ಬಿಳಿಗಿರಿರಂಗ ವೈದಿಕ ಪರಂಪರೆಯ ಸಾಂಸ್ಕೃತಿಕ ವೀರ
Team Udayavani, Feb 19, 2019, 7:40 AM IST
ಚಾಮರಾಜನಗರ: ಮಂಟೇಸ್ವಾಮಿ, ಮಹದೇಶ್ವರ ಶೈವ ಪರಂಪರೆಯ ಸಾಂಸ್ಕೃತಿಕ ನಾಯಕರಾದರೆ, ಬಿಳಿಗಿರಿರಂಗ ವೈದಿಕ ಪರಂಪರೆಯ ಸಾಂಸ್ಕೃತಿಕ ವೀರ ಎಂದು ಮೈಸೂರು ವಿ.ವಿ. ಜಾನಪದ ವಿಭಾಗ ಮುಖ್ಯಸ್ಥ ಡಾ. ನಂಜಯ್ಯ ಹೊಂಗನೂರು ಅಭಿಪ್ರಾಯಪಟ್ಟರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿರುವ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸೋಮವಾರ ನಡೆದ ಗೋಷ್ಠಿಯಲ್ಲಿ ಬಿಳಿಗಿರಿ ರಂಗನ ಕಾವ್ಯ ಕುರಿತು ಮಾತನಾಡಿದರು.
ಜಿಲ್ಲೆ ಜನಪದ ಮಹಾಕಾವ್ಯಗಳ ಹಾಗೂ ಕೆಲವು ಜನಪ್ರಿಯ ಕಥನ ಕಾವ್ಯಗಳ ತವರೂರಾಗಿದ್ದು, ಇಲ್ಲಿಯ ಮಂಟೇಸ್ವಾಮಿ ಮತ್ತು ಮಹದೇಶ್ವರ ಕರ್ನಾಟಕದ ಪ್ರಸಿದ್ದ ಜನಪದ ಮಹಾಕಾವ್ಯಗಳಾಗಿದ್ದರೆ ಬಿಳಿಗಿರಿ ರಂಗ ಅಷ್ಟೇ ಪ್ರಸಿದ್ದ ಕಥನ ಕಾವ್ಯವಾಗಿದೆ. ಜನಪದ ಪ್ರೇಮ ಕಾವ್ಯವಾಗಿದೆ ಎಂದರು.
ಸೋಲಿಗರ ಅಸ್ಮಿತೆ: ಬಿಳಿಗಿರಿ ರಂಗನ ಕಾವ್ಯ ಸೋಲಿಗರ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಈ ಕಾವ್ಯದಲ್ಲಿ ಸೋಲಿಗ ಸಮುದಾಯದ ಧಾರ್ಮಿಕ, ಸಾಮಾಜಿಕ, ಜೀವನಾವರ್ತನದ ಹಲವಾರು ಆಚರಣೆಗಳು ಅನಾವರಣಗೊಂಡಿದೆ. ಇದರಿಂದಾಗಿ ಸೋಲಿಗರ ಅಸ್ಮಿತೆ ಗುರುತಿಸಬಹುದಾಗಿದೆ ಎಂದು ಅಭಿಪ್ರಾಯಿಸಿದರು.
ಉತ್ತಮ ಸಂಬಂಧ: ಬಿಳಿಗಿರಿರಂಗನ ಕಾವ್ಯವನ್ನು ಹಾಗೂ ಸೋಲಿಗರ ಸಂಸ್ಕೃತಿಯನ್ನು ಕುರಿತು ನಡೆಸಿರುವ ಅಧ್ಯಯನಗಳು ಅಥವಾ ಸಂಶೋಧನೆಗಳಿಂದ ತಿಳಿದಿರುವುದು ಆಯಾ ಕ್ಷೇತ್ರಗಳಲ್ಲಿ ದೈವ, ಸ್ಥಳೀಯ ಜನರರ ನಡುವೆ ಉತ್ತಮ ಸಂಬಂಧವನ್ನಿಟ್ಟುಕೊಳ್ಳುವುದಕ್ಕಾಗಿ ಹೆಣ್ಣೊಂದನ್ನು ಕೊಡುವ ಪದ್ಧತಿ ಅನಾದಿಕಾಲದಿಂದಲೂ ಬಂದಿದೆ ಈ ಕಥೆ ಸ್ವಾರಸ್ಯಕರವಾಗಿ ಮೂಡಿಬಂದು ಒಂದು ಕಾವ್ಯದೆತ್ತರಕ್ಕೆ ಬೆಳೆದುನಿಂತಿದೆ ಎಂದು ತಿಳಿಸಿದರು.
ಬಿಳಿಗಿರಿರಂಗ ವೈಷ್ಣವ: ಈ ಕಾವ್ಯ ಶೈವ ಧರ್ಮವನ್ನು ಕೊನೆಗಾಣಿಸಿ ವೈಷ್ಣವ ಧರ್ಮವನ್ನು ಪ್ರತಿಷ್ಠಾಪಿಸುವ ಘಟನೆಯನ್ನು ಸಾಂಕೇತಿಕವಾಗಿ ಕಟ್ಟಿಕೊಡುತ್ತದೆ. ಬಿಳಿಗಿರಿರಂಗ ವೈಷ್ಣವನಾಗಿರುವುದರಿಂದ ಆತ ಸಸ್ಯಾಹಾರಿ.ಇಲ್ಲಿನ ಕಾಡು ಮತ್ತು ನಾಡಿನ ಜನಸಮುದಾಯ ಮಾಂಸಾಹಾರಿಗಳಾಗಿರುವುದರಿಂದ ಪ್ರತಿವರ್ಷ ದೊಡ್ಡಜಾತ್ರೆ ಸಂದರ್ಭದಲ್ಲಿ ಕುರಿ ಕೋಳಿಗಳ ಬಲಿಕೊಟ್ಟು ಹರಿಸೇವೆ ಮಾಡುತ್ತಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಬ್ಬಹಳ್ಳಿ ಮದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎನ್.ಎಸ್. ಮಹದೇವಪ್ರಸಾದ್ ಆಶಯ ನುಡಿಗಳನ್ನಾಡಿದರು. ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದೊಡ್ಡಗವಿಬಸಪ್ಪ ಮಲೆ ಮಹದೇಶ್ವರ ಕಾವ್ಯ ಗಾಯನ ಮಾಡಿದರೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಸಮುದ್ರ ನಿಂಗಶೆಟ್ಟಿ ಮಂಟೇಸ್ವಾಮಿ ಕಾವ್ಯ ಹಾಡಿದರು.
ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದೊಡ್ಡಮೋಳೆ ಎಚ್.ಸಣ್ಣಶೆಟ್ಟಿ ಬಿಳಿಗಿರಿರಂಗನ ಕಾವ್ಯವನ್ನು ಹಾಡಿದರು. ಸಮ್ಮೇಳನಾಧ್ಯಕ್ಷ ಡಾ. ಶಿವರಾಜಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ವಿನಯ್, ಚಂದ್ರಶೇಖರ್, ಕೊಮಾರನಪುರ ರವಿಕುಮಾರ್, ಬಳೇಪೇಟೆ ಪ್ರಸಾದ್, ಅರ್ಕಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
MUST WATCH
ಹೊಸ ಸೇರ್ಪಡೆ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.