ಅಭಿವೃದ್ಧಿ ಬಗ್ಗೆ ಯೋಚಿಸದ ಬಿಜೆಪಿ
Team Udayavani, Apr 9, 2019, 3:00 AM IST
ಚಾಮರಾಜನಗರ: ಬಿಜೆಪಿಗೆ ಅಭಿವೃದ್ಧಿ ಬಗ್ಗೆ ಯಾವುದೇ ಚಿಂತನೆ ಇಲ್ಲ. ಜನರ ಭಾವನೆಗಳನ್ನು ಕೆರಳಿಸುವ ವಿಚಾರಗಳನ್ನು ಹರಡುತ್ತಾ ಚುನಾವಣೆ ಎದುರಿಸುತ್ತಿದೆ ಎಂದು ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜ ಟೀಕಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ದೇಶದಲ್ಲಿ ಶೇ. 17ರಷ್ಟು ಅಲ್ಪಸಂಖ್ಯಾತರಿದ್ದು ಅವರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದರು.
ಬಿಜೆಪಿಯಿಂದ ತಾರತಮ್ಯ: ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ 2280 ಕೋಟಿ ನೀಡಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಆಡಳಿತದಲ್ಲಿ ಕೇವಲ 200 ಕೋಟಿ ನೀಡಿದ್ದರು. ಬಿಜೆಪಿಯ ತಾರತಮ್ಯ ನೀತಿ ಇದರಲ್ಲೇ ಅರ್ಥವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂಬು ವಿಭಜನೆ ಮಾಡುತ್ತಿದ್ದಾರೆ.
ಪ್ರಧಾನಿಯೊಬ್ಬರು ಈ ರೀತಿಯಾಗಿ ತಮ್ಮ ದೇಶದ ನಾಗರಿಕರನ್ನು ಪ್ರತ್ಯೇಕಿಸಿ ಮಾತನಾಡುವುದು ಅವರಿಗೆ ಶೋಭೆ ತರುವಂಥದ್ದಲ್ಲ. ದೇಶವನ್ನು ವಿಭಜನೆ ಮಾಡಬೇಡಿ. ದೇಶದ ಸಂವಿಧಾನದ ಬಗ್ಗೆ ನಿಮಗೆ ನಂಬಿಕೆಯಿಲ್ಲ ಎಂದು ಅವರು ಆರೋಪಿಸಿದರು.
ಧ್ರುವ ಬಗ್ಗೆ ಉತ್ತಮ ಅಭಿಪ್ರಾಯ: ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳು ರಾಜ್ಯದಲ್ಲಿ 22 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ. ಚಾ.ನಗರ ಅಭ್ಯರ್ಥಿ ಧ್ರುವನಾರಾಯಣ ಜನರ ಮಧ್ಯೆ ಇರುವ ರಾಜ್ಯದ ನಂ.1 ಸಂಸದ. ಸಚಿವರಾಗಿದ್ದ ದಿ.ಅನಂತಕುಮಾರ್ ಅವರೇ ಅವರನ್ನು ಉತ್ತಮ ಸಂಸದ ಎಂದು ಶ್ಲಾ ಸಿದ್ದರು. ಬಿಜೆಪಿಯವರೇ ಹೀಗೆ ಹೇಳುವಾಗ, ಜನ ಸಾಮಾನ್ಯರಿಗೆ ಧ್ರುವ ಅವರ ಕೆಲಸದ ಬಗ್ಗೆ ಉತ್ತಮ ಅಭಿಪ್ರಾಯವಿದೆ ಎಂದರು.
ಜನರ ಒಲವು ಮೃತ್ರಿ ಪಕ್ಷದತ್ತ: ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದು, ಜನರ ಒಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಪರವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹುಮತದಿಂದ ಅಧಿಕಾರಕ್ಕೆ ತರಬೇಕಿತ್ತು ಎಂಬುದು ಜನರ ಮನಸ್ಸಿನಲ್ಲಿದೆ. ಕಾಂಗ್ರೆಸ್ ಸೋಲಿಸಿದ್ದ ನೋವು ಜನರ ಮನಸ್ಸಿನಲ್ಲಿ ಕಾಣುತ್ತಿದೆ. ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ ಪರ ಮತ ಹಾಕಬೇಕು ಎಂದು ಮತದಾರರು ಮನಸ್ಸು ಮಾಡಿದ್ದಾರೆ ಎಂದರು.
ಪೋಳ್ಳು ಭರವಸೆ ನೀಡುವ ಮೋದಿ: ಬಿಜೆಪಿ ಅಧಿಕಾರದಲ್ಲಿದ್ದಾಗ ಐದು ವರ್ಷ ಕೆಲಸ ಮಾಡಲಿಲ್ಲ. ಜನರಿಗೆ ನೀಡಿದ್ದ ಆಶ್ವಾಸನೆ ಈಡೇರಿಸಲಿಲ್ಲ. ಬಿಜೆಪಿ ಮತ ಕೇಳಲು ಯಾವುದೇ ಬಂಡವಾಳ ಇಲ್ಲದೇ ಚುನಾವಣೆ ಎದುರಿಸುವಂತಾಗಿದೆ. ಜನರ ಮುಂದೆ ಬಿಜೆಪಿ ಕೆಲಸದ ಮೇಲೆ ಚರ್ಚೆಗೆ ಬರಲು ಸಿದ್ದವಿಲ್ಲ. ಭಯೋತ್ಪಾದಕರ ಮತ್ತು ಸೈನಿಕರ ನಡುವೆ ನಡೆದ ಸರ್ಜಿಕಲ್ ಸ್ಟ್ರೈಕ್ ಅನ್ನು ಬಿಜೆಪಿ ಬಂಡವಾಳ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ದೇಶದ ಚೌಕಿದಾರ್ ಎಂದು ಹೇಳುತ್ತಿದ್ದಾರೆ. ಜನರ ಭರವಸೆ ಈಡೇರಿಸದೇ ವಿವಿಧ ಬಣ್ಣಗಳಲ್ಲಿ ಜನರ ಬಳಿಗೆ ಬರುತ್ತಿದ್ದಾರೆ. ಇದು ಜನರಿಗೆ ತಿಳಿದಿದ್ದು, ಬಿಜೆಪಿ ವಿರುದ್ದ ಮತ ಚಲಾಯಿಸಲಿದ್ದಾರೆ ಎಂದು ಡಿಸೋಜ ಹೇಳಿದರು. ತಾಪಂ ಮಾಜಿ ಸದಸ್ಯ ರಾಜು, ಮುಖಂಡರಾದ ಸೈಯದ್, ಪಿಯೂಷ್, ಪತ್ರಿಕಾ ಕಾರ್ಯದರ್ಶಿ ಅರುಣ್ ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
MUST WATCH
ಹೊಸ ಸೇರ್ಪಡೆ
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.