ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ ಭರಚುಕ್ಕಿ ಜಲಪಾತ
ಜನರಿಗೆ ಆಗುವ ಅನಾವುತವನ್ನು ಎದುರಿಸಲು ಪಹರೆ ನಡೆಸಿದ್ದಾರೆ.
Team Udayavani, Jul 15, 2022, 4:08 PM IST
ಕೊಳ್ಳೇಗಾಲ: ಧಾರಾಕಾರ ಮಳೆ ಸುರಿದು ಎಲ್ಲೆಲ್ಲೂ ನೀರು ತುಂಬಿ ತುಳುಕುತ್ತಿದ್ದು, ತಾಲೂಕಿನ ಭರಚುಕ್ಕಿ ಜಲಪಾತದಲ್ಲಿ ನೀರು ಹಾಲಿನ ನೊರೆಯಂತೆ ಧುಮ್ಮಿಕ್ಕಿ ಹರಿದು ಪ್ರವಾ ಸಿಗರನ್ನು ಕೈಬೀಸಿ ಕರೆಯುವಂತೆ ರಮಣಿಯವಾಗಿ ಬೀಳಲಾರಂಭಿಸಿದೆ.
ಕಬಿನಿ ಮತ್ತು ಕೆಆರ್ ಎಸ್ ಭರ್ತಿಗೊಂಡು ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರನ್ನು ಕಾವೇರಿ ನದಿಗೆ ಬಿಟ್ಟಿರುವುದರಿಂದ ಶಿವನಸಮುದ್ರದ ಬಳಿ ಇರುವ ಭರ ಚುಕ್ಕಿ ಜಲ ಪಾತ ಧುಮ್ಮಿಕ್ಕಿ ಹರಿಯುತ್ತಿರುವ ದೃಶ್ಯವನ್ನು ವೀಕ್ಷಣೆ ಮಾಡಲು ಪ್ರವಾಸಿಗರ ದಂಡೇ ಆಗಮಿಸಿತ್ತು.
ಕಾವೇರಿ ನದಿಯಲ್ಲಿ ನೀರಿನ ಮಟ್ಟ ಅಪಾಯ ಮೀರಿ ಹರಿಯುತ್ತಿದ್ದು ತಾಲೂಕಿನ ದಾಸನಪುರ, ಮುಳ್ಳೂರು, ಹಳೇ ಹಂಪಾಪುರ, ಹರಳೆ, ಯಡಕುರಿಯ ಗ್ರಾಮಕ್ಕೆ ಮತ್ತು ಜಮೀನಿಗೆ ನುಗ್ಗಿ ಪ್ರವಾಹದ ಭೀತಿ ಮನೆ ಮಾಡಿ ತಾಲೂಕು ಆಡಳಿತ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವ ಮೂಲಕ ಜನರಿಗೆ ಆಗುವ ಅನಾವುತವನ್ನು ಎದುರಿಸಲು ಪಹರೆ ನಡೆಸಿದ್ದಾರೆ.
ಭರಚುಕ್ಕಿ ಜಲಪಾತದ ನೀರು ಹಾಲಿನ ನೊರೆಯಂತೆ ಹರಿಯುತ್ತಿರುವುದನ್ನು ಕಂಡ ಪ್ರವಾಸಿಗರು ಪುಳಕಿತರಾಗಿ ತಮ್ಮ ಮೊಬೈಲ್ ಗಳ ಮೂಲಕ ಸೆಲ್ಫಿ ತೆಗೆದುಕೊಳ್ಳುವಲ್ಲಿ ಮಗ್ನರಾಗಿ ದ್ದರು. ನೀರು ಧುಮ್ಮುಕ್ಕಿರುವ ದೃಶ್ಯ ರಮಣಿವಾಗಿದ್ದರೂ ನೀರಿ ನಲ್ಲಿ ಜಲ ಕ್ರೀಡೆ ಆಡುವ ಕುತೂ ಹಲದಲ್ಲಿ ಇದ್ದ ಪ್ರವಾಸಿಗರು ನೀರಿನ ಬಳಿ ತೆರಳಲು ಜಿಲ್ಲಾಡಳಿತ ನಿರ್ಬಂಧ ಹೇರಿರುವ ಹಿನ್ನೆಲೆ ಸೀಮಿತ ಸ್ಥಳದಲ್ಲೇ ನಿಂತು ದೃಶ್ಯವೀಕ್ಷಣಿಸಿ ಪುಳಕಿತರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.