ಈ ವರ್ಷವೇ ಕಾನೂನು ಕಾಲೇಜು ಆರಂಭಿಸಿ
Team Udayavani, Dec 29, 2020, 2:54 PM IST
ಚಾಮರಾಜನಗರ: ತಾವು ಸಂಸದರಾಗಿದ್ದಾಗ ಶ್ರಮ ವಹಿಸಿ ಮಂಜೂರು ಮಾಡಿಸಿದ್ದ ಸರ್ಕಾರಿ ಕಾನೂನು ಕಾಲೇಜನ್ನು ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ತಮ್ಮ ಎಡೆ ಬಿಡದ ಪ್ರಯತ್ನದಿಂದಾಗಿ ಸಿದ್ದರಾ ಮಯ್ಯ ಅವರು ಮುಖ್ಯಮಂತಿ ಸಂದರ್ಭದಲ್ಲಿ 2017-18ನೇ ಸಾಲಿನಲ್ಲಿ ಚಾಮರಾಜನಗರ ಸರ್ಕಾರಿ ಕಾನೂನು ಕಾಲೇಜು ಮಂಜೂರಾಯಿತು. ಇದಕ್ಕಾಗಿ ಸಿದ್ದರಾಮಯ್ಯಅವರು ಬಜೆಟ್‌ನಲ್ಲಿ 1 ಕೋಟಿ ರೂ.ನೀಡಿದ್ದರು. ಇನ್ನೇನು ಲಾ ಕಾಲೇಜು ಆರಂಭವಾಗುವ ಹಂತದಲ್ಲಿತ್ತು. ಆದರೆ, ಬಾರ್ ಕೌನಿಲ್ಸ್ ಆಫ್ ಇಂಡಿಯಾ ದೇಶದಲ್ಲಿ 3 ವರ್ಷಗಳ ಕಾಲ ಯಾವುದೇ ಹೊಸ ಕಾನೂನು ಕಾಲೇಜು ಸ್ಥಾಪನೆ ಬೇಡ ಎಂದು ನಿರ್ಧಾರ ಕೈಗೊಂಡಿತ್ತು. ಹೀಗಾಗಿ ಇದುವರೆಗೆ ಕಾನೂನು ಕಾಲೇಜು ಆರಂಭಿಸಲು ಸಾಧ್ಯವಿರಲಿಲ್ಲ. ಆದರೆ ಇತ್ತೀಚಿಗಷ್ಟೇ ಬಾರ್ ಕೌನ್ಸಿಲ್ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಆದ್ದರಿಂದ ಕಾನೂನು ಕಾಲೇಜು ಆರಂಭಿಸಲು ಇದ್ದ ತಡೆ ನಿವಾರಣೆಯಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಮುಂಬರುವ2021ರ ಸಾಲಿನಲ್ಲಿಯೇ ಚಾಮರಾಜನಗರ ದಲ್ಲಿ ಕಾನೂನು ಕಾಲೇಜು ಪ್ರಾರಂಭ ಮಾಡಬೇಕು ಎಂದರು.
ರಾಜ್ಯದಲ್ಲಿ ಹಾಸನ, ಹೊಳೆನರಸೀಪುರ, ರಾಮನಗರ, ಕಲುಬುರಗಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಮಾತ್ರ ಸರ್ಕಾರಿ ಕಾನೂನು ಕಾಲೇಜು ಇದ್ದು, ಚಾಮರಾಜ ನಗರ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಕಾನೂನು ಕಾಲೇಜು ಇರಲಿಲ್ಲ. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಕಾನೂನು ಕಾಲೇಜು ಸಹಕಾರಿ ಆಗಲಿದೆ ಎಂಬ ಕಾರಣಕ್ಕೆ ನಾನುಸಂಸದನಾಗಿದ್ದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಜಿ.ಟಿ.ಜಯಚಂದ್ರ ಅವರ ಮೇಲೆ ತೀವ್ರಒತ್ತಡ ತಂದ ಪರಿಣಾಮ ಚಾಮರಾಜನಗರಕ್ಕೆಸರ್ಕಾರಿ ಕಾಲೇಜು ಸ್ಥಾಪನೆಗೆ ಮಂಜೂರಾತಿದೊರೆಯಿತು. ಚಾಮರಾಜನಗರದ ಹಳೇ ಕೇಂದ್ರಿಯ ವಿದ್ಯಾಲಯದ ಕಟ್ಟಡದಲ್ಲಿ ಕಾನೂನು ಕಾಲೇಜು ಸ್ಥಾಪನೆಗಾಗಿ 17 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡವನ್ನು ದುರಸ್ತಿ ಗೊಳಿಸಲಾಯಿತು. ಕಾನೂನು ಕಾಲೇಜು ಸ್ಥಾಪನೆಗಿದ್ದ ತಡೆ ನಿವಾರಣೆಯಾಗಿರುವ ವಿಷಯವನ್ನು ಸುತ್ತೂರು ಶ್ರೀಗಳಿಗೆ ತಿಳಿಸಿದೆ. ಅವರುಕಾನೂನು ಸಚಿವ ಮಾಧುಸ್ವಾಮಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಮಾಧುಸ್ವಾಮಿ ಅವರು ನನ್ನನ್ನು ಭೇಟಿ ಮಾಡುವಂತೆ ತಿಳಿಸಿದ್ದಾರೆ. ನಾನು ನಾಳೆಯೇ (ಮಂಗಳವಾರ) ಮಾಧುಸ್ವಾಮಿ ಅವರನ್ನು ಭೇಟಿ ಮಾಡಲಿದ್ದೇನೆ ಎಂದರು.
ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರಿ ಕಾನೂನು ಕಾಲೇಜು ತುಂಬಾ ಅವಶ್ಯಕತೆ ಇರುವುದರಿಂದ ಈ ಪ್ರಸಕ್ತ ಶೈಕ್ಷಣಿಕ ವರ್ಷ ದಿಂದಲೇ ಕಾಲೇಜು ಆರಂಭಿಸಲು ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹಾಗೂ ಕಾನೂನು ಸಚಿವರು ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು ಇತರರಿದ್ದರು.
ಕೃಷಿ ಕಾಲೇಜಿಗೆ 25 ಕೋಟಿ ಬಳಕೆಗೆ ಸಮ್ಮತಿಸಿ :
ಚಾಮರಾಜನಗರದಲ್ಲಿ ಆರಂಭವಾಗಿರುವ ಕೃಷಿ ಕಾಲೇಜಿನ ಸ್ವಂತ ಕಟ್ಟಡ ನಿರ್ಮಾಣಕ್ಕೆ ನರ್ಬಾರ್ಡ್ ಅನುದಾನ 25 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಣವನ್ನು ಕಾಮಗಾರಿಗೆ ನೀಡಲು ಸಚಿವ ಸಂಪುಟ ಸಮ್ಮತಿ ನೀಡಬೇಕು ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ ಒತ್ತಾಯಿಸಿದರು.
ಚಾಮರಾಜನಗರಕ್ಕೆ ಕೃಷಿ ಕಾಲೇಜು ಮಂಜೂರಾಗಿ 3 ವರ್ಷವಾಗಿದೆ. ಕಾಲೇಜು ಪ್ರಸ್ತುತ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿದೆ. ಯಡಬೆಟ್ಟದ ತಪ್ಪಲಿನಲ್ಲಿ 75 ಎಕರೆ ಜಾಗದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗಗುರುತಿಸಲಾಗಿದ್ದು, ನರ್ಬಾರ್ಡ್‌ನಿಂದ 25 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಅನುದಾನ ಬಿಡುಗಡೆಗೆ ಸಚಿವ ಸಂಪುಟ ಸಭೆಯ ಅನುಮತಿ ನೀಡಬೇಕು ಎಂದು ತಿಳಿಸಿದರು.ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಈಗಾಗಲೇ 5
ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಣದಲ್ಲಿ ಕಾಲೇಜು ಕಟ್ಟಡದ ಆರಂಭದ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಹಾಗೆಯೇ ಡಾ. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.