆಗಳ ಆಸುಪಾಸಿನಲ್ಲಿ ಹುಲಿ ಹಾಗೂ ಚಿರತೆ ನೀರು ಕುಡಿಯಲು ಆಗಮಿಸುತ್ತವೆ. ಬೆಳಗಿನ ಸಫಾರಿಯಲ್ಲಿ ಹೆಚ್ಚಿನ ಕಾಡುಪ್ರಾಣಿಗಳ ದರ್ಶನ ನೀಡುತ್ತಿದ್ದು, ಪ್ರವಾಸಿಗರು ವನ್ಯಪ್ರಾಣಿಗಳನ್ನು ಕಣ್ತುಂಬಿಕೊಂಡು ಖುಷಿ ಪಡುತ್ತಿದ್ದಾರೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Sullia: ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.