Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
Team Udayavani, Nov 19, 2024, 8:08 PM IST
ಚಾಮರಾಜನಗರ: ಆದಿತ್ಯ ಬಿರ್ಲಾ ಸಮೂಹದ ಚೇರ್ಮನ್ ಕುಮಾರ ಮಂಗಲಂ ಬಿರ್ಲಾ ಮಂಗಳವಾರ (ನ.19) ಗ್ರಾಸಿಂ ಇಂಡಸ್ಟ್ರೀಸ್ ಲಿ.ಯ ಭಾಗವಾದ ಬಿರ್ಲಾ ಒಪಸ್ ಪೇಂಟ್ಸ್ ನಾಲ್ಕನೇ ಘಟಕವನ್ನು ಕರ್ನಾಟಕದ ಚಾಮರಾಜನಗರದಲ್ಲಿ ಉದ್ಘಾಟಿಸಿದರು. ಫುಲ್ಲಿ ಆಟೊಮೇಟೆಡ್, ಇಂಟಿಗ್ರೇಟೆಡ್ ಪೇಂಟ್ ಘಟಕ ತನ್ನ ಕಮರ್ಷಿಯಲ್ ಉತ್ಪಾದನೆಯನ್ನು ಇಂದು ಪ್ರಾರಂಭಿಸಿದೆ. ಇದರಿಂದ ಕಂಪನಿಯ ಉತ್ಪಾದನಾ ಸಾಮರ್ಥ್ಯ 866ಎಂ.ಎಲ್.ಪಿ.ಎ (ಮಿಲಿಯನ್ ಲೀಟರ್ಸ್ ಪರ್ ಆನಮ್-ವಾರ್ಷಿಕ ಮಿಲಿಯನ್ ಲೀಟರ್ಸ್)ಗೆ ಹೆಚ್ಚಿದೆ.
ಈ ಕುರಿತು ಮಾತನಾಡಿದ ಆದಿತ್ಯ ಬಿರ್ಲಾ ಸಮೂಹದ ಚೇರ್ಮನ್ ಕುಮಾರ ಮಂಗಲಂ ಬಿರ್ಲಾ, “ನಮ್ಮ ಪೇಂಟ್ಸ್ ಉದ್ಯಮವು ಹೊಸ, ವಿಶ್ವಾಸ ಮತ್ತು ಮಹತ್ವಾಕಾಂಕ್ಷೆಯ ಹೊಸ ಭಾರತಕ್ಕೆ ಸಂವಾದಿಸುತ್ತದೆ. ನಾವು ಈ ಉದ್ಯಮವನ್ನು ಮರು ರೂಪಿಸುವ ನಿಟ್ಟಿನಲ್ಲಿ ಈ ವರ್ಷದ ಪ್ರಾರಂಭದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ ಬಿಡುಗಡೆ ಮಾಡಿದ್ದು ಪೇಂಟ್ಸ್ ಉದ್ಯಮಕ್ಕೆ ಮಹತ್ತರ ಕ್ಷಣವಾಗಿದೆ. ಇದು ನಮ್ಮ ಇಲ್ಲಿಯವರೆಗಿನ ಯೋಜನೆಯಂತೆ ಮುನ್ನಡೆದಿದ್ದು 3 ವರ್ಷಗಳಲ್ಲಿ 10,000 ಕೋಟಿ ರೂ. ಆದಾಯದ ಗುರಿಗೆ ಪೂರಕವಾಗಿದ್ದು ಅದೇ ಮಾರ್ಗದಲ್ಲಿದ್ದೇವೆ” ಎಂದರು.
“ದೇಶದ ದಕ್ಷಿಣದ ಭಾಗದಲ್ಲಿ ವೃದ್ಧಿಸುತ್ತಿರುವ ಅಗತ್ಯಗಳಿಗೆ ವಿಶೇಷವಾಗಿ ಪೂರೈಕೆ ಮಾಡಲು ನಮ್ಮ ನಾಲ್ಕನೇ ಅತ್ಯಾಧುನಿಕ ಉತ್ಪಾದನಾ ಸೌಲಭ್ಯವನ್ನು ಚಾಮರಾಜನಗರದಲ್ಲಿ ಪ್ರಾರಂಭಿಸಿದ್ದು ಅದು ನಮಗೆ ಮತ್ತಷ್ಟು ಪ್ರಗತಿ ಸಾಧಿಸಲು ನೆರವಾಗುತ್ತದೆ. ಈ ಹೊಸ ಸೌಲಭ್ಯವು ನಮಗೆ ಗ್ರಾಹಕರಿಗೆ ಅಭಿರುಚಿಗೆ ತಕ್ಕಂತೆ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸಲು ನಮಗೆ ನೆರವಾಗುತ್ತದೆ, ಇದು ಅಲಂಕಾರಿಕ ಪೇಂಟ್ಸ್ ಉದ್ಯಮದಲ್ಲಿ ನಾಯಕರಾಗುವ ನಮ್ಮ ಬದ್ಧತೆಯನ್ನು ಎತ್ತಿ ತೋರಿಸುತ್ತದೆ” ಎಂದರು.
ಚಾಮರಾಜನಗರ ಘಟಕವು 230 ಎಂ.ಎಲ್.ಪಿ.ಎ ಸಾಮರ್ಥ್ಯ ಹೊಂದಿದ್ದು ವಾಟರ್ ಬೇಸ್ಡ್ ಪೇಂಟ್ಸ್, ಎನಾಮಲ್ ಪೇಂಟ್ಸ್ ಮತ್ತು ವುಡ್ ಫಿನಿಷ್ ಪೇಂಟ್ಸ್ ಉತ್ಪಾದಿಸುತ್ತದೆ. ವಾಟರ್ ಬೇಸ್ಡ್ ಪೇಂಟ್ಸ್ ಆಂತರಿಕವಾಗಿ ಉತ್ಪಾದನೆಯಾಗುವ ಸುಧಾರಿತ ಎಮಲ್ಷನ್ ಗಳನ್ನು ಪ್ರಮುಖ ಕಚ್ಚಾ ವಸ್ತುವಾಗಿ ಬಳಸಿ ವಿಶಿಷ್ಟ ಪಾಲಿಮರ್ ಸಿಂಥಸಿಸ್ ಪ್ರಕ್ರಿಯೆ ಮೂಲಕ ಕಂಪನಿಗೆ ಮಲ್ಟಿ ಸ್ಟೇನ್ ರೆಸಿಸ್ಟೆನ್ಸ್, ಔಟ್ ಸ್ಟಾಂಡಿಂಗ್ ಡರ್ಟ್ ರೆಸಿಸ್ಟೆನ್ಸ್, ಕ್ರಾಕ್ ಬ್ರಿಡ್ಜ್- ಎಬಿಲಿಟಿ ಮತ್ತು ಹೈ ಸ್ಕ್ರಬ್ ರೆಸಿಸ್ಟೆನ್ಸ್ ಗುಣಗಳನ್ನು ಹೊಂದಿರುವ ಆವಿಷ್ಕಾರಕ ಪೇಂಟ್ಸ್ ಒದಗಿಸಲು ನೆರವಾಗುತ್ತದೆ. ಗ್ರಾಹಕರು ಬಿರ್ಲಾ ಒಪಸ್ ಲಕ್ಷುರಿ ಉತ್ಪನ್ನಗಳಿಂದ ಪೇಂಟ್ ಮಾಡಿದಾಗ ಯಾವುದೇ ಪೀಠೋಪಕರಣದ ಗುರುತುಗಳು ಉಳಿಯುವುದಿಲ್ಲ. ಸಾಲ್ವೆಂಟ್ ಆಧರಿಸಿದ ಪೇಂಟ್ ಗಳು ಆಂತರಿಕ ರೆಸಿನ್ ಗಳನ್ನು ವಿಶೇಷ ಡಿಸೈನರ್ ಮಾಲಿಕ್ಯೂಲ್ ಗಳೊಂದಿಗೆ ಬಳಸುವ ಮೂಲಕ ಕರೋಷನ್ ರೆಸಿಸ್ಟೆನ್ಸ್, ಉತ್ತಮ ದೀರ್ಘಬಾಳಿಕೆ, ವೇಗದ ಒಣಗುವಿಕೆ ಮತ್ತು ಉನ್ನತ ಹೊಳಪು ನೀಡುತ್ತವೆ. ಈ ಪೇಂಟ್ ಬಳಕೆಯಲ್ಲಿ ಲಿಕ್ವಿಡ್ ಡಿಸ್ಚಾರ್ಜ್ ಶೂನ್ಯವಾಗಿದ್ದು ಪೂರ್ಣ ಸುಸ್ಥಿರವಾಗಿದೆ ಮತ್ತು 4ನೇ ತಲೆಮಾರಿನ ಉತ್ಪಾದನಾ ತಂತ್ರಜ್ಞಾನವು ಪೂರೈಕೆ ಸರಣಿಯನ್ನು ಮಿಂಚಿನ ವೇಗದಲ್ಲಿ ನಿರ್ವಹಿಸುವ ಮೂಲಕ ಶೂನ್ಯ ದೋಷಗಳು ಮತ್ತು ಎಂಡ್-ಟು-ಎಂಡ್ ಟ್ರೇಸಬಿಲಿಟಿ ಇದರ ವೈಶಿಷ್ಟ್ಯತೆ.
ಆದಿತ್ಯ ಬಿರ್ಲಾ ಸಮೂಹದ ನಿರ್ದೇಶಕ ಹಿಮಾನ್ಷು ಕಪಾನಿಯಾ ಮಾತನಾಡಿ, “ಬಿರ್ಲಾ ಒಪಸ್ ಪೇಂಟ್ಸ್ ತೀವ್ರಗತಿಯ ಪ್ರಗತಿಯನ್ನು ಸಾಧಿಸುತ್ತಿದೆ. 6 ಯೋಜಿತ ಘಟಕಗಳಲ್ಲಿ ಪಾಣಿಪತ್, ಲೂಧಿಯಾನ, ಚೆಯ್ಯಾರ್ ಮತ್ತು ಚಾಮರಾಜನಗರಗಳಲ್ಲಿ 4 ಸ್ಟೇಟ್-ಆಫ್-ದಿ-ಆರ್ಟ್, ಫುಲ್ಲಿ ಆಟೊಮೇಟೆಡ್ ಉತ್ಪಾದನಾ ಘಟಕಗಳು ಈ ಕಾರ್ಯಾಚರಣೆ ಮಾಡುತ್ತಿದ್ದು ನಾವು ಹೆಚ್ಚಿನ ಪೂರೈಕೆ ಸಾಮರ್ಥ್ಯದ ಬೇಡಿಕೆ ಪೂರೈಸಲು ಸನ್ನದ್ಧರಾಗಿದ್ದೇವೆ. ನಮ್ಮ ನಾಲ್ಕನೇ ಘಟಕದ ಉದ್ಘಾಟನೆಯು ಪ್ರಮುಖ ಮೈಲಿಗಲ್ಲಾಗಿದ್ದು ಪ್ರಗತಿಗೆ ನಮ್ಮ ಬದ್ಧತೆಯನ್ನು ಮರು ದೃಢೀಕರಿಸುತ್ತದೆ” ಎಂದರು.
ಬಿಡುಗಡೆಯ ಸಂದರ್ಭದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 145+ ಉತ್ಪನ್ನಗಳ ವಿಸ್ತಾರ ಶ್ರೇಣಿ ಮತ್ತು 1,200 ಎಸ್.ಕೆ.ಯು.ಗಳನ್ನು ವಾಟರ್ ಬೇಸ್ಡ್ ಪೇಂಟ್ಸ್, ಎನಾಮಲ್ ಪೇಂಟ್, ವುಡ್ ಫಿನಿಷ್ ಗಳು, ವಾಟರ್ ಪ್ರೂಫಿಂಗ್ ಮತ್ತು ವಾಲ್ ಪೇಪರ್ ಗಳಲ್ಲಿ ಒಳಗೊಂಡಿದೆ. ಸೆಪ್ಟೆಂಬರ್ 2024ರ ಅಂತ್ಯಕ್ಕೆ ಕಂಪನಿಯು 900 ಎಸ್.ಕೆ.ಯು.ಗಳಲ್ಲಿ ಯೋಜಿಸಿದ್ದ 145+ಉತ್ಪನ್ನಗಳಲ್ಲಿ ಈಗಾಗಲೇ 129 ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಚಾಮರಾಜನಗರ ಘಟಕದ ಪ್ರಾರಂಭವು ಬಿರ್ಲಾ ಒಪಸ್ ಪೇಂಟ್ಸ್ ಗೆ ತನ್ನ ಉತ್ಪನ್ನದ ವ್ಯಾಪ್ತಿಯನ್ನು ಇಂಡಿಯನ್ ಪಿಯು ವುಡ್ ಫಿನಿಷ್, ಸ್ಪೆಷಲ್ ಫ್ಯಾಕ್ಟರಿ ಮೇಡ್ ಶೇಡ್ಸ್ ಆಫ್ ಎನಾಮಲ್ಸ್ ಅಲ್ಲದೆ ಉತ್ತಮ ಪೂರೈಕೆಗೆ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆ ಮಾಡಿದೆ. ಈ ಉತ್ಪನ್ನದ ಗುಣಮಟ್ಟ ಈಗಾಗಲೇ ಗ್ರಾಹಕರು ಹಾಗೂ ಪೇಂಟರ್ ಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದು ತಿಂಗಳಿಂದ ತಿಂಗಳಿಗೆ ಸದೃಢ ಪ್ರಗತಿ ದಾಖಲಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.