ಬಿಜೆಪಿ, ಆರೆಸ್ಸೆಸ್‌ನವರೇ ಉಗ್ರರು
Team Udayavani, Jan 11, 2018, 6:10 AM IST
ಚಾಮರಾಜನಗರ: ಬಿಜೆಪಿ, ಭಜರಂಗದಳ ಹಾಗೂ ಆರ್‌ಎಸ್‌ಎಸ್ ನವರೇ ಒಂದು ರೀತಿಯಲ್ಲಿ ಉಗ್ರಗಾಮಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದರು. ರುದ್ರೇಶ್ ಕೊಲೆ ಪ್ರಕರಣದಲ್ಲಿ ಪಿಎಫ್ಐ, ಎಸ್‌ಡಿಪಿಐ ಕೈವಾಡವಿದ್ದು, ರಾಜ್ಯ ಸರ್ಕಾರ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಆ ಸಂಘಟನೆಗಳನ್ನು ನಿಷೇಧಿಸಲು ಹಿಂದೇಟು ಹಾಕುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬಿಜೆಪಿ, ಆರ್‌ಎಸ್‌ಎಸ್, ಭಜರಂಗದಳದವರಲ್ಲೂ ಉಗ್ರಗಾಮಿಗಳಿದ್ದಾರೆ. ಯಾರೇ ಆಗಲಿ, ಉಗ್ರಗಾಮಿಗಳಾಗಿ ಕೆಲಸ ಮಾಡುತ್ತಿದ್ದರೆ, ಸಮಾಜದ ಸಾಮರಸ್ಯ ಕೆಡಿಸಲು ಯತ್ನಿಸುತ್ತಿದ್ದರೆ, ಅಂಥವರನ್ನು ಸರ್ಕಾರ ಸಹಿಸಲ್ಲ. ಅದು ಪಿಎಫ್ಐ, ಎಸ್‌ಡಿಪಿಐ ಅಥವಾ ಆರ್‌ಎಸ್‌ಎಸ್ ಯಾರೂ ಆಗಿರಬಹುದು. ಸಾಮರಸ್ಯ ಕದಡಿದರೆ ಕ್ರಮ ಕೈಗೊಳ್ಳುತ್ತೆàವೆ. ಆದರೆ, ಈಗ ಈ ಬಗ್ಗೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದರು.
ಶಾಗೆ ತಿರುಗೇಟು: ಬಳಿಕ, ಕೊಳ್ಳೇಗಾಲದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಅಮಿತ್ ಶಾ ವಿರುದಟಛಿ ಹರಿಹಾಯ್ದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿರುವುದು ರಾಜ್ಯ ಸರ್ಕಾರದ ತೆರಿಗೆಯ ಪಾಲು. ಕೇಂದ್ರ ಸರ್ಕಾರ ತನ್ನ ಕೈಯಿಂದ ಹಣ ನೀಡುತ್ತಿಲ್ಲ. ಆದರೆ, ರಾಜ್ಯದ ಬಿಜೆಪಿ ನಾಯಕರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಹಣದಿಂದ ನಡೆಯುತ್ತಿದೆ ಎಂದು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಹಣದಿಂದ ಆಡಳಿತ ನಡೆಸುತ್ತಿಲ್ಲ. ಸಂವಿಧಾನಬದಟಛಿವಾದ ಪಾಲನ್ನು ಪಡೆದುಕೊಂಡು ಆಡಳಿತ ನಡೆಸುತ್ತಿದೆ ಎಂದು ತಿರುಗೇಟು ನೀಡಿದರು.
ರಾಜ್ಯದ ಬಿಜೆಪಿ ಮುಖಂಡರಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವ ಬಗ್ಗೆ ಪಾಠ ಹೇಳಬೇಕಾದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಜಾತಿಯತೆ, ಅಶಾಂತಿ, ಕೋಮು ಗಲಭೆ ಸೃಷ್ಟಿಸುವಂತೆ ಹೇಳಿಕೊಡುತ್ತಿರುವುದು ಸರಿಯಲ್ಲ. ಅದೊಂದು ನೀಚ ರಾಜಕಾರಣ ಎಂದು ಟೀಕಿಸಿದರು.
ನಾನು ಯಾವಾಗಲೂ ಹಿಂದು: “ನಾನು ಯಾವಾಗಲೂ ಹಿಂದೂ ಆಗಿದ್ದೇನೆ. ಆದರೆ, ಅದನ್ನು ರಾಜಕೀಯಕ್ಕೆ ಬಳಸಿಲ್ಲ. ಧರ್ಮ ಮತ್ತು ಜಾತಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಬಿಜೆಪಿಯವರಿಗೆ ಜನರಿಗಾಗಿ ಇಂಥ ಅಭಿವೃದಿಟಛಿ ಕೆಲಸ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಏನೂ ಇಲ್ಲ. ಅದಕ್ಕೆ ಈಗ ಹಿಂದುತ್ವ ಅಂಥ ಶುರು ಮಾಡಿಕೊಂಡಿದ್ದಾರೆ.
ಹಿಂದು ಅವರು ಮಾತ್ರವಲ್ಲ. ನಾನೂ ಹಿಂದೂನೇ. ಆದರೆ, ಮನುಷ್ಯತ್ವ ಇರುವ ಹಿಂದು. ಆದರೆ, ಅವರು ಮನುಷ್ಯತ್ವ ಇಲ್ಲದ ಹಿಂದೂಗಳು. ಅಷ್ಟೇ ನನಗೂ, ಅವರಿಗೂ ಇರೋ ವ್ಯತ್ಯಾಸ’ ಎಂದರು.”ಇಲ್ಲಿ ಕೂತಿರೋರೆಲ್ಲ ಹಿಂದೂಗಳಲ್ವಾ? ಏನ್ ಅವರು ಮಾತ್ರ ಹಿಂದೂಗಳಾ? ನನ್ನ ಹೆಸರೇನಪ್ಪಾ? ಸಿದ್ದರಾಮಯ್ಯ. ಧ್ರುವ. ನಾರಾಯಣ. ಹೆಸರಲ್ಲೇ ನಾರಾಯಣ ಇದೆ. ನಾವೆಲ್ಲ ಹಿಂದೂಗಳೇ ಅಲ್ವಾ’ ಎಂದು ಸೇರಿದ್ದ ಪ್ರೇಕ್ಷಕರಿಗೇ ಪ್ರಶ್ನೆ ಕೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
MUST WATCH
ಹೊಸ ಸೇರ್ಪಡೆ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.