ರೈತರೇ, ಬೆಳಗ್ಗೆ 8ರೊಳಗೆ ಎಪಿಎಂಸಿಗೆ ಬೆಳೆ ತನ್ನಿ
Team Udayavani, Apr 28, 2021, 4:13 PM IST
ಗುಂಡ್ಲುಪೇಟೆ: ರಾಜ್ಯ ಸರ್ಕಾರದ ಆದೇಶದ ಮೇರೆಗೆಬುಧವಾರ(ಆ.28)ದಿಂದ 15 ದಿನಗಳ ಕಾಲ ಗುಂಡ್ಲುಪೇಟೆಹಾಗೂ ತೆರಕಣಾಂಬಿ ಕೃಷಿ ಉತ್ಪನ್ನ ಮಾರುಕಟ್ಟೆ ಬೆಳಗ್ಗೆ 10ಗಂಟೆಗೆ ಬಾಗಿಲು ಮುಚ್ಚಲಿದೆ. ಸಾಮಾನ್ಯ ದಿನಗಳಲ್ಲಿ ರಾತ್ರಿ7.30ರ ವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗಿತ್ತು.
ಇದೀಗ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಬೆಳಗ್ಗೆ10ಗಂಟೆಗೆ ಮಾರುಕಟ್ಟೆ ಬಂದ್ ಆಗಲಿದ್ದು, ಇದಕ್ಕಾಗಿ ರೈತರುತಮ್ಮ ಉತ್ಪನ್ನಗಳನ್ನು ಬೆಳಗ್ಗೆ 8 ಗಂಟೆಯೊಳಗೆ ತರಬೇಕಿದೆ.ಕೊರೊನಾ 2ನೇ ಅಲೆ ತಡೆಗೆ ಸರ್ಕಾರ 15 ದಿನಗಳ ಲಾಕ್‌ಡೌನ್ ಘೋಷಣೆ ಮಾಡಿರುವ ಹಿನ್ನೆಲೆ ಈ ನಿಯಮ ಜಾರಿಯಲ್ಲಿರಲಿದ್ದು, ಇದಕ್ಕೆ ತಕ್ಕಂತೆ ರೈತರು ತಮ್ಮ ತರಕಾರಿಗಳನ್ನುಮಾರುಕಟ್ಟೆಗೆ ತರಲು ಮಾರುಕಟ್ಟೆ ಆಡಳಿತ ಸೂಚಿಸಿದೆ.
ಪ್ರತಿದಿನ ಬೆಳಗ್ಗೆ 10 ಗಂಟೆಗೆ ಮಾರುಕಟ್ಟೆ ಮುಚ್ಚುವ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಬೆಳಗ್ಗೆ 8 ಗಂಟೆಯೊಳಗೆತರಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿನಾಗೇಂದ್ರ ಮಾಹಿತಿ ನೀಡಿದರು.
ಗೇಟ್ ಮುಂದೆ ಕೈ ತೊಳೆಯುವ ವ್ಯವಸ್ಥೆ: ಮಾರುಕಟ್ಟೆಗೆಆಗುಸುವ ರೈತರು, ವರ್ತಕರಿಗೆ ಗೇಟ್ ಮುಂದೆ ಸೋಪಿನಿಂದಕೈ ತೊಳೆಯುವ ವ್ಯವಸ್ಥೆ ಮಾಡಲಾಗಿದ್ದು, ಕಡ್ಡಾಯವಾಗಿ ಕೈಸ್ವತ್ಛಗೊಳಿಸಬೇಕು. ನಂತರ ಸ್ಯಾನಿಟೈಸರ್ ಇಡಲಾಗಿದ್ದು, ಇದರಬಳಕೆ ನಂತರವೇ ಮಾರುಕಟ್ಟೆ ಒಳಗೆ ಬರಬೇಕಾಗಿದೆ.
ಮಂಡಿಗಳಲ್ಲಿ ಅಂತರ ಕಡ್ಡಾಯ: ನಿತ್ಯ ಮಾರುಕಟ್ಟೆಗೆ ತರಕಾರಿತರುವ ರೈತರು ಮಂಡಿಯವರು ನಿಗದಿ ಪಡಿಸಿದ ಜಾಗದಲ್ಲಿವಹಿವಾಟು ನಡೆಸಬೇಕು. ಇದಕ್ಕೆ ಒಂದೊಂದು ಅಡಿಗಳಿಗೆಬಾಕ್ಸ್ ಹಾಕಲಾಗಿದ್ದು, ಈ ನಿಯಮಾನುಸಾರವೇ ವ್ಯವಹರಿಸಬೇಕಾಗಿದೆ. ಮಾರುಕಟ್ಟೆಯಲ್ಲಿ ಕೊರೋನಾ 2ನೇ ಅಲೆಹಿನ್ನೆಲೆಯಲ್ಲಿ ಮಾರ್ಗಸೂಚಿ ಪಾಲಿಸಲು ಸಾರ್ವಜನಿಕರಿಗೆಮೈಕ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಲಸಿಕಾ ಕೇಂದ್ರ: ಕಳೆದ ಒಂದು ವಾರದಿಂದಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೋಡ್ ಲಸಿಕಾಕೇಂದ್ರ ತೆರೆಯಲಾಗಿದೆ. ಲಸಿಕೆ ಪಡೆಯದ ರೈತರು ತಮ್ಮ ಆಧಾರ್‌ಕಾರ್ಡ್ ತೋರಿಸಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಬಹುದು.ರ್ಕಾರದ ಹೊಸ ಮಾರ್ಗಸೂಚಿ ಅನ್ವಯಬುಧವಾರದಿಂದ ಬೆಳಗ್ಗೆ 10 ಗಂಟೆಗೆ ಮಾರುಕಟ್ಟೆಬಂದ್ ಆಗುವ ಹಿನ್ನೆಲೆಯಲ್ಲಿ ರೈತರು ನಿಗದಿತ ಸಮಯದಲ್ಲಿ ತರಕಾರಿ ವಹಿವಾಟು ನಡೆಸಬೇಕು. ಈ ನಿಯಮಮುಂದಿನ 15 ದಿನಗಳ ಕಾಲ ಜಾರಿಯಲ್ಲಿರಲಿದೆ.
ನಾಗೇಂದ್ರ, ಕಾರ್ಯದರ್ಶಿ ಎಪಿಎಂಸಿ ಗುಂಡ್ಲುಪೇಟೆ
ಬಸವರಾಜು ಎಸ್.ಹಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.